ತಾಯಿಯ ಜೋಕ್ ಕೇಳುತ್ತಿದ್ದಂತೆ 5ವರ್ಷಗಳಿಂದ ಕೋಮಾದಲ್ಲಿದ್ದ ಮಗಳು ಎಚ್ಚರ
2017ರಲ್ಲಿ ಭೀಕರ ಕಾರು ಅಪಘಾತದಲ್ಲಿ ಕೋಮಾಗೆ ಜಾರಿದ್ದ ಮಗಳು. ಇದೀಗಾ ಪವಾಡವೆಂಬಂತೆ 5ವರ್ಷಗಳ ನಂತರ ತಾಯಿಯ ಜೋಕ್ಸ್ ಕೇಳಿ ಕೋಮಾದಿಂದ ಮಗಳು ಹೊರಬಂದಿದ್ದಾಳೆ. ವೈದ್ಯರ ಸಲಹೆಯಂತೆ ಈಕೆಗೆ ಆಕೆಯ ತಾಯಿ ಪ್ರತಿದಿನ ಜೋಕ್ಸ್ ಹೇಳುತ್ತಿದ್ದರು. 5ವರ್ಷಗಳ ಸತತ ಪ್ರಯತ್ನದ ನಂತರ ಮಗಳು ಕೋಮಾದಿಂದ ಹೊರಬಂದಿರುವುದು ಈ ಕುಟುಂಬಕ್ಕೆ ಸಂತಸ ತಂದುಕೊಟ್ಟಿದೆ.
ಅಮೆರಿಕ: ಮಿಚಿಗನ್‌ನ ಜೆನ್ನಿಫರ್ ಫ್ಲೆವೆಲೆನ್ ಎಂಬ ಯುವತಿ 5ವರ್ಷಗಳ ಹಿಂದೆ ಕಾರು ಅಪಘಾತದಲ್ಲಿ ಕೋಮಾಗೆ ಜಾರಿದ್ದಳು. ಇದೀಗಾ ಪವಾಡವೆಂಬಂತೆ 5ವರ್ಷಗಳ ನಂತರ ತಾಯಿಯ ಜೋಕ್ಸ್ ಕೇಳಿ ಕೋಮಾದಿಂದ ಹೊರಬಂದಿದ್ದಾಳೆ. ಆರಂಭದಲ್ಲಿ ಯುವತಿಯನ್ನು ಕೋಮಾದಿಂದ ಹೊರತರಲು ಆಸ್ಪತ್ರೆಯ ನರ್ಸ್‌ಗಳು ಏನೇನೋ ಹರಸಾಹಸಗಳನ್ನು ಮಾಡಿದ್ದರು. ಆದರೆ ಏನೂ ಪ್ರಯೋಜನವಾಗಿರಲ್ಲಿಲ್ಲ. ವೈದ್ಯರ ಸಲಹೆಯಂತೆ ಈಕೆಗೆ ಆಕೆಯ ತಾಯಿ ಪ್ರತಿದಿನ ಜೋಕ್ಸ್ ಹೇಳುತ್ತಿದ್ದರು. ಸುಮಾರು ಐದು ವರ್ಷಗಳ ನಂತರ, ಮಗಳು ಇದ್ದಕ್ಕಿದ್ದಂತೆ ಜೋಕ್ಸ್ ಕೇಳಿ ಕೋಮಾದಿಂದ ಎಚ್ಚರಗೊಂಡು ನಗಾಡಿದ್ದಾಳೆ. ಮಗಳು ಕೋಮಾದಿಂದ ಎದ್ದ ರೀತಿ ನೋಡಿದ ತಾಯಿಗೆ ಭಯವಾಗಿದೆ.
ಯುನಿಲಾಡ್ ವರದಿಯ ಪ್ರಕಾರ, ಸೆಪ್ಟೆಂಬರ್ 25, 2017 ರಂದು ಭೀಕರ ಕಾರು ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಜೆನ್ನಿಫರ್ ಕೋಮಾಗೆ ಜಾರಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು. ಆಗ ಆಕೆಯ ವಯಸ್ಸು 36 ವರ್ಷ. ಚಿಕಿತ್ಸೆ ಮುಂದುವರೆಯಿತು. ಜೆನ್ನಿಫರ್ ಅವರ ತಾಯಿ ಮತ್ತು ಅವರ ಮಕ್ಕಳು ಪ್ರತಿದಿನ ಬಂದು ಅವಳಿಗೆ ತಮಾಷೆಗಳನ್ನು ಹೇಳುತ್ತಿದ್ದರು ಮತ್ತು ಮನೆಗೆ ಸಂಬಂಧಿಸಿದ ವಿಷಯಗಳನ್ನು ಮಾತನಾಡುತ್ತಿದ್ದರು. 5ವರ್ಷಗಳ ಸತತ ಪ್ರಯತ್ನದ ನಂತರ ಕೋಮಾದಿಂದ ಹೊರಬರಲು ಮಗಳು ಕೋಮಾದಿಂದ ಹೊರಬರಲು ಪ್ರಯತ್ನಿಸಲಾರಂಭಿಸಿದಳು.
ಇದನ್ನೂ ಓದಿ: ನೋಡಲು ತುಕ್ಕು ಹಿಡಿದಂತಿರುವ ಈ ಬೆಲ್ಟ್ನ ಬೆಲೆ ಕೇಳಿದ್ರೆ ನೀವು ಶಾಕ್ ಆಗುವುದಂತೂ ಖಂಡಿತಾ!
ವರದಿಯ ಪ್ರಕಾರ, 41 ನೇ ವಯಸ್ಸಿನಲ್ಲಿ, ಮಗಳು ಇದ್ದಕ್ಕಿದ್ದಂತೆ ಕೋಮಾದಿಂದ ಎಚ್ಚರಗೊಂಡು ಜೋರಾಗಿ ನಗಲು ಪ್ರಾರಂಭಿಸಿದಳು. ತಾಯಿಯ ತಮಾಷೆಗೆ ಮಗಳು ಪ್ರತಿಕ್ರಿಯಿಸಿದ್ದಾಳೆ. ಇದು ಪವಾಡಕ್ಕಿಂತ ಕಡಿಮೆಯಿಲ್ಲ. ಏಕೆಂದರೆ, ಇದು ಶೇಕಡಾ 1 ರಿಂದ 2ರಷ್ಟು ರೋಗಿಗಳಲ್ಲಿ ಮಾತ್ರ ಸಂಭವಿಸುತ್ತದೆ ಎಂದು ಮಿಚಿಗನ್‌ನ ಮೇರಿ ಫ್ರೀ ಬೆಡ್ ಪುನರ್ವಸತಿ ಆಸ್ಪತ್ರೆಯ ಡಾ. ರಾಲ್ಫ್ ವಾಂಗ್ ಮಾಹಿತಿ ನೀಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ