ಕೂಲರ್ ಬಾಕ್ಸ್ ಮೇಲೆ ತಲೆ ಇಟ್ಟು ಬಿಸಿಲು ಕಾಯಿಸುತ್ತಿರುವ ಕೂಲ್ ಮೊಸಳೆಯನ್ನೊಮ್ಮೆ ನೋಡಿ. ಪಿಕ್ನಿಕ್ ಮಾಡಲು ಬಂದ ಕುಟುಂಬವೊಂದರ ಕೂಲರ್ ಬಾಕ್ಸ್ನ್ನು ಮೊಸಳೆಗರಡು ಕದ್ದು ಕೊಂಡು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ರಜಾದಿನದಲ್ಲಿ ಈ ಕುಟುಂಬ ಪಿಕ್ನಿಕ್ ಮಾಡಲು ಕರೆಯ ಬದಿಯ ಸುಂದರ ತಾಣವನ್ನು ಆಯ್ಕೆ ಮಾಡಿದ್ದಾರೆ. ಅದರಂತೆಯೇ ಅಲ್ಲಿ ಸಮಯ ಕಳೆಯಲು ಸಾಕಷ್ಟು ತಿಂಡಿಗಳು ಹಾಗು ಡ್ರಿಂಕ್ಸ್ಗಳನ್ನು ಕೂಡ ತೆಗೆದು ಬಂದಿದ್ದಾರೆ. ಆದರೆ ಮೊಸಳೆಯೊಂದು ಇವರ ಪಿಕ್ನಿಕ್ಗೆ ಕರೆಯದೇ ಅತಿಥಿಯಾಗಿ ಬಂದಿದೆ. ಬಂದಿದ್ದು ಮಾತ್ರವಲ್ಲ, ಹೋಗುವಾಗ ಕೂಲರ್ ಬಾಕ್ಸ್ನ್ನು ಕೂಡ ತೆಗೆದುಕೊಂಡಿದೆ ಹೋಗಿದೆ. ಇವಿಷ್ಟು ವಿಡಿಯೋದಲ್ಲಿ ಸೆರೆಯಾಗಿದ್ದು, ಈ ವಿಡಿಯೋವನ್ನು ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಇದೀಗಾ ಭಾರೀ ವೈರಲ್ ಆಗಿದೆ. ವಿಡಿಯೋ ಇಲ್ಲಿದೆ ನೋಡಿ.
ಇದನ್ನೂ ಓದಿ: ಕರಡಿ ಮರಿಯನ್ನು ತಬ್ಬಿಕೊಂಡು ಮುದ್ದಾಡಿದರೆ ಸಾಕು ಕೈ ತುಂಬಾ ಸಂಬಳ, ಇಲ್ಲಿದೆ ನೋಡಿ ಜಾಬ್ ಆಫರ್ ಪೋಸ್ಟ್
ಎರಡು ದಿನಗಳ ಹಿಂದೆ (ಮಾ. 20) ವಿಡಿಯೋ ಪೋಸ್ಟ್ ಮಾಡಲಾಗಿದೆ. ಹಂಚಿಕೊಂಡ ನಂತರ ಈಗಾಗಲೇ 1.5 ಲಕ್ಷ ವೀಕ್ಷಣೆ ಪಡೆದಿದೆ. ಹೆಚ್ಚುವರಿಯಾಗಿ, ಹಂಚಿಕೆಯು 1,900 ಕ್ಕೂ ಹೆಚ್ಚು ಲೈಕ್ಗಳು ಹಾಗೂ ಸಾಕಷ್ಟು ಕಾಮೆಂಟ್ಗಳನ್ನು ಕಾಣಬಹುದು.
ಜನರು ಕಾಡುಗಳಲ್ಲಿ ಅಥವಾ ಇಂತಹ ಪ್ರದೇಶಗಳಲ್ಲಿ ಪಿಕ್ನಿಕ್ ಎಂದು ಸಮಯ ಕಳೆಯುವಾಗ ಅದಷ್ಟು ಎಚ್ಚರದಿಂದಿರುವುದು ಅಗತ್ಯ. ಇಲ್ಲದಿದ್ದರೆ ಇವುಗಳಿಗೆ ನೀವು ಆಹಾರವಾಗಬಹುದು ಎಂದು ಫೇಸ್ ಬುಕ್ ಬಳಕೆದಾರರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಕರೆಯದೇ ಬಂದ ಅತಿಥಿ, ಹೇಗೆ ಕದ್ದು ಕೊಂಡು ಹೋಗುತ್ತಿದೆ ನೋಡಿ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 1:10 pm, Wed, 22 March 23