Viral Video: ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿ ವಿವಿಧ ರೀತಿಯ ಪ್ರಾಣಿಗಳ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತದೆ. ಅವುಗಳ ಮುದ್ದು ಮುದ್ದಾದ ವಿಡಿಯೋ, ತಮಾಷೆ, ತುಂಟಾಟಗಳು ಜನರಿಗೆ ಸಾಕಷ್ಟು ಇಷ್ಟ ಕೂಡ ಆಗುತ್ತವೆ. ಜತೆಗೆ ಮನುಷ್ಯರೊಂದಿಗಿನ ಅವುಗಳ ಒಡನಾಟಗಳ ಬಗ್ಗೆ ಸಾಕಷ್ಟು ವಿಡಿಯೋಗಳನ್ನು ನಾವು ನೋಡಿದ್ದೇವೆ. ಈಗ ಅಂತಹದೇ ಒಂದು ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ನೋಡಿದ ಜನರು ಭಾವನಾತ್ಮಕವಾಗಿದ್ದಾರೆ. ಐದು ವರ್ಷಗಳ ಹಿಂದೆ ಕಳ್ಳತನವಾದ ನಾಯಿ ಪತ್ತೆಯಾಗಿದ್ದು, ನಾಯಿಯನ್ನು ಕಂಡ ಅದರ ಮಾಲೀಕ ಅದನ್ನು ಮುದ್ದಾಡಿರುವಂತಹ ಭಾವನಾತ್ಮಕ ವಿಡಿಯೋ ಎಲ್ಲರಲ್ಲೂ ಕಣ್ಣೀರು ಹಾಕುವಂತೆ ಮಾಡಿದೆ. ಈ ವಿಡಿಯೋವನ್ನು ಟ್ವಿಟರ್ ಹ್ಯಾಂಡಲ್‌ನಲ್ಲಿ ಗುಡ್ ನ್ಯೂಸ್ ಮೂವ್‌ಮೆಂಟ್ ಖಾತೆ ಪೋಸ್ಟ್ ಮಾಡಿದೆ. ಶೀರ್ಷಿಕೆಯಲ್ಲಿ ನಾಯಿ ತನ್ನ ಮಾಲೀಕನಿಂದ ಏಕೆ ದೂರವಾಗಿದೆ ಎಂದು ವಿವರಿಸಲಾಗಿದೆ. ನಾಯಿ ಮತ್ತು ಮಾಲೀಕ 5 ವರ್ಷಗಳ ನಂತರ ಮತ್ತೆ ಒಂದಾಗುತ್ತಾರೆ. ಈ ನಾಯಿಯನ್ನು ಕಳ್ಳತನ ಮಾಡಲಾಗಿದ್ದು, ಅವರು ಮತ್ತೆ ನಾಯಿಯನ್ನು ನೋಡುವುದಿಲ್ಲ ಎಂದು ಕುಟುಂಬ ಭಾವಿಸಿದೆ ಎಂದು ಅವರು ಬರೆದುಕೊಂಡಿದ್ದಾರೆ.
Dog and owners are reunited after 5 years apart. This dog was stolen and family thought they’d never see dog again. pic.twitter.com/MBYZz52uCN
— GoodNewsMovement (@GoodNewsMoveme3) April 11, 2022
ಅನೇಕ ನಾಯಿಗಳು ಓಡಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕೆಲವೇ ಕ್ಷಣಗಳಲ್ಲಿ, ಇಬ್ಬರು ಮನುಷ್ಯರು ಕಾಂಪೌಂಡ್ನ್ನು ಪ್ರವೇಶಿಸುತ್ತಾರೆ. ಒಂದು ನಾಯಿ ಅವರ ಕಡೆಗೆ ಓಡಿ ಬರುತ್ತದೆ. ಒಬ್ಬ ವ್ಯಕ್ತಿ ಕೆಳಗೆ ಕುಳಿತು ಬಹಳ ವರ್ಷಗಳ ನಂತರ ತನ್ನ ಮಾಲೀಕನನ್ನು ಭೇಟಿಯಾಗುವ ಉತ್ಸಾಹವನ್ನು ನಿಯಂತ್ರಿಸಲು ಸಾಧ್ಯವಾಗದೆ ಸಂತೋಷದಿಂದ ಜಿಗಿಯುತ್ತಲೇ ಇರುವ ನಾಯಿಯನ್ನು ತಬ್ಬಿಕೊಳ್ಳಲು ಪ್ರಾರಂಭಿಸುತ್ತಾನೆ. ಅಳುತ್ತ ಅದನ್ನು ಮುದ್ದಾಡುತ್ತಾನೆ. ನಾಯಿ ಕೂಡ ತನ್ನ ಮಾಲೀಕನನ್ನು ಕಂಡು ಸಂತೋಷಗೊಂಡಿದೆ.
ಕೆಲವು ದಿನಗಳ ಹಿಂದೆ ಅದ್ಭುತವಾದ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 7.4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಸುಮಾರು 200 ಲೈಕ್‌ಗಳನ್ನು ಸಂಗ್ರಹಿಸಿದೆ. ವಿಡಿಯೋಗೆ ಪ್ರತಿಕ್ರಿಯಿಸುವಾಗ ವ್ಯಕ್ತಿಯೊಬ್ಬರು, ಲವ್ಲಿ ಎಂದು ಬರೆದಿದ್ದು, ಇನ್ನೊಬ್ಬ ವ್ಯಕ್ತಿ, ಇದು ಯಾವ ತಳಿಯ ನಾಯಿ ಎಂದು ಕೇಳಿದ್ದಾರೆ.
ಇದನ್ನೂ ಓದಿ:
ಮುಂಬೈನ ಪೊವೈನಲ್ಲಿ ಮೊಮೊಸ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ; ಇಲ್ಲಿದೆ ವೈರಲ್ ವಿಡಿಯೋ
Published On - 8:35 pm, Tue, 12 April 22