ಈ ಜಗತ್ತಿನಲ್ಲಿ ಅಣ್ಣ ತಂಗಿಯರ ಬಾಂಧವ್ಯ ತುಂಬಾನೇ ಮಧುರವಾದದ್ದು. ಈ ಮಧುರ ಬಾಂಧವ್ಯವನ್ನು ವರ್ಣಿಸಲು ಪದಗಳೇ ಸಾಲದು. ಅಣ್ಣನಾದವನು ತಂಗಿಗೆ ಪ್ರತಿಯೊಂದು ಹಂತದಲ್ಲೂ ನೆರಳಾಗಿ ಕಾಪಾಡಿದರೆ, ತಂಗಿಯಾದವಳು ಅಣ್ಣನಿಗೆ ತಾಯಿ ಪ್ರೀತಿಯನ್ನು ನೀಡುತ್ತಾಳೆ. ಈ ಸುಂದರ ಬಾಂಧವ್ಯದಲ್ಲಿ ಮುದ್ದಾಟದ ಜೊತೆಗೆ ಸ್ವಲ್ಪ ಗುದ್ದಾಟವೂ ಇರುತ್ತೆ. ಹೌದು ಅಣ್ಣ-ತಂಗಿ ಸಣ್ಣ ಸಣ್ಣ ವಿಷಯಕ್ಕೂ ಕೆಲವೊಮ್ಮೆ ಜಗಳವಾಡುವುದುಂಟು. ಆಗೊಮ್ಮೆ ಈಗೊಮ್ಮೆ ಜಗಳವಾಡಿದರೂ ಅವರಿಬ್ಬರ ನಡುವಿನ ಪ್ರೀತಿ ಕಾಳಜಿಯಂತೂ ಎಳ್ಳಷ್ಟೂ ಕಡಿಮೆಯಾಗದು. ಜೀವಕ್ಕೆ ಜೀವ ಕೊಡುವ ನಿಷ್ಕಲ್ಮಶ ಪ್ರೀತಿಯದು. ಈ ಪ್ರೀತಿ ಕಾಳಜಿಗೆ ನಿದರ್ಶನವೆಂಬಂತೆ ಇಲ್ಲೊಂದು ವಿಡಿಯೋ ಹರಿದಾಡುತ್ತಿದ್ದು, ಬಾಲಕನೊಬ್ಬ ಈಜುಕೊಳದಲ್ಲಿ ಮುಳುಗಿ ಹೋಗುತ್ತಿದ್ದ ತನ್ನ ಪುಟ್ಟ ತಂಗಿಯನ್ನು ರಕ್ಷಣೆ ಮಾಡಿದ್ದಾನೆ. ಈ ಪುಟಾಣಿ ಬಾಲಕ ಸಮಯ ಪ್ರಜ್ಞೆಯನ್ನು ಕೊಂಡಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಈಜುಕೊಳಕ್ಕೆ ಬಿದ್ದಂತಹ ಪುಟ್ಟ ಬಾಲಕಿ ಈಜು ಬಾರದೆ ಮುಳುಗಿ ಹೋಗುತ್ತಿದ್ದ ವೇಳೆಯಲ್ಲಿ ಆಕೆಯ ಸಹೋದರ ತನ್ನ ಸಮಯ ಪ್ರಜ್ಞೆಯಿಂದ ಬಾಲಕಿಯನ್ನು ರಕ್ಷಿಸಿರುವಂತಹ ದೃಶ್ಯವನ್ನು ಕಾಣಬಹುದು. @NearEscaped ಎಂಬ ಹೆಸರಿನ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
— Near Escapes (@NearEscaped) March 18, 2024
ವೈರಲ್ ವಿಡಿಯೋದಲ್ಲಿ ಪುಟ್ಟ ಬಾಲಕನೊಬ್ಬ ತನ್ನ ಪಾಡಿಗೆ ಈಜುಕೊಳದಲ್ಲಿ ಈಜಾಡುತ್ತಾ ಮೋಜು ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಅಲ್ಲೇ ಪಕ್ಕದಲ್ಲಿ ಜಾರು ಬಂಡಿಯಲ್ಲಿ ಆತನ ಪುಟ್ಟ ತಂಗಿ ಆಟವಾಡುತ್ತಿದ್ದಳು. ಹೀಗೆ ಆಟವಾಡುತ್ತಾ ಆಕೆ ಸೀದಾ ಈಜುಕೊಳಕ್ಕೆ ಬಂದು ಬೀಳುತ್ತಾಳೆ. ಈಜು ಬಾರದ ಆಕೆ ನೀರಿನಲ್ಲಿ ಮುಳುಗಿ, ಅಲ್ಲಿಂದ ಮೇಲೆ ಬರಲು ಒದ್ದಾಡುತ್ತಿರುತ್ತಾಳೆ. ಇದನ್ನು ಕಂಡ ಆ ಬಾಲಕ ಏನು ಮಾಡಬೇಕೆಂದು ತೋಚದೆ, ಆಕೆ ಇನ್ನೋನು ಮುಳುಗಿ ಹೋಗುತ್ತಿದ್ದಾಳೆ ಎನ್ನುವಷ್ಟರಲ್ಲಿ ಬಾಲಕ ಸಮಯ ಪ್ರಜ್ಞೆ ಮೆರೆದು ಪುಟ್ಟ ತಂಗಿಯನ್ನು ನೀರಿನಿಂದ ಮೇಲಕ್ಕೆತ್ತಿ ಆಕೆಯ ಪ್ರಾಣ ರಕ್ಷಿಸಿದ್ದಾನೆ.
ಇದನ್ನೂ ಓದಿ: ವಿಶ್ವದಲ್ಲೇ ದೊಡ್ಡ ಕೆನ್ನೆಯನ್ನು ಹೊಂದಿರುವ ಈ ಮಾಡೆಲ್ ಬಾಯ್ ಫ್ರೆಂಡ್ ಆಗೋನು ಹೀಗಿರಬೇಕಂತೆ
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜವಾದ ಸೂಪರ್ ಹೀರೋ ಈತʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪೋಷಕರು ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಆಗಾಗ್ಗೆ ಗಮನಿಸುವುದು ತುಂಬಾನೆ ಮುಖ್ಯʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈಜು ಬಾರದಿರುವ ಮಕ್ಕಳನ್ನು ನೀರಿನ ಬಳಿ ಪೋಷಕರು ಏಕೆ ಬಿಟ್ಟಿದ್ದಾರೆʼ ಎಂದು ಪ್ರಶ್ನೆ ಮಾಡಿದ್ದಾರೆ. ಹಲವರು ಈ ಬಾಲಕನ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಕೊಂಡಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ