Video: ಬಿಟ್ಟಿ ಹಣ ಸಿಕ್ರೆ ಕೈ ಚಾಚೋ ಜನಗಳ ಮಧ್ಯೆ ಈ ಅಜ್ಜಿ ಎಷ್ಟು ಸ್ವಾಭಿಮಾನಿ ನೋಡಿ….

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 23, 2024 | 1:45 PM

ಏನಾದ್ರೂ ಬಿಟ್ಟಿ ಸಿಕ್ರೆ ನಂಗೂ ಇರ್ಲಿ, ನನ್‌ ಅಪ್ಪಂಗೂ ಒಂದಿರ್ಲಿ ಅನ್ನೋ ಈ ಕಾಲ ಇದು. ಇಂಥಾ ಸ್ವಾರ್ಥಿಗಳೇ ತುಂಬಿರೋ ಈ ಕಾಲದಲ್ಲಿ ಇಲ್ಲೊಬ್ರು ಅಜ್ಜಿ ಯುವಕನೊಬ್ಬ ಖರ್ಚಿಗೆ ಇರಲಿ ಅಂತಾ ಕೊಟ್ಟ ಹಣವನ್ನು ತಿರಸ್ಕರಿಸಿಸಿ ಸ್ವಾಭಿಮಾನವನ್ನು ಮೆರೆದಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Video: ಬಿಟ್ಟಿ ಹಣ ಸಿಕ್ರೆ ಕೈ ಚಾಚೋ ಜನಗಳ ಮಧ್ಯೆ ಈ ಅಜ್ಜಿ ಎಷ್ಟು ಸ್ವಾಭಿಮಾನಿ ನೋಡಿ....
ವೈರಲ್​​ ವಿಡಿಯೋ
Follow us on

ಬರಿ ಸ್ವಾರ್ಥವೇ ತುಂಬಿರುವ ಇಂದಿನ ಈ ಪ್ರಪಂಚದಲ್ಲಿ ಬಿಟ್ಟಿ‌ ಸಿಕ್ರೆ ನನಗೂ ಇರ್ಲಿ, ನನ್ ಮನೆಯವರಿಗೂ ಇರ್ಲಿ’ ಅನ್ನೋ ಜನರೇ ಹೆಚ್ಚು. ಹೌದು ಇನ್ನೊಬ್ಬರಿಗೆ ಸಹಾಯ ಮಾಡಲು ಹಿಂದೆ ಮುಂದೆ ನೋಡುವ ಈ ಜನ ಫ್ರೀಯಾಗಿ ಏನಾದ್ರೂ ಸಿಗುತ್ತೆ ಅಂದ್ರೆ ನಂಗೂ ಇರ್ಲಿ, ನನ್‌ ಅಪ್ಪಂಗೂ ಒಂದಿರ್ಲಿ ಅಂತ ಕೈ ಚಾಚಿ ನಿಂತು ಬಿಡುತ್ತಾರೆ. ಇಂಥಾ ಜನಗಳ ಮಧ್ಯೆ ಇಲ್ಲೊಂದು ಇಳಿ ವಯಸ್ಸಿನ ಜೀವ ತನ್ನ ಸ್ವಾಭಿಮಾನದ ನಡೆಯಿಂದಲೇ ಎಲ್ಲರ ಮನ ಗೆದ್ದಿದೆ. ಅಸಹಾಯಕ ಸ್ಥಿತಿಯಲ್ಲಿದ್ದ ಈ ಅಜ್ಜಿಯನ್ನು ಕಂಡು ಯಾರೋ ಒಬ್ಬ ಯುವಕ ಅವರಿಗೆ ಖರ್ಚಿಗೆ ಹಣ ಕೊಡಲು ಹೋಗ್ತಾನೆ. ಆತ ಕೊಟ್ಟ ಹಣವನ್ನು ನಯವಾಗಿ ತಿರಸ್ಕರಿಸಿ, ಆ ಯುವಕನಿಗೆ ಆಶೀರ್ವಾದಿಸಿ ಅಲ್ಲಿಂದ ಹೋಗಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಹಣ ಕಂಡ್ರೆ ಹೆಣ ಕೂಡಾ ಬಾಯಿ ಬಿಡೋ ಈ ಕಾಲದಲ್ಲಿ ಸ್ವಾಭಿಮಾನಿ ಅಜ್ಜಿಯೊಬ್ಬರು ಯುವಕ ಕೊಟ್ಟ ಹಣವನ್ನೇ ತಿರಸ್ಕರಿಸಿದ್ದಾರೆ. ಈ ಕುರಿತ ಪೋಸ್ಟ್ ಒಂದನ್ನು ಅರುಣ್ (arunnn_12) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ತುಂಬಾ ಒಳ್ಳೆಯವ್ರು ಅಜ್ಜಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ನಿಷ್ಕಲ್ಮಶ ಮನಸ್ಸಿನ ಅಜ್ಜಿಯೊಬ್ಬರು ಯುವಕನೊಬ್ಬನ ಜೊತೆ ಚೆಂದವಾಗಿ ಮಾತನಾಡುವ ದೃಶ್ಯವನ್ನು ಕಾಣಬಹುದು. ಹೀಗೆ ಮಾತನಾಡುತ್ತಾ ಖರ್ಚಿಗೆ ಇರಲಿ ಅಂತ ಅಜ್ಜಿಗೆ ಹಣ ಕೊಡಲು ಮುಂದಾಗುತ್ತಾನೆ. ಆಗ ಆ ಅಜ್ಜಿ ನನಗೆ ದುಡ್ಡು ಬೇಡಪ್ಪಾ ಎನ್ನುತ್ತಾ, ಯುವಕನ ತಲೆ ಮೇಲೆ ಕೈಯಿಟ್ಟು ಆಶೀರ್ವಾದಿಸಿ ದುಡ್ಡು ತೆಗೆದುಕೊಳ್ಳದೆಯೇ ಹೋಗಿದ್ದಾರೆ.

ಇದನ್ನೂ ಓದಿ: ಅಮ್ಮಾ… ಓ ಅಮ್ಮಾ… ತಾಯಿ ಸಮಾಧಿ ಮುಂದೆ ಕರುಳ ಕುಡಿಯ ನೋವಿನ ಆಕ್ರಂದನ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಆಗಸ್ಟ್ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಯಾರದು ಸಹಾಯನೇ ಇಲ್ಲದೆ ದೇವರನ್ನು ನಂಬಿ ಬದುಕ್ತಾ ಇರೋ ಜೀವ ಇದು, ಇವರಿಗೆ ದೇವರು ಒಳ್ಳೆದು ಮಾಡಲಿ’ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಅಜ್ಜಿಯ ಹೃದಯ ಶ್ರೀಮಂತಿಕೆಗೆ ಚಿರಋಣಿ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ದುಡ್ಡು ದುಡ್ಡು ಅನ್ನೋ ಈ ದುನೀಯಾದಲ್ಲಿ ಇಂಥಾ ಒಳ್ಳೆ ಜನರು ಇದ್ದಾರೆ ಅನ್ನೋದನ್ನು ನೋಡೋದೆ ಖುಷಿ’ ಎಂದು ಹೇಳಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ