ನದಿಯಲ್ಲಿ ವ್ಯಕ್ತಿಯ ದೀರ್ಘ ನಿದ್ರೆ; ಮಲಗಿದ್ದ ವ್ಯಕ್ತಿಯನ್ನು ನೋಡಿ ಮೃತದೇಹ ಎಂದು ಭಾವಿಸಿ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ!

| Updated By: shruti hegde

Updated on: Aug 23, 2021 | 11:18 AM

ಆಗಸ್ಟ್ 18ನೇ ತಾರೀಕಿನಂದು ನದಿಯ ನೀರಿನ ದಡದಲ್ಲಿ ವ್ಯಕ್ತಿ ಮಲಗಿದ್ದಾನೆ. ಹಲವು ಗಂಟೆಗಳವರೆಗೆ ಆತ ಹಾಗೆಯೇ ಮಲಗಿದ್ದ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.

ನದಿಯಲ್ಲಿ ವ್ಯಕ್ತಿಯ ದೀರ್ಘ ನಿದ್ರೆ; ಮಲಗಿದ್ದ ವ್ಯಕ್ತಿಯನ್ನು ನೋಡಿ ಮೃತದೇಹ ಎಂದು ಭಾವಿಸಿ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ!
ಮಲಗಿದ್ದ ವ್ಯಕ್ತಿಯನ್ನು ನೋಡಿ ಮೃತದೇಹ ಎಂದು ಭಾವಿಸಿ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ!
Follow us on

ನದಿಯ ದಡದಲ್ಲಿ ಮಲಗಿದ್ದ ವ್ಯಕ್ತಿಯನ್ನು ನೋಡಿ ಮೃತದೇಹ ಎಂದು ಭಾವಿಸಿ ರಕ್ಷಣಾ ತಂಡವು ಸ್ಥಳಕ್ಕೆ ಆಗಮಿಸಿದೆ. ಘಟನೆ ಅಮೆರಿಕದ ಅರ್ಕಾನ್ಸಾಸ್​ನಲ್ಲಿ ನಡೆದಿದೆ. ವ್ಯಕ್ತಿಯನ್ನು ತಳ್ಳುತ್ತಿದ್ದಂತೆಯೇ ವ್ಯಕ್ತಿ ಎದ್ದು ನಿಂತಿದ್ದಾನೆ. ವ್ಯಕ್ತಿ ಸತ್ತಿಲ್ಲ ಬದುಕಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.

ಆಗಸ್ಟ್ 18ನೇ ತಾರೀಕಿನಂದು ನದಿಯ ನೀರಿನ ದಡದಲ್ಲಿ ವ್ಯಕ್ತಿ ಮಲಗಿದ್ದಾನೆ. ಹಲವು ಗಂಟೆಗಳವರೆಗೆ ಆತ ಹಾಗೆಯೇ ಮಲಗಿದ್ದ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ. ವ್ಯಕ್ತಿಯ ಮೃತದೇಹ ಎಂದು ಭಾವಿಸಿ ರಕ್ಷಣಾ ಸಿಬ್ಬಂದಿ, ಪೊಲೀಸರು ಹಾಗೂ ತುರ್ತು ವೈದ್ಯಕೀಯ ಸೇವೆ ತಂಡ ಘಟನಾ ಸ್ಥಳಕ್ಕೆ ಆಗಮಿಸಿದೆ.

ಸಣ್ಣ ದೋಣಿಯಲ್ಲಿ ರಕ್ಷಣಾ ತಂಡವು ವ್ಯಕ್ತಿ ಬಳಿ ತಲುಪುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಕ್ತಿಯನ್ನು ತಳ್ಳುತ್ತಿದ್ದಂತೆಯೇ ಎದ್ದು ನಿಂತುಕೊಂಡಿದ್ದನ್ನು ನೋಡಿ ನದಿಯ ದಡದಲ್ಲಿದ್ದ ವ್ಯಕ್ತಿ ಜೀವಂತವಾಗಿದ್ದಾನೆ, ಆತ ದೀರ್ಘವಾಗಿ ನಿದ್ರಿಸುತ್ತಿದ್ದ ಎಂಬುದು ತಿಳಿದು ಬಂದಿದೆ.

ಅಗ್ನಿಶಾಮಕ ಇಲಾಖೆ ಟ್ವೀಟ್ ಮೂಲಕ ಜನರನ್ನು ಎಚ್ಚರಿಸಿದೆ. ಆಳವಿಲ್ಲದಿದ್ದರೂ ಕೂಡಾ ನೀರು ತುಂಬಾ ಅಪಾಯಕಾರಿ. ನದಿಯ ನೀರಿನಿಂದ ತಂಪಾದ ಅನುಭವ ಪಡೆಯಲು ಬೇರೆ ಮಾರ್ಗಗಳನ್ನು ಪಡೆದುಕೊಳ್ಳಿ. ನದಿಯ ದಡದಲ್ಲಿ ಎಚ್ಚರವಿಲ್ಲದೆ ಮಲಗುವುದು ಹೆಚ್ಚು ಅಪಾಯಕಾರಿ ಎಂದು ಹೇಳಿದೆ.

ಇದನ್ನೂ ಓದಿ:

Shocking Video: ಜನರಿಗೆ ನೀಡುವ ನೀರಿನಲ್ಲಿ ಮೂತ್ರ ಸೇರಿಸಿದ ಪಾನಿಪುರಿ ವ್ಯಾಪಾರಸ್ತ; ಅಸಹ್ಯಕರ ವಿಡಿಯೋ ವೈರಲ್!

Shocking Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ; ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು

(The long sleep of the man in the river The rescue team arrived at the scene looking at the man who had fallen asleep)