ಉರಗ ಲೋಕದ ರಾಜನಾಗಿರುವ ಈ ಕಾಳಿಂಗ ಸರ್ಪಗಳ ಗತ್ತು, ಗಾಂಭೀರ್ಯಕ್ಕೆ ಬೇರೆ ಯಾವ ಹಾವನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಈ ಕಾಳಿಂಗ ಸರ್ಪಗಳು ಆಕಾರ ಹಾಗೂ ಬಣ್ಣದಿಂದಲೇ ಎಲ್ಲರನ್ನು ಬೆಚ್ಚಿ ಬೀಳಿಸುತ್ತವೆ. ಅವುಗಳ ತಂಟೆಗೆ ಹೋಗದೇ ಇದ್ದರೆ ನಿರುಪದ್ರವಿಯಾಗಿ ಉಳಿಯುವ ಈ ವಿಷಕಾರಿ ಹಾವು, ತಂಟೆಗೆ ಯಾರಾದರೂ ಬಂದರೆ ಕಚ್ಚದೆ ಬಿಡುವುದೇ ಇಲ್ಲ. ಮಲೆನಾಡಿನ ಪ್ರದೇಶಗಳಲ್ಲಿ ಈ ದೈತ್ಯಾಕಾರದ ಕಾಳಿಂಗ ಸರ್ಪ ಕಾಣಸಿಗುತ್ತದೆ. ಈ ವಿಷಪೂರಿತ ಕಾಳಿಂಗ ಸರ್ಪವು ಕೆಲವೊಮ್ಮೆ ಬುಸುಗುಟ್ಟಿ ತನ್ನ ಮುಂದೆ ಇರುವ ಶತ್ರುವನ್ನು ಓಡಿಸಲು ಸಾಧ್ಯವಾಗದಿದ್ದಾಗ ಮಾತ್ರ ಕಚ್ಚಿ ಬಿಡುತ್ತದೆ.
ಕೇವಲ ಒಂದೂವರೆ ಚಮಚದಷ್ಟು ವಿಷಯನ್ನು ಶತ್ರುವಿನ ದೇಹದೊಳಕ್ಕೆ ಇಂಜೆಕ್ಟ್ ಮಾಡುತ್ತದೆ. ಈ ಹಾವಿನ ವಿಷವು ಹೆಚ್ಚಿನ ಡೋಸೇಜ್ ನಲ್ಲಿ ಒಳ ಸೇರಿದರೆ ಕೇವಲ ಮೂವತ್ತೇ ನಿಮಿಷದಲ್ಲಿ ವ್ಯಕ್ತಿ ಸಾವನ್ನಪ್ಪುತ್ತಾನೆ. ಹೀಗಾಗಿ ಈ ವಿಷಕಾರಿ ಹಾವನ್ನು ಯಾರು ಕೂಡ ಹಿಡಿಯಲು ಧೈರ್ಯ ಮಾಡುವುದಿಲ್ಲ. ಮನುಷ್ಯನ ಮೇಲೆ ದಾಳಿ ಮಾಡಿದರೆ ನಿಮಿಷಾರ್ಧದಲ್ಲೇ ಉಸಿರು ನಿಲ್ಲುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಉರಗ ಪ್ರೇಮಿ ಆಕಾಶ್ ಜಾಧವ್ ಅವರು ದೈತ್ಯಾಕಾರದ ಕಾಳಿಂಗ ಸರ್ಪವನ್ನು ಕೈಯಲ್ಲಿ ಹಿಡಿದು ನೋಡುಗರಿಗೆ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.
ಇದನ್ನೂ ಓದಿ: ಮಡದಿಗೂ ಸಮಾನ ಗೌರವ, ವಧುವಿನ ಪಾದ ಸ್ಪರ್ಶಿಸಿದ ವರ, ನಾಚಿ ನೀರಾದ ವಧು
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಉರಗ ತಜ್ಞರಾದ ಆಕಾಶ್ ಜಾಧವ್ ಅವರು ಎರಡು ಪಟ್ಟು ದೊಡ್ಡದಾಗಿರುವ ಕಾಳಿಂಗ ಸರ್ಪವನ್ನು ಕೈಯಲ್ಲಿ ಹಿಡಿದು ಮೇಲಕ್ಕೆ ಎತ್ತುತ್ತಿರುವುದನ್ನು ಕಾಣಬಹುದು. ಯಾವುದೇ ರೀತಿಯ ಸುರಕ್ಷತಾ ಸಾಧನಗಳಿಲ್ಲದೆ ಸಂಪೂರ್ಣವಾಗಿ ಬರಿಗೈಯಲ್ಲಿ ಹಿಡಿದಿದ್ದಾರೆ.
ಈ ವಿಡಿಯೋವು ಅತೀ ಹೆಚ್ಚು ವೀಕ್ಷಣೆಯನ್ನು ಕಂಡಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಪ್ರಾಣದ ಭಯವಿಲ್ಲದೆ ದೈತ್ಯಾಕಾರದ ಕಾಳಿಂಗ ಸರ್ಪದ ಜೊತೆಗೆ ಸರಸ ಆಡುತ್ತಿರುವ ಉರಗ ತಜ್ಞರಾದ ಆಕಾಶ್ ಜಾಧವ್ ರವರ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು, ‘ ವಿಷಕಾರಿ ವನ್ಯಜೀವಿಗಳೊಂದಿಗೆ ಈ ರೀತಿಯಾಗಿ ನಡೆದುಕೊಂಡರೆ ತಮ್ಮ ಪ್ರಾಣದ ಜೊತೆಗೆ ಚೆಲ್ಲಾಟ ಆಡಿದ್ದಂತೆ ಆಗುತ್ತದೆ. ದಯವಿಟ್ಟು ಈ ರೀತಿ ಮಾಡಬೇಡಿ’ ಎಂದು ಆತಂಕವನ್ನು ವ್ಯಕ್ತಪಡಿಸುವ ಮೂಲಕ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ