Viral Post: ಫೋನ್ ಪೇ ಸ್ಕ್ಯಾನರ್ ಪ್ರಭಾವ ಎಷ್ಟಿದೆ ನೋಡಿ, ಇವರು ಡಿಜಿಟಲ್ ಭಿಕ್ಷುಕ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 07, 2024 | 2:16 PM

ಹೆಚ್ಚಾಗಿ ದೇವಸ್ಥಾನಗಳ ಬಳಿ, ರೈಲ್ವೇ ಸ್ಟೇಷನ್, ಬಸ್ ನಿಲ್ದಾಣಗಳ ಬಳಿ ಅದೇ ಕೊಳೆಯಾದ ಹರಕಲು ಬಟ್ಟೆಗಳನ್ನು ಧರಿಸಿ ಭಿಕ್ಷುಕರು ಭಿಕ್ಷೆ ಬೇಡುತ್ತಾ ಅಲ್ಲೇ ಬೀದಿ ಬೀದಿ ಸುತ್ತುತ್ತಿರುತ್ತಾರೆ. ಇವರ ಈ ಅಸಹಾಯಕ ಸ್ಥಿತಿಯನ್ನು  ಕಂಡು ಒಂದು ಹೊತ್ತಿನ ಊಟವಾದರೂ ಮಾಡಲಿ ಎಂದು ಕೆಲವೊಬ್ಬರು ಒಂದಷ್ಟು ಚಿಲ್ಲರೆ ಹಣವನ್ನು ಭಿಕ್ಷುಕರಿಗೆ ನೀಡುತ್ತಾರೆ. ಇನ್ನೂ ಕೆಲವರು ನನ್ನ ಬಳಿ ಚಿಲ್ಲರೆ ಹಣವಿಲ್ಲವೆಂದು ಹಣವನ್ನು ನೀಡದೆಯೇ ಹೋಗಿ ಬಿಡುತ್ತಾರೆ. ಅದಕ್ಕಾಗಿಯೇ ಈ ಚಿಲ್ಲರೆ ಹಣದ ಸಮಸ್ಯೆಯೇ ಬೇಡವೆಂದು   ಇಲ್ಲೊಬ್ಬ ಮಾಡ್ರನ್ ಭಿಕ್ಷುಕ  ಫೋನ್ ಪೇ ಸ್ಕ್ಯಾನರ್ ಹಿಡಿದು ಭಿಕ್ಷೆ ಬೇಡಲು ನಿಂತಿದ್ದಾನೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು,  ನಮ್ಮ ದೇಶವು ನಿಜವಾಗಿಯೂ ಡಿಜಿಟಲ್ ಆಗುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. 

Viral Post: ಫೋನ್ ಪೇ ಸ್ಕ್ಯಾನರ್ ಪ್ರಭಾವ ಎಷ್ಟಿದೆ ನೋಡಿ, ಇವರು ಡಿಜಿಟಲ್ ಭಿಕ್ಷುಕ
ವೈರಲ್​​ ಪೋಸ್ಟ್​​ ​
Follow us on

ಸಾಮಾನ್ಯವಾಗಿ ಈ ದೇವಸ್ಥಾನಗಳ ಬಳಿ, ರೈಲ್ವೇ ಸ್ಟೇಷನ್, ಬಸ್ ನಿಲ್ದಾಣಗಳ ಬಳಿ ಅದೇ ಕೊಳೆಯಾದ ಹರಕಲು ಬಟ್ಟೆಗಳನ್ನು ಧರಿಸಿ ಒಂದಷ್ಟು ಭಿಕ್ಷುಕರು  ಬಿಕ್ಷೆ ಬೇಡುತ್ತಿರುತ್ತಾರೆ. ಅದರಲ್ಲಿ ಬಹುತೇಕರು ಒಂದು ಸ್ಥಳದಲ್ಲಿ ಸುಮ್ಮನೆ ಕುಳಿತು ಭಿಕ್ಷೆ ಬೇಡುತ್ತಿದ್ದರೆ, ಇನ್ನೂ ಕೆಲವು ಭಿಕ್ಷುಕರು ತಮ್ಮ ಅಸಹಾಯಕತೆಯನ್ನು ಹೇಳಿಕೊಂಡು ಊಟಕ್ಕೆ ದುಡ್ಡುಕೊಡಿ ಅಂತ ಬೀದಿ ಬೀದಿ ಅಲೆಯುತ್ತಾ ಭಿಕ್ಷೆ ಬೇಡುತ್ತಿರುತ್ತಾರೆ. ಮತ್ತೆ ಕೆಲವು ಭಿಕ್ಷುಕರು ಮಗುವನ್ನು ಕಂಕುಳ ಜೋಳಿಗೆಯಲ್ಲಿ ಹಾಕಿಕೊಂಡು ಹಾಡುಗಳನ್ನು ಹಾಡುತ್ತಾ ಭಿಕ್ಷೆ ಬೇಡುತ್ತಿರುತ್ತಾರೆ. ಇವರ ಅಸಹಾಯಕತೆಯನ್ನು ನೋಡಲಾರದೆ ಕೆಲವೊಬ್ಬರು ಚಿಲ್ಲರೆ ಹಣವನ್ನು ಭಿಕ್ಷುಕರಿಗೆ ನೀಡುತ್ತಾರೆ. ಇನ್ನೂ ಕೆಲವರು ನನ್ನ ಬಳಿ ಚಿಲ್ಲರೆ ಹಣವಿಲ್ಲ ಅಂತ ಹೇಳಿ ಹಣ ಕೊಡದೆಯೇ ಹೊರಟು ಹೋಗುತ್ತಾರೆ. ಈ  ಚಿಲ್ಲರೆ ಹಣದ ಸಮಸ್ಯೆಯೇ ಬೇಡವೆಂದು ಇಲ್ಲೊಬ್ಬ ಭಿಕ್ಷುಕ ಫೋನ್ ಪೇ ಸ್ಕ್ಯಾನರ್  ಹಿಡಿದು ಭಿಕ್ಷೆ ಬೇಡಲು ನಿಂತಿದ್ದಾನೆ. ಈ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರತ ನಿಜವಾಗಿಯೂ ಡಿಜಿಟಲ್ ಆಗುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಹಲವು ವಿಷಯಗಳು ವೈರಲ್ ಆಗುತ್ತಿರುತ್ತವೆ, ಅದೇ ರೀತಿ ಇದೀಗ ಡಿಜಿಲಟ್ ಭಿಕ್ಷುಕನ ಫೋಟೊ ವೈರಲ್ ಆಗಿದೆ. ಈ ವೈರಲ್ ಪೋಸ್ಟ್ ಅನ್ನು ಸರ್ದಾರ್ ಲಕ್ಕಿ ಸಿಂಗ್ (@luckyschawla)  ಎಂಬವರು ತಮ್ಮ X  ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:


ಈ ವೈರಲ್ ಫೋಟೋದಲ್ಲಿ ಯಾವುದೋ ನಗರದ ಜನ ನಿಬಿಡ ಪ್ರದೇಶದಲ್ಲಿ ಭಿಕ್ಷುಕನೊಬ್ಬ ಭಿಕ್ಷೆ ಬೇಡುತ್ತಾ ನಿಂತಿರುವುದನ್ನು ಕಾಣಬಹುದು. ಆತ ಒಂದು ಕೈಯನ್ನು ಚಾಚಿ  ಭಿಕ್ಷೆ ಹಾಕಿ ಅಂತ ಕೇಳುತ್ತಿದ್ದರೆ, ಇನ್ನೊಂದು ಕೈಯಲ್ಲಿ ಫೋನ್ ಪೇ ಸ್ಕ್ಯಾನರ್ ಹಿಡಿದು ನಿಂತಿರುವುದನ್ನು ಕಾಣಬಹುದು. ಈ ಪೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನಾವು ಎಂತೆಂತಹ ಭಿಕ್ಷುಕರನ್ನು ನೋಡಿದ್ದೇವೆ ಆದ್ರೆ ಈ ಡಿಜಿಟಲ್ ಭಿಕ್ಷುಕನನ್ನು ಹಿಂದೆಂದೂ ನೋಡಿರಲಿಲ್ಲ ಎಂದು ಹಲವರು  ಹೇಳಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ಯಾತ್ರೆ ಪ್ರಾರಂಭಿಸಿದ ವಿಶ್ವದ ಐಷಾರಾಮಿ ರೈಲು; 42 ವರ್ಷಗಳ ಬಳಿಕ ರೈಲಿನ ಮಾರ್ಗ ಬದಲಾವಣೆ

ಫೆಬ್ರವರಿ 06 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 11 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇವನ್ಯಾರಪ್ಪಾ ಡಿಜಿಟಲ್ ಭಿಕ್ಷುಕʼ ಅಂತ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಡಿಜಿಟಲ್ ಇಂಡಿಯಾʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼದೇಶದ ಜನರಿಗೆ ಉಚಿತ ರೇಷನ್ ಲಭ್ಯವಿರುವಾಗ ಇತನಿಗೆ ಭಿಕ್ಷೆ ಬೇಡುವ ಅವಶ್ಯಕತೆ ಏನಿದೆʼ ಎಂದು ಪ್ರಶ್ನೆ ಮಾಡಿದ್ದಾರೆ.  ಇನ್ನೂ ಅನೇಕರು ಈ ಡಿಜಿಟಲ್ ಭಿಕ್ಷುಕನನ್ನು ಕಂಡು ಫುಲ್ ಶಾಕ್ ಆಗಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ