Video: ಸಮುದ್ರ ತೀರದಲ್ಲಿ ಪ್ರೇಮಿಗಳಿಬ್ಬರ ರೊಮ್ಯಾನ್ಸ್, ಪ್ರಿಯಕರ ನೋಡುತ್ತಿದ್ದಂತೆ ಅಲೆಗಳಲ್ಲಿ ಕೊಚ್ಚಿ ಹೋದ ಯುವತಿ‌

ಸಮುದ್ರದಲ್ಲಿ ಪ್ರಕ್ಷುಬ್ಧತೆ   ಹೆಚ್ಚಾದಾಗ  ಕಡಲ ತೀರಕ್ಕೆ ಇಳಿಯದಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗುತ್ತದೆ. ಆದರೆ ಇಲ್ಲೊಂದು ಜೋಡಿ ಇದಕ್ಕೆಲ್ಲಾ ಕ್ಯಾರೇ ಅನ್ನದೇ ಭಯಾನಕ ಅಲೆಗಳ ನಡುವೆ ರೊಮ್ಯಾನ್ಸ್‌ ಮಾಡುತ್ತಾ ನಿಂತಿದ್ದು, ಅಲೆಗಳ ಹೊಡತಕ್ಕೆ ಯುವತಿ ನೋಡ ನೋಡುತ್ತಿದ್ದಂತೆ ಪ್ರಿಯಕರನ ಮುಂದೆಯೇ ಅಲೆಗಳಲ್ಲಿ ಕೊಚ್ಚಿ ಹೋಗಿದ್ದಾಳೆ. ಈ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ. 

Video: ಸಮುದ್ರ ತೀರದಲ್ಲಿ ಪ್ರೇಮಿಗಳಿಬ್ಬರ ರೊಮ್ಯಾನ್ಸ್, ಪ್ರಿಯಕರ ನೋಡುತ್ತಿದ್ದಂತೆ ಅಲೆಗಳಲ್ಲಿ ಕೊಚ್ಚಿ ಹೋದ ಯುವತಿ‌
ವೈರಲ್​​ ವಿಡಿಯೋ
Edited By:

Updated on: Jun 20, 2024 | 3:02 PM

ಸಮುದ್ರ ತೀರದಲ್ಲಿ ಖುಷಿಯಿಂದ ಹೆಜ್ಜೆ ಇಡಲು ಯಾರಿಗೆ ಇಷ್ಟವಿಲ್ಲ ಹೇಳಿ… ಬಹುತೇಕ ಎಲ್ಲರೂ ಸಮುದ್ರ ತಟದಲ್ಲಿ ಹಾಯಾಗಿ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ಪ್ರಶಾಂತವಾದ ಸಮುದ್ರ ನೋಡಲು ಎಷ್ಟು ಸುಂದರವಾಗಿರುತ್ತದೆಯೇ, ಹವಾಮಾನ ವೈಪರಿತ್ಯದಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾದಾಗ  ಅದು ಅಷ್ಟೇ ಭಯಾನಕವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರವಾಸಿಗರು ಸಮುದ್ರ ತಟದಲ್ಲಿ ಆಟವಾಡಬಾರದು ಎಂದು ಎಚ್ಚರಿಕೆಯನ್ನು ನೀಡಲಾಗುತ್ತದೆ. ಎಷ್ಟೇ ಎಚ್ಚರಿಕೆ ನೀಡಿದ್ರೂ ಕೆಲವೊಬ್ಬರೂ  ಭಯಾನಕ ಅಲೆಗಳ ನಡುವೆ ಆಡುವ ದುಸ್ಸಾಹಸಕ್ಕೆ ಕೈ ಹಾಕುತ್ತಾರೆ. ಅದೇ ರೀತಿ ಇಲ್ಲೊಂದು ಜೋಡಿ ಪ್ರಕ್ಷುಬ್ಧ  ಸಮುದ್ರದಲ್ಲಿ ರೊಮ್ಯಾನ್ಸ್‌ ಮಾಡುತ್ತಾ ನಿಂತಿದ್ದು, ಭಯಾನಕ ಅಲೆಗಳ ಹೊಡೆತಕ್ಕೆ ಯುವತಿ ತನ್ನ ಪ್ರಿಯಕರನ ಮುಂದೆಯೇ ಕೊಚ್ಚಿ ಹೋಗಿದ್ದಾಳೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈ ಘಟನೆ ರಷ್ಯಾದ ಲಿಪೆಟ್ಸ್ಕ್‌ ನಗರದಲ್ಲಿ ನಡೆದಿದ್ದು, ಇಲ್ಲಿನ ಬೀಚ್‌ ಒಂದರಲ್ಲಿ ಪ್ರೇಮಿಗಳಿಬ್ಬರು ರೊಮ್ಯಾನ್ಸ್‌ ಮಾಡುತ್ತಿದ್ದ ವೇಳೆ 20 ವರ್ಷದ ಯುವತಿ ತನ್ನ ಗೆಳೆಯನ ಮುಂದೆಯೇ ಭಯಾನಕ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾಳೆ. ಎಷ್ಟೇ ಪ್ರಯತ್ನ ಪಟ್ಟರೂ ಆಕೆಯ ಪ್ರಾಣವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ವೈರಲ್​​ ವಿಡಿಯೋ:

ಈ ವಿಡಿಯೋವನ್ನು @Collinrugg ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್‌ ವಿಡಿಯೋದಲ್ಲಿ ಪ್ರೇಮಿಗಳಿಬ್ಬರು ಸಮುದ್ರದ ಅಲೆಗಳ ಮಧ್ಯೆ ಕೈ ಕೈ ಹಿಡಿದು ನಡೆಯುತ್ತಾ, ಮುದ್ದಾಡುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ಒಬ್ಬರಿಗೊಬ್ಬರು ಮುತ್ತಿಡುತ್ತಿದ್ದ ವೇಳೆ ಭಯಾನಕ ಅಲೆಗಳ ಹೊಡೆತಕ್ಕೆ ಸಿಲುಕಿ ಆ ಯುವತಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಆಕೆಯ ಗೆಳೆಯ ಎಷ್ಟೇ ಪ್ರಯತ್ನ ಪಟ್ಟರೂ ಆಕೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ತುಳು ಯಕ್ಷಗಾನ ಪ್ರಸಂಗದಲ್ಲೂ ʼದರ್ಶನ್‌-ಪವಿತ್ರʼ ಹವಾ

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 17.2 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಭಯಾನಕ ವಿಡಿಯೋ ನೋಡಿ  ಸಮುದ್ರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾದಾಗ ಇಂತಹ ಹುಚ್ಚಾಟಗಳನ್ನು ಮಾಡಬಾರದು ಎಂದು ಅವರಿಗೆ ತಿಳಿದಿಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: