ಮಹೀಂದ್ರಾ XUV700, “Autopilot mode” ಅಂದರೆ ಡೈವರ್ ಇಲ್ಲದೇ ಗಾಡಿ ಚಲಾಯಿಸುವ ಹೊಸ ಫೀಚರ್ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋ ಇದೀಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ 5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ವಿಡಿಯೋದಲ್ಲಿ ಮಹೀಂದ್ರಾ XUV700 ಕಾರಿನಲ್ಲಿ ಚಾಲಕನ ಸೀಟನ್ನು ಖಾಲಿ ಬಿಟ್ಟಿದ್ದು, ಪಕ್ಕದ ಸೀಟಿನಲ್ಲಿ ಪ್ರಯಾಣಿಕ ಆರಾಮವಾಗಿ ವಿಶ್ರಾಂತಿಸುತ್ತಿರುವುದನ್ನು ಕಾಣಬಹುದು. ಇದು ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದಂತೆ, ಸಾಕಷ್ಟು ಟೀಕೆಗೆ ಕಾರಣವಾಗಿದೆ. ಕಾರನ್ನು ಯಾರು ಚಲಾಯಿಸುತ್ತಿದ್ದಾರೆ, ದೆವ್ವದ ಕಾಟವೋ? ಎಂದು ಬಳಕೆದಾರೊಬ್ಬರು ಕಾಮೆಂಟ್ ಮಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
ತಿರುವಿನ ಹೆದ್ದಾರಿಯಲ್ಲೂ ಯಾವುದೇ ವ್ಯಕ್ತಿಯ ಸಹಾಯವಿಲ್ಲದೇ Autopilot modenನಲ್ಲಿ ಕಾರು ಚಲಿಸುವುದನ್ನು ಕಾಣಬಹುದು. ADAS(Advanced Driver Assistance System) ತಂತ್ರಜ್ಞಾನವನ್ನು ಬಳಸಲಾಗಿದೆ. ಈ ವಿಡಿಯೋ ಪ್ರಶಂಸೆಯನ್ನು ಪಡೆಯುವುದಕ್ಕಿಂತ ಸಾಕಷ್ಟು ಟೀಕೆಗೆ ಕಾರಣವಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಕಾರಿನ ಶೋರೂಮ್ನಿಂದ ಬಿಳಿ ಬಣ್ಣದ ಮಹೀಂದ್ರಾ XUV700 ಹೊರ ಬರುವುದನ್ನು ಕಾಣಬಹುದು. ಡೈವರ್ ಸೀಟ್ ಖಾಲಿಯಾಗಿದ್ದು, ತಿರುವಿನ ಹೆದ್ದಾರಿಯಲ್ಲಿ 90 kmph ವೇಗದಲ್ಲಿ ಕಾರು ಚಲಿಸುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಟಿಕೆಟ್ ಕೊಡುವಂತೆ ಕಿರುಕುಳ ನೀಡಿದ ಆರೋಪದಡಿ ಟಿಟಿಇ ಅಮಾನತು
ಜೊತೆಗೆ ವಿಡಿಯೋದಲ್ಲಿ “ಆಟೋಪೈಲಟ್ ಮೋಡ್” ಎಂದು ಕ್ಯಾಪ್ಷನ್ ಬರೆದಿರುವುದನ್ನು ಕಾಣಬಹುದು. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ 5 ಮಿಲಿಯನ್‌ಗಿಂತಲೂ ಹೆಚ್ಚಿನ ವೀಕ್ಷಣೆ ಗಳಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಒಬ್ಬರು, “ಇಂತಹ ವೀಡಿಯೊಗಳು ಮಾರಣಾಂತಿಕ ಅಪಘಾತಕ್ಕೆ ಕಾರಣವಾಗುತ್ತವೆ” ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರ, ” ನೀವು ಸಂಪೂರ್ಣವಾಗಿ ಅದರ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಈ ಕಾರನ್ನು ಯಾರು ಓಡಿಸುತ್ತಿದ್ದಾರೆ? ದೆವ್ವ ಇದೆಯೇ? ಎಂದು ಹಾಸ್ಯಸ್ಪದ ಕಾಮೆಂಟ್ ಕೂಡ ಕಾಣಬಹುದು.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:08 am, Thu, 16 March 23