Viral Video: ಮಳೆಯ ಆಹ್ಲಾದಕ್ಕೆ ಮನಸೋತ ಮರಿಯಾಮೆಗಳ ವಿಡಿಯೋ

Rains : ಎಂದೂ ಆರಿಹೋಗದ ಅರಿಷಿಣವನ್ನು ಇವುಗಳಿಗೆ ಮೆತ್ತಿ ಹೋದವರ್ಯಾರೋ. ಈ ಮಳೆಯ ಪುಳಕವನ್ನು ಅನುಭವಿಸಲು ಹೀಗೆ ಕಲಿಸಿದವರ್ಯಾರೋ. ಇವು ಆಕಾಶಕ್ಕೆ ಮುಖವೆತ್ತುವುದನ್ನು ನೋಡುವದೇ ಛಂದದಲ್ಲಿ ಛಂದ.

Viral Video: ಮಳೆಯ ಆಹ್ಲಾದಕ್ಕೆ ಮನಸೋತ ಮರಿಯಾಮೆಗಳ ವಿಡಿಯೋ
ಮಳೆಹನಿಯ ಪುಳಕದಲ್ಲಿ ಆಮೆಮರಿಗಳು
Updated By: ಶ್ರೀದೇವಿ ಕಳಸದ

Updated on: May 31, 2023 | 11:58 AM

Rain : ಧಗೆಗೆ ಬೆಂದು ಬಸವಳಿಯುವ ನಾವುಗಳು ನಿತ್ಯವೂ ಮಳೆಹನಿಗಾಗಿ ಅದೆಷ್ಟು ಪರಿತಪಿಸುತ್ತೇವೆ. ನಾವಷ್ಟೇ ಏಕೆ ಭೂಮಿ ಮೇಲಿನ ಪ್ರತೀ ಜೀವಿಯೂ ಈ ಮಳೆಯ ಸೆಳಕಿಗಾಗಿ ಹಂಬಲಿಸುತ್ತಿರುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಹಳದಿ ಮತ್ತು ಕಪ್ಪು ಕವಚವುಳ್ಳ ಈ ಆಮೆಮರಿಗಳು (Turtles) ಹೇಗೆ ಮುಗಿಲಿಗೆ ಮುಖವೊಡ್ಡಿ ಮಳೆಹನಿಗಳ ಪುಳಕವನ್ನು ಅನುಭವಿಸುತ್ತಿವೆಯಲ್ಲ?

ಈತನಕ ಈ ವಿಡಿಯೋ ಅನ್ನು 1 ಮಿಲಿಯನ್​ಗಿಂತಲೂ  ಹೆಚ್ಚು ಜನ ನೋಡಿದ್ದಾರೆ. ಆಹಾ ಎಂಥ ಮುದ್ದಾಗಿದೆ ಈ ವಿಡಿಯೋ, ಪುಟಾಣಿ ಆಮೆಗಳು ಮಳೆಯನ್ನು ಅನುಭವಿಸುವುದನ್ನು ಎರಡು ಕಣ್ಣು ಸಾಲದು. ಈವತ್ತು ನೋಡಿದ ಎಲ್ಲಾ ವಿಡಿಯೋಗಳಲ್ಲಿ ಅತ್ಯಂತ ಕ್ಯೂಟ್​ ವಿಡಿಯೋ ಇದು. ನೀರು ಎನ್ನುವುದು ಎಷ್ಟು ಅತ್ಯಮೂಲ್ಯ… ಅಂತೆಲ್ಲ ಪ್ರತಿಕ್ರಿಯಿಸಿದ್ಧಾರೆ ನೆಟ್ಟಿಗರು.

ಇದನ್ನೂ ಓದಿ : Viral Video: ಚೈನೀಸ್​ ಖಾದ್ಯದಲ್ಲಿ ಜೀವಂತ ಕಪ್ಪೆಮರಿ; ಗ್ರಾಹಕರ ಕ್ಷಮೆ ಕೇಳಿದ ರೆಸ್ಟೋರೆಂಟ್ 

ಪ್ರತೀ ಜೀವಿಗೂ ಪ್ರಕೃತಿಸಹಜವಾದ ಪ್ರತಿಯೊಂದನ್ನೂ ಅನುಭವಿಸುವ ಹಕ್ಕು ಇದೆ. ಕಣ್ಣು ಮತ್ತು ಮನಸ್ಸನ್ನು ತೆರೆದು ಗಮನಿಸಿದರೆ ಅನೇಕ ಸೂಕ್ಷ್ಮಗಳು ಅರಿವಿಗೆ ಬರುತ್ತದೆ. ಜೀವವೈವಿಧ್ಯಕ್ಕೆ ಸಂಬಂಧಿಸಿದ ವರ್ತಮಾನಗಳ ಬಗ್ಗೆ ಕುತೂಹಲವನ್ನು ಬೆಳೆಸಿಕೊಳ್ಳುವುದು ಅತ್ಯಂತ ಅವಶ್ಯ. ಮಕ್ಕಳಿಗೂ ಇಂಥ ಸಂಗತಿಗಳ ಬಗ್ಗೆ ಗಮನಿಸುವುದನ್ನು ಹೇಳಿಕೊಡಿ. ಇಂಥ ಸಣ್ಣಪುಟ್ಟ ವಿಡಿಯೋಗಳನ್ನು ತೋರಿಸಿ ಆಸಕ್ತಿಯನ್ನು ಬೆಳೆಸುವುದರೊಂದಿಗೆ ಈ ಯಾನ ಶುರುವಾಗಲಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:57 am, Wed, 31 May 23