Viral: ವಿಶ್ವದಲ್ಲೇ ದೊಡ್ಡ ಕೆನ್ನೆಯನ್ನು ಹೊಂದಿರುವ ಈ ಮಾಡೆಲ್ ಬಾಯ್ ಫ್ರೆಂಡ್ ಆಗೋನು ಹೀಗಿರಬೇಕಂತೆ…  

Anastasia Pokreshchuk: ಸುಂದರವಾಗಿ ಕಾಣಬೇಕೆಂಬ ಕಾರಣದಿಂದ ಕೆಲವರು  ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಸಿಕೊಳ್ಳುತ್ತಾರೆ. ಆದರೆ ಉಕ್ರೇನ್ ರೂಪದರ್ಶಿ  ಅನಸ್ತಾಸಿಯಾ ಪೊಕ್ರೆಶ್ಚುಕ್  ತನ್ನ ಕೆನ್ನೆ ಹಾಗೂ ತುಟಿಗಳನ್ನು ವಿಚಿತ್ರವಾಗಿ ಸರ್ಜರಿ ಮಾಡುವ ಮೂಲಕ ಸುದ್ದಿಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಈಕೆ ಇದೀಗ  ತನ್ನ ಆದರ್ಶ ಗೆಳೆಯ ಹೇಗಿರಬೇಕು ಹಾಗೂ ಆತನಿಂದ ಏನನ್ನು ಬಯಸುತ್ತೇನೆ  ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.    

Viral: ವಿಶ್ವದಲ್ಲೇ ದೊಡ್ಡ ಕೆನ್ನೆಯನ್ನು ಹೊಂದಿರುವ ಈ ಮಾಡೆಲ್ ಬಾಯ್ ಫ್ರೆಂಡ್ ಆಗೋನು ಹೀಗಿರಬೇಕಂತೆ…  
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 19, 2024 | 2:59 PM

ಸಿನಿ ತಾರೆಯರು, ಮಾಡೆಲ್​​​​ಗಳು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮೊರೆ ಹೋಗುತ್ತಾರೆ. ಆದರೆ ಕೆಲವೊಬ್ಬರು ತಾವು ಹೇಗಾದರೂ ಪ್ರಸಿದ್ಧಿಯನ್ನು ಪಡೆಯಬೇಕಂದು ಚಿತ್ರ ವಿಚಿತ್ರ ದೇಹ ಮಾರ್ಪಾಡುಗಳನ್ನು ಮಾಡುತ್ತಾರೆ. ಅಂತಹವರಲ್ಲಿ ಉಕ್ರೇನ್ ಮೂಲದ ಮಾಡೆಲ್ ಅನಸ್ತಾಸಿಯಾ ಪೊಕ್ರೆಶ್ಚುಕ್ ಕೂಡಾ ಒಬ್ಬರು. ಹೌದು ಈಕೆ ತನ್ನ ತನ್ನ ದೊಡ್ಡ ಕೆನ್ನೆ ಮತ್ತು ವಿಸ್ತರಿಸಿದ ತುಟಿಗಳ ಕಾರಣದಿಂದಲೇ ಹೆಚ್ಚು ಪ್ರಸಿದ್ಧಿಯನ್ನು ಗಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ತುಂಬಾನೇ ಆಕ್ಟಿವ್ ಆಗಿರುವ ಪೊಕ್ರೆಶ್ಚುಕ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ ತನ್ನ ಆದರ್ಶ ಗೆಳೆಯ ಹೇಗಿರಬೇಕು ಹಾಗೂ ಆತನಿಂದ ಏನನ್ನು ಬಯಸುತ್ತೇನೆ  ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ಅನಸ್ತಾಸಿಯಾ ಪೊಕ್ರೆಶ್ಚುಕ್ ಬಾಯ್ ಫ್ರೆಂಡ್ ಹೀಗಿರಬೇಕಂತೆ:

ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅನಸ್ತಾಸಿಯಾ ಸಂಬಂಧಗಳಿಗಿಂತ ತಮ್ಮ ವೃತ್ತಿ ಜೀವನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರಂತೆ, ಒಂದು ವೇಳೆ ಪ್ರೀತಿಯಲ್ಲಿ ಬಿದ್ದರೆ ತನ್ನ ಗೆಳೆಯ ಹೇಗಿರಬೇಕು ಹಾಗೂ ಆತನಿಂದ ಏನನ್ನು ಬಯಸುತ್ತೇನೆ ಎಂಬ ವಿಚಾರವನ್ನು ಸಹ ಹಂಚಿಕೊಂಡಿದ್ದಾರೆ.  ಸದ್ಯ ಸಿಂಗಲ್ ಆಗಿರುವ  ಪೊಕ್ರೆಶ್ಚುಕ್,   ಒಂದು ವೇಳೆ ಪ್ರೀತಿಯಲ್ಲಿ ಬಿದ್ದರೆ ತನ್ನ ಗೆಳೆಯನಿಗಾಗಿ ನಾನು  ಹಣವನ್ನು  ಖರ್ಚು ಮಾಡುವುದಿಲ್ಲ. ಬದಲಿಗೆ ಪ್ರತಿಯೊಂದು ವಿಷಯಕ್ಕೂ ಅವನೇ ನನಗೆ ಹಣವನ್ನು ನೀಡಬೇಕು. ಇಂತಹ ಆದರ್ಶ ಗೆಳೆಯ ಬೇಕು ಎಂದು ಡೈಲಿ ಮೇಲ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪ್ರಸ್ತುತ 36 ವರ್ಷದ ಪೊಕ್ರೇಶ್ಚುಕ್  ಉಕ್ರೇನ್ ಯುದ್ಧದಲ್ಲಿ ಅನಾಥರಾದ ಮಕ್ಕಳನ್ನು ದತ್ತು ಪಡೆಯುಕೊಳ್ಳುವ ಯೋಜನೆಯಲ್ಲಿದ್ದಾರೆ. ಉತ್ತಮ ಭವಿಷ್ಯ, ತಂದೆ ತಾಯಿ ಪ್ರೀತಿ, ಸಹಾಯದ ಅಗತ್ಯವಿರುವ ಅನೇಕ ಮಕ್ಕಳು ಇಲ್ಲಿದ್ದಾರೆ. ಹೀಗಿರುವಾಗ ನಾನು ಶ್ರೀಮಂತಳಾಗಿರುವಾಗ ನಾನು ಸ್ವಂತ ಮಗುವಿನ ಬದಲು, ಈ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯಪೂರ್ವದಲ್ಲೇ ಜುನಾಗಡ್ ನವಾಬನ ನಾಯಿ ಮದುವೆಗೆ ಆದ ಖರ್ಚು 2 ಕೋಟಿ ರೂ

ವಿಶ್ವದಲ್ಲಿಯೇ ಅತೀ ದೊಡ್ಡ ಕೆನ್ನೆಗಳನ್ನು ಹೊಂದಿರುವ ಮಹಿಳೆ ಈಕೆ:

ದೊಡ್ಡ ಕೆನ್ನೆಗಳು ಮತ್ತು ವಿಸ್ತರಿಸಿದ ತುಟಿಗಳ ಕಾರಣದಿಂದಲೇ  ಪೊಕ್ರೇಶ್ಚುಕ್ ಪ್ರಸಿದ್ಧಿ ಪಡೆದಿದ್ದಾರೆ.  ವಿವಿಧ ಸೌಂದರ್ಯವರ್ಧಕ ಚಿಕಿತ್ಸೆಗಳ  ಪರಿಣಾಮದಿಂದ ಈಕೆ ಈ ವಿಚಿತ್ರ ಲುಕ್ ಅನ್ನು ಬದಲಾಯಿಸಿಕೊಂಡಿದ್ದಾರೆ. ತಾನು ವಿಚಿತ್ರವಾಗಿ ಕಾಣಬೇಕೆಂಬ ಕಾರಣಕ್ಕೆ  ಅನಸ್ತಾಸಿಯಾ ಪೊಕ್ರೇಶ್ಚುಕ್  ಫೇಸ್ ಫಿಲ್ಲರ್ ಮತ್ತು ಲಿಪ್ ಫಿಲ್ಲರ್ ಸೇರಿದಂತೆ ಹಲವಾರು  ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡು ತುಟಿ ಮತ್ತು ಕೆನ್ನೆಯ ಆಕಾರವನ್ನೇ ಬದಲಿಸಿಕೊಂಡಿದ್ದಾರೆ. ನೋಡಲು ತುಂಬಾನೇ ವಿಚಿತ್ರವಾಗಿ ಕಾಣುವ ಪೊಕ್ರೇಶ್ಚುಕ್ ಒಂದು ಬಾರಿ ಸೋಷಿಯಲ್ ಮೀಡಿಯಾದಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವ ಮೊದಲಿನ ಫೋಟೋವೊಂದನ್ನು ಹಂಚಿಕೊಂಡಿದ್ದರು. ಈ ಫೋಟೋ ಕೂಡಾ ಸಖತ್ ವೈರಲ್ ಆಗಿತ್ತು. ಕಾಸ್ಮೆಟಿಕ್ ಸರ್ಜರಿ ನಂತರ ನಾನು ಇತರರಿಗೆ ವಿಲಕ್ಷಣವಾಗಿ ಕಾಣಲು ಆರಂಭಿಸಿದೆ. ಆದರೆ ಅದರ ಬಗ್ಗೆ ನಾನು ಚಿಂತಿಸುವುದಿಲ್ಲ, ನನ್ನ ಹೊಸ ಲುಕ್ ನನಗೆ ತುಂಬಾನೇ ಇಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ