ನಟ ಕಿಚ್ಚ ಸುದೀಪ್(Kiccha Sudeep) ಅವರನ್ನು ಸಾವಿರಾರೂ ಜನರ ಮಧ್ಯೆ ಪುಟ್ಟ ಹುಡುಗಿಯೊಬ್ಬಳು ಜೋರಾಗಿ ಕಿಚ್ಚ ಎಂದು ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣ(Social Media) ದಲ್ಲಿ ವೈರಲ್ ಆಗಿದೆ. ಜೊತೆಗೆ ಅಭಿಮಾನವನ್ನು ಮೆಚ್ಚಿ ಕಿಚ್ಚ ಸುದೀಪ್ ಈ ಪುಟ್ಟ ಹುಡುಗಿಯನ್ನು ಮುದ್ದಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋವನ್ನು ಮಾರ್ಚ್ 11ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ ಮೂರೇ ದಿನಗಳಲ್ಲಿ ಲಕ್ಷಾಂತರ ಜನರನ್ನು ತಲುಪಿದೆ. ಆ ಪೋಸ್ಟ್ ಇಲ್ಲಿದೆ ನೋಡಿ.
ಈ ವಿಡಿಯೋವನ್ನು ಮಾರ್ಚ್ 11ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. @attitude__kiccha ಎಂಬ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಳ್ಳಲಾದ ಈ ವಿಡಿಯೋ ಮೂರೇ ದಿನಗಳಲ್ಲಿ ಲಕ್ಷಾಂತರ ಜನರನ್ನು ತಲುಪಿದೆ. ಈ ವಿಡಿಯೋ 2,330,764 ವೀಕ್ಷಣೆ ಪಡೆದಿದ್ದು, ಸಾಕಷ್ಟು ಲೈಕ್, ಕಾಮೆಂಟ್ ಹಾಗೂ ಶೇರ್ ಪಡೆದುಕೊಂಡಿದೆ.
ಇದನ್ನೂ ಓದಿ: ಯುವಕರೇ ನಾಚಿ ನೀರಾಗುವಂತೆ ಜಿಮ್ನಲ್ಲಿ ಫಿಟ್ನೆಸ್ ಮೆಂಟೇನ್ ಮಾಡುತ್ತಿರುವ 103ರ ವಯಸ್ಸಿನ ಅಜ್ಜಿ
ವಿಡಿಯೋದಲ್ಲಿ ಪುಟ್ಟ ಹುಡುಗಿ ಜೋರಾಗಿ ಕಿಚ್ಚ ಎಂದು ಸಾವಿರಾರೂ ಜನಗಳ ಮಧ್ಯೆ ಕರೆಯುವುದನ್ನು ಕಾಣಬಹುದು. ಇನ್ನೊಂದು ಕ್ಲಿಪ್ನಲ್ಲಿ ಮಗುವಿನ ಅಭಿಮಾನವನ್ನು ಮೆಚ್ಚಿ ಸುದೀಪ್ ಮಗುವನ್ನು ಮುದ್ದಾಡುವುದನ್ನು ಕಾಣಬಹುದು. ಸುದೀಪ್ ಅವರ ಅಭಿಮಾನಿಗಳ ಮನಗೆದ್ದಿರುವ ಈ ಪುಟ್ಟ ಹುಡುಗಿಯ ಬಗ್ಗೆ ಸಾಕಷ್ಟು ಶ್ಲಾಘನೆ ವ್ಯಕ್ತವಾಗಿದೆ. ಜೊತೆಗೆ ಸಾಕಷ್ಟು ಸುದೀಪ್ ಅಭಿಮಾನಿಗಳು ಇದು ನಮ್ಮ ಕಿಚ್ಚಾ ಬಾಸ್ ಪವರ್ ಅಂತಾ ಕಾಮೆಂಟ್ ಮಾಡಿದ್ದಾರೆ. ಇದಲ್ಲದೇ ಜೈ ಕಿಚ್ಚ ಬಾಸ್ ಅಂತ ಸಾಕಷ್ಟು ಪ್ರತಿಕ್ರಿಯೆಗಳನ್ನು ಕಾಣಬಹುದಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:58 pm, Tue, 14 March 23