Viral: ಈ ಚಿತ್ರದಲ್ಲಿ ಮೊದಲು ಏನನ್ನು ಗುರುತಿಸುತ್ತೀರಿ? ಇದರಿಂದ ನಿಮ್ಮ ಪ್ರೀತಿಯ ಬಗ್ಗೆ ಹೇಳಬಹುದಂತೆ!

Optical Illusion: ಈ ಚಿತ್ರದಲ್ಲಿ ನಿಮಗೆ ಏನು ಕಾಣುತ್ತಿದೆ? ನೀವು ಯಾವುದನ್ನು ಮೊದಲು ಗುರುತಿಸುತ್ತೀರಿ? ನೀವು ಯಾವುದನ್ನು ಮೊದಲು ಗುರುತಿಸುತ್ತೀರಿ ಎನ್ನುವುದರ ಆಧಾರದ ಮೇಲೆ ನೀವು ಪ್ರೀತಿಯಲ್ಲಿದ್ದಾಗ ಹೇಗಿರುತ್ತೀರಿ ಎಂಬುದನ್ನೂ ಹೇಳಬಹುದಂತೆ. ಆಸಕ್ತಿದಾಯಕವಾಗಿದೆಯಲ್ಲವೇ.. ಮುಂದೆ ಓದಿ.

Viral: ಈ ಚಿತ್ರದಲ್ಲಿ ಮೊದಲು ಏನನ್ನು ಗುರುತಿಸುತ್ತೀರಿ? ಇದರಿಂದ ನಿಮ್ಮ ಪ್ರೀತಿಯ ಬಗ್ಗೆ ಹೇಳಬಹುದಂತೆ!
ಈ ಚಿತ್ರದಲ್ಲಿ ನೀವು ಮೊದಲು ಗುರುತಿಸುವುದೇನು?
Follow us
TV9 Web
| Updated By: shivaprasad.hs

Updated on:Apr 13, 2022 | 2:22 PM

ಆಪ್ಟಿಕಲ್ ಇಲ್ಯೂಶನ್ (Optical Illusion) ಮಾದರಿಯ ಚಿತ್ರಗಳನ್ನು ನೀವು ಸಾಮಾನ್ಯವಾಗಿ ನೋಡಿಯೇ ಇರುತ್ತೀರಿ. ಬುದ್ಧಿಗೆ ಗುದ್ದು ನೀಡುವ ಚಿತ್ರಗಳನ್ನು ಜನರು ಇಷ್ಟಪಡುತ್ತಾರೆ. ಆದ್ದರಿಂದಲೇ ಇವುಗಳು ಸಖತ್ ವೈರಲ್ ಆಗುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಹಲವು ಫೋಟೋಗಳು, ವಿಡಿಯೋಗಳು ವೈರಲ್ (Viral) ಆಗುತ್ತಿರುತ್ತವೆ. ವಾಸ್ತವವಾಗಿ ಬುದ್ಧಿಗೆ ಗುದ್ದು ನೀಡಲೆಂದೋ ಅಥವಾ ವಿನೋದಕ್ಕೋ ಮಾತ್ರ ಈ ಆಪ್ಟಿಕಲ್ ಇಲ್ಯೂಶನ್​ಗಳು ಬಳಕೆಯಾಗುವುದಲ್ಲ. ಇವುಗಳ ಆಧಾರದಲ್ಲಿ ತಜ್ಞರು ಮನುಷ್ಯನ ಮನಸ್ಸನ್ನೂ ಅಳೆಯುತ್ತಾರೆ. ಇದರ ಬಗ್ಗೆ ಕುತೂಹಲವಿದ್ದರೆ ಈ ಬರಹ ಓದಬಹುದು. ಈಗ ವಿಷಯಕ್ಕೆ ಬರೋಣ. ಮೇಲೆ ಒಂದು ಚಿತ್ರವಿದೆಯಲ್ಲಾ.. ಅದರಲ್ಲಿ ನಿಮಗೆ ಏನು ಕಾಣುತ್ತಿದೆ? ನೀವು ಯಾವುದನ್ನು ಮೊದಲು ಗುರುತಿಸುತ್ತೀರಿ? ಜತೆಗೆ ನೀವು ಪ್ರೀತಿಯಲ್ಲಿದ್ದಾಗ ಹೇಗಿರುತ್ತೀರಿ ಎಂಬುದನ್ನೂ ಈ ಚಿತ್ರದಿಂದ ಹೇಳಬಹುದಂತೆ. ಆಸಕ್ತಿದಾಯಕವಾಗಿದೆಯಲ್ಲವೇ… ಪೂರ್ಣ ಮಾಹಿತಿ ಇಲ್ಲಿದೆ.

ಈ ಆಪ್ಟಿಕಲ್ ಇಲ್ಯೂಶನ್​ ಚಿತ್ರಗಳು ಎರಡು ಆಯಾಮದ (2ಡಿ) ಚಿತ್ರಗಳನ್ನು ನೋಡಲು ನಮ್ಮ ಕಣ್ಣುಗಳು ಹಾಗೂ ಮೆದುಳು ಹೇಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ ಎನ್ನುವುದನ್ನು ನಮಗೆ​ ಕಲಿಸಿಕೊಡುತ್ತವೆ. ಇದೊಂದು ರೀತಿಯ ಭ್ರಮೆ. ಇದರಿಂದಲೇ ನಮ್ಮ ದೃಷ್ಟಿಗೆ ಇದು ಸವಾಲೆಸೆಯುತ್ತದೆ.

ಪ್ರಸ್ತುತ ಚಿತ್ರದ ವಿಷಯಕ್ಕೆ ಬರೋಣ. ಈ ಆಪ್ಟಿಕಲ್ ಇಲ್ಯೂಶನ್ ಚಿತ್ರದಲ್ಲಿ ಒಂದು ವಿಶೇಷತೆಯಿದೆ. ಇದರಲ್ಲಿ ನೀವು ಮೊದಲು ಯಾವ ಏನನ್ನು ಗುರುತಿಸುತ್ತೀರೋ ಅದು ನಿಮ್ಮ ವ್ಯಕ್ತಿತ್ವವನ್ನು ತಿಳಿಸಿಕೊಡುತ್ತದಂತೆ. ಅದರಲ್ಲೂ ನೀವು ಪ್ರೀತಿಯಲ್ಲಿದ್ದಾಗ ನಿಮ್ಮ ನಡವಳಿಕೆ ಹೇಗಿರುತ್ತದೆ ಎನ್ನುವುದನ್ನು ತಿಳಿಸಿಕೊಡುತ್ತದಂತೆ. ಇದರಲ್ಲಿ 4 ಚಿತ್ರಗಳಿವೆ. ಇನ್ನೊಮ್ಮೆ ಈ ಚಿತ್ರವನ್ನು ಸರಿಯಾಗಿ ನೋಡಿ. ಇದಕ್ಕೆ ಉತ್ತರಗಳನ್ನು ಕೆಳಗೆ ನೀಡಲಾಗಿದೆ.

ಚಿತ್ರ ಇಲ್ಲಿದೆ:

Optical Illusion on love (1)

ವೃದ್ಧನ ಮುಖವನ್ನು ಮೊದಲು ನೋಡಿದಿರಾ?

ನೀವು ವೃದ್ಧನ ಮುಖವನ್ನು ಮೊದಲು ನೋಡಿದರೆ, ನೀವು ದೂರದೃಷ್ಟಿಯನ್ನು ಎಂದಿಗೂ ಕಳೆದುಕೊಳ್ಳದ ವ್ಯಕ್ತಿ ಎಂದರ್ಥ. ಲೇಖಕಿ ರೆಬೆಕಾ ಜೇನ್ ಸ್ಟೋಕ್ಸ್ ಹೇಳುವ ಪ್ರಕಾರ, ‘ನಿಜವಾದ ಪ್ರೀತಿಗೆ ಅಗತ್ಯವಿರುವ ಸಮಯ, ಶ್ರಮ, ಶಕ್ತಿ ಮತ್ತು ಕಠಿಣ ಪರಿಶ್ರಮವನ್ನು ನೀವು ಮಾಡಲು ಸಿದ್ಧರಿರುತ್ತೀರಿ. ನಿಮ್ಮದೇ ರೀತಿಯ ವ್ಯಕ್ತಿತ್ವದ ಮತ್ತೋರ್ವರು ನಿಮ್ಮನ್ನು ಆಕರ್ಷಿಸುತ್ತಾರೆ’’.

ಕುದುರೆ ಸವಾರನನ್ನು ಮೊದಲು ಗುರುತಿಸಿದಿರಾ?

ಕುದುರೆ ಸವಾರನನ್ನು ನೀವು ಮೊದಲು ಗುರುತಿಸಿದರೆ, ಪ್ರೀತಿ ಮತ್ತು ಪ್ರಣಯದ ವಿಷಯಕ್ಕೆ ಬಂದಾಗ ನಿಮ್ಮ ಹೃದಯವನ್ನು ಪಳಗಿಸುವುದು ಕಷ್ಟವಂತೆ. ಲೇಖಕಿ ರೆಬೆಕಾ ಜೇನ್ ಸ್ಟೋಕ್ಸ್ ಪ್ರಕಾರ, ನೀವು ಪರಿಪೂರ್ಣ ಸಂಗಾತಿಯನ್ನು ಕಂಡುಕೊಂಡಿದ್ದರೂ ಸಹ ಹೊಂದಿಕೆಯಾಗಲು ಸಾಕಷ್ಟು ಸಮಯ ಬೇಕಾಗಬಹುದು. ಅವನು/ಅವಳು ನಿಮ್ಮ ಮುಂದೆಯೇ ಇರಬಹುದು, ಆದರೆ ಅದನ್ನು ಗುರುತಿಸಲು ನಿಮ್ಮ ಹೃದಯವು ಸಾಕಷ್ಟು ಸಮಯ ತೆಗೆದುಕೊಳ್ಳಬಹುದು.

ನದಿಯ ಪಕ್ಕ ಮಲಗಿರುವ ಯುವತಿಯನ್ನು ಮೊದಲು ಗಮನಿಸಿದಿರಾ?

ನೀವು ಮೊದಲು ನದಿಯ ಪಕ್ಕ ಮಲಗಿರುವ ಯುವತಿಯನ್ನು ಗುರುತಿಸಿದರೆ, ನಿಮ್ಮ ಹಿಂದಿನ ಪ್ರೀತಿಯಲ್ಲಿ ನೀವು ಯಶಸ್ವಿಯಾಗಲಿಲ್ಲ ಎಂದರ್ಥ. ನೀವು ನಿಧಾನವಾಗಿ ಗುಣಮುಖರಾಗಿದ್ದರೂ ಮತ್ತು ಮತ್ತೆ ಪ್ರೀತಿಯನ್ನು ಅನುಭವಿಸಲು ಸಿದ್ಧರಿದ್ದರೂ, ನೀವು ಬಯಸಿದ ರೀತಿಯಲ್ಲಿ ಅದು ನಿಮಗೆ ಸಿಗದಿರಬಹುದು ಎಂಬ ಭಯ ನಿಮ್ಮನ್ನು ಕಾಡುತ್ತಿರಬಹುದು. ಈಗ ಕಳೆದು ಹೋಗಿರುವ ಪ್ರೀತಿಯನ್ನು ನಿಮಗೆ ಮರೆಯಲು ಕಷ್ಟಸಾಧ್ಯವಾಗಿರಬಹುದು.

ಹರಿಯುವ ನದಿ ಹಾಗೂ ಕಲ್ಲಿನ ಕಮಾನನ್ನು ಗುರುತಿಸಿದಿರಾ?

ನೀವು ಮೊದಲು ಕಮಾನನ್ನು ಗುರುತಿಸಿದರೆ, ನೀವು ಸಾಹಸಿ ವ್ಯಕ್ತಿತ್ವದವರು ಎಂದರ್ಥ. ನಿಮಗೆ ಏಕಾಂಗಿಯಾಗಿ ಸಂಚರಿಸುವುದು, ಸುತ್ತಾಡುವುದು ಇಷ್ಟ. ಹಾಗೆಯೇ ಸಂಗಾತಿಯ ಬಗ್ಗೆಯೂ ಹಂಬಲಿಸುತ್ತೀರಿ. ನಿಮಗೆ ಸುತ್ತಾಟ ಇಷ್ಟವೇ ಇದ್ದರೂ ನೀವು ಏಕಾಂಗಿಯಾಗಿರಬೇಕು ಎಂದರ್ಥವಲ್ಲ ಎನ್ನುತ್ತಾರೆ ಬರಹಗಾರ್ತಿ ರೆಬೆಕಾ.

ಈ ಚಿತ್ರಗಳಲ್ಲಿ ನೀವು ಯಾವುದನ್ನು ಮೊದಲು ಗುರುತಿಸಿದಿರಿ?

ಇದನ್ನೂ ಓದಿ: ಈ ಮಾವಿನ ಹಣ್ಣುಗಳ ನಡುವೆ ಗಿಳಿಯೊಂದು ಅಡಗಿ ಕುಳಿತಿದೆ; ನೀವು ಗುರುತಿಸಬಲ್ಲಿರಾ?

Viral Photo: ಈ 6 ಯುವತಿಯರಿಗೆ 5 ಜೋಡಿ ಮಾತ್ರ ಕಾಲುಗಳಿವೆ!; ಏನಿದು ಚಮತ್ಕಾರ ಅಂತೀರಾ?

Published On - 2:21 pm, Wed, 13 April 22