Video: ಹಕ್ಕಿಗಳ ನಡುವಿನ ಜಗಳ ಬಿಡಿಸಿದ ಮಹಿಳೆ, ವೈರಲ್‌ ಆಯ್ತು ದೃಶ್ಯ

ಮನೆಯಲ್ಲಿ ಸಾಕಿದ ಪಕ್ಷಿಗಳನ್ನು ಹೊರತು ಪಡಿಸಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳು ಮನುಷ್ಯರ ಮಾತಿಗೆ ಪ್ರತಿಕ್ರಿಯಿಸುತ್ತವೆ. ಒಂದು ಸಲ ನೀವೇನಾದ್ರು ಕಾಳು ಹಾಕಿದ್ರ ಸಾಕು ತುತ್ತು ಹಾಕಿದ್ದನ್ನು ಮರೆಯಲ್ಲ. ಇದೀಗ ಮಹಿಳೆಯೊಬ್ಬಳು ಹಕ್ಕಿಗಳ ನಡುವಿನ ಜಗಳ ನಿಲ್ಲಿಸಿ ರಾಜಿ ಮಾಡಿಸಿದ್ದಾಳೆ. ಈ ಮುದ್ದಾದ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

Video: ಹಕ್ಕಿಗಳ ನಡುವಿನ ಜಗಳ ಬಿಡಿಸಿದ ಮಹಿಳೆ, ವೈರಲ್‌ ಆಯ್ತು ದೃಶ್ಯ
ವೈರಲ್‌ ವಿಡಿಯೋ
Image Credit source: Facebook

Updated on: Mar 03, 2026 | 11:39 AM

ಮನುಷ್ಯರಿಗಿಂತ ಪ್ರಾಣಿ ಪಕ್ಷಿಗಳೇ (animals and birds) ಲೇಸು. ಒಂದು ತುತ್ತು ಅನ್ನ ಹಾಕಿದರೆ ಸಾಕು, ದಿನನಿತ್ಯ ಮನೆ ಮುಂದೆ ಬರುತ್ತವೆ. ಮನುಷ್ಯ ಹಾಗೂ ಪಕ್ಷಿಯ (Bird) ಸ್ನೇಹಪರ ಸಂಬಂಧಕ್ಕೆ ಈ ವಿಡಿಯೋನೇ ಸಾಕ್ಷಿ. ಮನೆಯ ಹತ್ತಿರ ಹಾರಿ ಬಂದು ಬಾಲ್ಕನಿಯಲ್ಲಿ ಕುಳಿತುಕೊಂಡಿದ್ದ ಹಕ್ಕಿಗಳೆರಡು ಜಗಳವಾಡುತ್ತಿದ್ದು,  ಮಹಿಳೆಯೊಬ್ಬಳು ಈ ಹಕ್ಕಿಗಳ ನಡುವಿನ ಜಗಳವನ್ನು ಬಿಡಿಸಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈ ದೃಶ್ಯ ನೋಡಿ ನೆಟ್ಟಿಗರು ಅಚ್ಚರಿ ಪಟ್ಟುಕೊಂಡಿದ್ದಾರೆ.

Puja mondal ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಹಕ್ಕಿಗಳ ನಡುವಿನ ಜಗಳವನ್ನು ಬಿಡಿಸಿದ್ದಾಳೆ. ಮಹಿಳೆಯೂ ಮನೆಯ ಬಾಲ್ಕನಿಯಲ್ಲಿ ಕಿತ್ತಾಡಿಕೊಳ್ಳುತ್ತಿದ್ದ ಹಕ್ಕಿಗಳ ನಡುವೆ  ರಾಜಿ ಸಂಧಾನ ಮಾಡಿಸಿರುವ ದೃಶ್ಯವನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಶ್ವಾನವನ್ನು ಕಂಡೊಡನೆ ತಬ್ಬಿ ಮುದ್ದಾಡಿದ ಗೊರಿಲ್ಲಾ

ಈ ವಿಡಿಯೋ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ ಎಂದರೆ, ಮತ್ತೊಬ್ಬರು, ತುಂಬಾ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ಹಕ್ಕಿಗಳು ತುಂಬಾನೇ ಜಗಳ ಆಡುತ್ತವೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us