Viral Photo: ಈ 6 ಯುವತಿಯರಿಗೆ 5 ಜೋಡಿ ಮಾತ್ರ ಕಾಲುಗಳಿವೆ!; ಏನಿದು ಚಮತ್ಕಾರ ಅಂತೀರಾ?

ನಾವು ಚಿತ್ರದಲ್ಲಿ ಕೇವಲ 5 ಜೋಡಿ ಕಾಲುಗಳನ್ನು ಮಾತ್ರ ನೋಡುತ್ತೇವೆ. ಆದರೆ, 6 ಯುವತಿಯರ ಮುಖಗಳಿವೆ. ಹಾಗಾದರೆ, ಸೋಫಾದಲ್ಲಿ ಮಧ್ಯದಲ್ಲಿರುವ ಹುಡುಗಿಗೆ ಕಾಲೇ ಇಲ್ಲವೇ? ಆಕೆಯ ಕಾಲು ಎಲ್ಲಿದೆ?

Viral Photo: ಈ 6 ಯುವತಿಯರಿಗೆ 5 ಜೋಡಿ ಮಾತ್ರ ಕಾಲುಗಳಿವೆ!; ಏನಿದು ಚಮತ್ಕಾರ ಅಂತೀರಾ?
6 ಯುವತಿಯರ ವೈರಲ್ ಫೋಟೋ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 12, 2022 | 8:34 PM

ಕೆಲವೊಂದು ಫೋಟೋಗಳನ್ನು ನೋಡಿದಾಗ ಭ್ರಮೆ ಉಂಟಾಗುತ್ತದೆ. ನೋಡಲು ರಿಯಲ್ ಆಗಿ ಕಂಡರೂ ಅದರೊಳಗೆ ಆಪ್ಟಿಕಲ್ ಭ್ರಮೆ ಇರುತ್ತದೆ. ಒಂದೆರಡು ವಾರಗಳ ಹಿಂದೆ ‘ಮತ್ಸ್ಯಕನ್ಯೆ’ ಚಿತ್ರದಲ್ಲಿ ಮರೆಮಾಡಲಾಗಿರುವ ಎರಡು ಪ್ರಾಣಿಗಳ ಫೋಟೋವನ್ನು ನೀಡಿದ್ದ ನಾವು ಈ ಬಾರಿ ಸೋಫಾದಲ್ಲಿ ಕುಳಿತಿರುವ ಆರು ಮಹಿಳೆಯರ ಫೋಟೋವೊಂದನ್ನು ತೋರಿಸುತ್ತಿದ್ದೇವೆ. ನಾವು ಚಿತ್ರದಲ್ಲಿ ಕೇವಲ 5 ಜೋಡಿ ಕಾಲುಗಳನ್ನು ಮಾತ್ರ ನೋಡುತ್ತೇವೆ. ಆದರೆ, 6 ಯುವತಿಯರ ಮುಖಗಳಿವೆ. ಹಾಗಾದರೆ, ಸೋಫಾದಲ್ಲಿ ಮಧ್ಯದಲ್ಲಿರುವ ಹುಡುಗಿಗೆ ಕಾಲೇ ಇಲ್ಲವೇ? ಆಕೆಯ ಕಾಲು ಎಲ್ಲಿದೆ?

ಈ ಫೋಟೋವನ್ನು ನೋಡಿ ನಿಮ್ಮ ತಲೆಕೆಡಬಹುದು. ಆರು ಗೆಳತಿಯರು ಸೋಫಾದ ಮೇಲೆ ಕುಳಿತಿದ್ದಾರೆ. ಒಬ್ಬರು ಕೊನೆಯಲ್ಲಿ ಸೋಫಾದ ಹಿಡಿಕೆಯ ಮೇಲೆ ಕುಳಿತಿದ್ದಾರೆ. ಯಾವ ಕಾಲುಗಳ ಸೆಟ್ ಅವಳದು ಎಂದು ನಮಗೆ ತಿಳಿದಿದೆ. ಸೋಫಾದ ಮೇಲಿರುವ ಐವರು ಸ್ನೇಹಿತೆಯರ ಪೈಕಿ 4 ಕಾಲುಗಳ ಸೆಟ್ ಮಾತ್ರ ಇದೆ. ಎಡಭಾಗದಿಂದ ಮೂರನೇ ಸ್ಥಾನದಲ್ಲಿ ಕುಳಿತಿರುವ ಮಹಿಳೆ ತನ್ನ ಕಾಲುಗಳನ್ನು ಕಳೆದುಕೊಂಡಿರುವಂತೆ ತೋರುತ್ತಿದೆ. ಆದರೆ, ವಾಸ್ತವವೆಂದರೆ ಆ ಯುವತಿಯ ಕಾಲು ಇನ್ನೋರ್ವ ಯುವತಿಯ ಕಾಲಿನ ಹಿಂದೆ ಸೇರಿಕೊಂಡಿದೆ. ಹೀಗಾಗಿ, ಆಕೆಗೆ ಕಾಲೇ ಇಲ್ಲವೇನೋ ಎಂಬ ಭ್ರಮೆ ಮೂಡುತ್ತದೆ.

6 ಯುವತಿಯರ ವೈರಲ್ ಫೋಟೋ

ಇಂತಹ ಭ್ರಮೆ ಜನರನ್ನು ಬೆಚ್ಚಿ ಬೀಳಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ನಾಲ್ಕು ವ್ಯಕ್ತಿಗಳು ಕಾಡಿನ ಮೂಲಕ ಬೆನ್ನುಹೊರೆಯುತ್ತಿರುವ ಚಿತ್ರ ವೈರಲ್ ಆಗಿತ್ತು. ಆ ಫೋಟೋದಲ್ಲಿ ಮೂವರು ಮಾತ್ರ ಕಾಣುತ್ತಿದ್ದರು. ಆದರೆ, 4 ಬಾಟಲಿಗಳನ್ನು ಹಿಡಿದ ಕೈಗಳಿದ್ದವು. ನೀವು ಆ ಫೋಟೋವನ್ನು ಇನ್ನೂ ನೋಡಿಲ್ಲವಾದರೆ ಒಮ್ಮೆ ನೋಡಿ ನಿಮ್ಮ ತಲೆಗೆ ಮತ್ತೊಮ್ಮೆ ಹುಳ ಬಿಟ್ಟುಕೊಳ್ಳಿ.

ಇದನ್ನೂ ಓದಿ: Viral Photo: ಕೈಗಾಡಿಯಲ್ಲಿ ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ವೃದ್ಧ; ಚಿಕಿತ್ಸೆ ವೇಳೆ ವೃದ್ಧೆ ಸಾವು

Viral Photo: ಪೂಜೆ ವೇಳೆ ಅಮ್ಮ ಮಾಡಿದ ಆ ಒಂದು ಕೆಲಸದಿಂದ ಮುಜುಗರಕ್ಕೀಡಾದ ಮಗ; ಫೋಟೋ ವೈರಲ್