ಸಾಮಾಜಿಕ ಜಾಲತಾಣದಲ್ಲಿ ದೆಹಲಿ ಮೆಟ್ರೋದಲ್ಲಿ ನಡೆಯುವ ಚಿತ್ರ ವಿಚಿತ್ರ ಘಟನೆಗಳ ಬಗೆಗಿನ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಕೆಲವೊಮ್ಮೆ ಪ್ರಯಾಣಿಕರ ನಡುವಿನ ವಾದ ವಿವಾದಗಳು, ಸೀಟಿಗಾಗಿ ನಡೆಯುವ ಜಡೆ ಜಗಳಗಳು, ಪ್ರೇಮಿಗಳ ರೊಮ್ಯಾನ್ಸ್, ರೀಲ್ಸ್ ಹುಚ್ಚಾಟ ಹೀಗೆ ಇಂತಹ ಒಂದಲ್ಲಾ ಒಂದು ಘಟನೆಗಳಿಗೆ ಸಂಬಧಿಸಿದ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಯೂಟ್ಯೂಬರ್ ಒಬ್ಬರು, ಮೆಟ್ರೋದಲ್ಲಿ ಪ್ರಯಾಣಿಕರ ಪರ್ಸ್, ಮೊಬೈಲ್ ಕಳ್ಳತನ ಮಾಡುತ್ತಿದ್ದಂತಹ ಜೇಬುಗಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು, ವಿಡಿಯೋ ಮಾಡುತ್ತಾ ಕಳ್ಳನ ಕಪಾಳಕ್ಕೆ ಬಾರಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು @Gharkekalesh ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ದೆಹಲಿ ಮೆಟ್ರೋದಲ್ಲಿ ವ್ಲಾಗರ್ ಕೈಗೆ ಮೊಬೈಲ್ ಕಳ್ಳ ಸಿಕ್ಕಿಬಿದ್ದಿದ್ದಾನೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Mobile Thief Got Caught by Kaleshi Vlogger inside Delhi Metro
pic.twitter.com/IuJcCjo4cK— Ghar Ke Kalesh (@gharkekalesh) May 14, 2024
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ದೆಹಲಿ ಮೆಟ್ರೋದಲ್ಲಿ ಸಿಕ್ಕಿದ್ದೆ ಚಾನ್ಸ್ ಎನ್ನುತ್ತಾ ಕಳ್ಳನೊಬ್ಬ ಪ್ರಯಾಣಿಕರ ಜೇಬಿನಿಂದ ಪರ್ಸ್, ಮೊಬೈಲ್ ಎಗರಿಸುವ ಕೆಲಸಕ್ಕೆ ಮುಂದಾಗಿದ್ದಾನೆ. ಅಲ್ಲೇ ವಿಡಿಯೋ ಮಾಡುತ್ತಾ ನಿಂತಿದ್ದ ಇದ್ದ ಯೂಟ್ಯೂಬರ್ ಒಬ್ಬರಿಗೆ ಈತನ ಕಳ್ಳಾಟ ಗೊತ್ತಾಗಿ ಆತನ ಕತ್ತಿನ ಪಟ್ಟಿ ಹಿಡಿದು ಏನ್ ಮಾಡ್ತಿದ್ದೀಯಾ ನೀನು ಎಂದು ಕೇಳುತ್ತಾರೆ. ಅದಕ್ಕೆ ಆ ಕಳ್ಳ ನಾನು ನನ್ನ ಮೊಬೈಲ್ ಹುಡುಕುತ್ತಿದ್ದೇನೆ ಎಂದು ಸುಳ್ಳು ಹೇಳ್ತಾನೆ. ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಖುಷಿಯಲ್ಲಿ ಆ ಯೂಟ್ಯೂಬರ್ ವಿಡಿಯೋ ಮಾಡುತ್ತಾ ಅಮ್ಮಾ…. ನಾನು ಕಳ್ಳನನ್ನು ಹಿಡಿದುಬಿಟ್ಟೆ ಎನ್ನುತ್ತಾ ಕಳ್ಳನ ಕಪಾಳಕ್ಕೆ ಬಾರಿಸಿ ಇನ್ನು ಮುಂದೆ ಕಳ್ಳತನ ಮಾಡದಂತೆ ಬುದ್ಧಿವಾದ ಹೇಳುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಆಸ್ಟ್ರೇಲಿಯಾದ ಬೀದಿಗಳಲ್ಲಿ ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ನಡೆದಾಡುತ್ತಿರುವ ಜನರು; ಏನಿದು ಹೊಸ ಟ್ರೆಂಡ್
ಮೇ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಆ ಯೂಟ್ಯೂಬರ್ ಈ ಕ್ಷಣಕ್ಕಾಗಿ ಅದೆಷ್ಟು ದಿನದಿಂದ ಕಾದು ಕುಳಿತಿದ್ದರೋ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ