AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಗುಟ್ಕಾ ತಿಂದು ಶಾರುಖ್ ಖಾನ್ ಇನ್ನು ಸತ್ತಿಲ್ಲ ಮತ್ತೆ ನಾವು ಹೇಗೆ ಸಾಯ್ತೀವಿ, ಈ ಬಾಲಕನ ಉತ್ತರ ಕೇಳಿ

ಸಿನಿಮಾ ತಾರೆಯರು, ಸೆಲೆಬ್ರಿಟಿಗಳು ಹಣಕ್ಕಾಗಿ ಮಾಡುವ ಗುಟ್ಕಾ, ಜೂಜಿನ ಜಾಹೀರಾತುಗಳು ಪುಟ್ಟ ಮಕ್ಕಳು ಮತ್ತು ಯುವ ಜನತೆಯ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತವೆ ಎನ್ನುವುದನ್ನು ತೋರಿಸುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಗುಟ್ಕಾ ತಿನ್ನುವ ಶಾರುಖಾ ಖಾನ್ ಸತ್ತಿಲ್ಲ, ಇನ್ನೂ ನಾವ್ ಹೇಗೆ ಸಾಯೋಕೆ ಸಾಧ್ಯ ಎಂದು ಗುಟ್ಕಾ ಚಟಕ್ಕೆ ಬಿದ್ದ ಬಾಲಕನೊಬ್ಬನ ಮಾತುಗಳನ್ನು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. 

Viral Video: ಗುಟ್ಕಾ ತಿಂದು ಶಾರುಖ್ ಖಾನ್ ಇನ್ನು ಸತ್ತಿಲ್ಲ ಮತ್ತೆ ನಾವು ಹೇಗೆ ಸಾಯ್ತೀವಿ, ಈ ಬಾಲಕನ ಉತ್ತರ ಕೇಳಿ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: May 15, 2024 | 6:08 PM

Share

ಜನರು ತಮ್ಮ ನೆಚ್ಚಿನ ನಟರ ಡ್ರೆಸ್ಸಿಂಗ್ ಸ್ಟೈಲ್, ಹೇರ್ ಸ್ಟೈಲ್‌ಗಳನ್ನು ಅನುಸರಿಸುವುದು ಸಾಮಾನ್ಯ. ಅದೇ ನಟರು ಗುಟ್ಕಾ, ಜೂಜು ಇತ್ಯಾದಿ ಮನೆಹಾಳು  ಜಾಹೀರಾತಿನಲ್ಲಿ ಕಾಣಿಸಿಕೊಂಡಾಗ ಪ್ರೇಕ್ಷಕರು ಇನ್ನೊಂದಿಷ್ಟು ಪ್ರಚೋದನೆಗೆ  ಒಳಗಾಗುತ್ತಾರೆ. ಗುಟ್ಕಾ ಜಾಹೀರಾತಿನಿಂದ ವಯಸ್ಕರರು ಮಾತ್ರವಲ್ಲ ಪುಟ್ಟ ಮಕ್ಕಳೂ ಕೂಡಾ ಗುಟ್ಕಾ ಸೇವನೆಯ ಚಟಕ್ಕೆ ಬಿದ್ದಿದ್ದಾರೆ.  ಇದೇ ಕಾರಣಕ್ಕಾಗಿ ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಅಜಯ್ ದೇವಗನ್, ಅಕ್ಷಯ್ ಕುಮಾರ್, ಶಾರುಖ್ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಟ್ರೋಲ್ ಆಗುತ್ತಿರುತ್ತಾರೆ. ಇದೀಗ ಈ ಸಿನಿಮಾ ತಾರೆಯರು, ಸೆಲೆಬ್ರಿಟಿಗಳು ಹಣಕ್ಕಾಗಿ ಮಾಡುವ ಗುಟ್ಕಾ, ಜೂಜಿನ ಜಾಹೀರಾತುಗಳು ಪುಟ್ಟ ಮಕ್ಕಳು ಮತ್ತು ಯುವ ಜನತೆಯ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತವೆ ಎಂಬುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸತ್ಯ-ನ್ಯಾಯ-ಪ್ರೀತಿ ಎಂಬ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಸಿನಿಮಾ ತಾರೆಯರು, ಸೆಲೆಬ್ರಿಟಿಗಳು ಹಣಕ್ಕಾಗಿ ಮಾಡುವ ಜಾಹೀರಾತುಗಳು ಮಕ್ಕಳನ್ನು ಹೇಗೆ ಹಾಳು ಮಾಡುತ್ತವೆ ನೋಡಿ…” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್‌ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಗುಟ್ಕಾ ತಿನ್ನುತ್ತಿದ್ದ ಪುಟ್ಟ ಮಕ್ಕಳ ಜೊತೆ ಮಾತುಕತೆ ನಡೆಸುವಂತಹ ದೃಶ್ಯಾವಳಿಯನ್ನು ಕಾಣಬಹುದು. ವ್ಯಕ್ತಿಯೊಬ್ಬರು ಬಾಲಕನ ಬಳಿ ಗುಟ್ಕಾ ತಿಂತಿದ್ದೀಯಲ್ವಾ, ಸತ್ತು ಹೋದ್ರೆ ಏನ್‌ ಮಾಡ್ತೀಯಾ ಎಂದು ಪ್ರಶ್ನೆ ಕೇಳ್ತಾರೆ. ಅದಕ್ಕೆ ಆ ಬಾಲಕ ಶಾರುಖ್‌ ಖಾನ್‌ ಇನ್ನೂ ಸತ್ತಿಲ್ಲ ಮತ್ತೆ ನಾವು ಹೇಗೆ ಸಾಯ್ತೀವಿ ಎಂದು ಹೇಳುತ್ತಾನೆ. ಅಲ್ಲ ಮಾರಾಯ ಶಾರುಖ್‌ ಖಾನ್‌ ಏಕೆ ಸಾಯ್ಬೇಕು ಎಂದು ಆ ವ್ಯಕ್ತಿ ಕೇಳ್ತಾರೆ. ಅದಕ್ಕೆ ಬಾಲಕ ಅವರು ಗುಟ್ಕಾ ತಿನ್ತಾರಲ್ವಾ, ನಾನು ಜಾಹೀರಾತಿನಲ್ಲಿ ನೋಡಿದ್ದೇನೆ ಅವರು ಗುಟ್ಕಾ ತಿನ್ನೋದನ್ನು ಎಂದು ಹೇಳುತ್ತಾನೆ. ಈತನ ಮಾತು ಕೇಳಿದ್ರೆ ಗುಟ್ಕಾ ಜಾಹೀರಾತು ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರಿವೆ ಎಂದು ತಿಳಿಯುತ್ತದೆ.

ಇದನ್ನೂ ಓದಿ: ನೀರು ಕುಡಿಯುತ್ತಿದ್ದ ಆನೆಯ ಮೇಲೆ ಏಕಾಏಕಿ ದಾಳಿ ಮಾಡಿದ ಮೊಸಳೆ, ಭಯಾನಕ ದಾಳಿಯ ವಿಡಿಯೋ ಇಲ್ಲಿದೆ 

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.5 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕೇವಲ ಗುಟ್ಕಾ ಮಾತ್ರವಲ್ಲ ಸಾರಾಯಿ, ಜೂಜು ಇನ್ನೂ ಅನೇಕ ಜಾಹೀರಾತುಗಳು ಅಮಾಯಕರ ಜೀವವನ್ನೇ ಹಾಳು ಮಾಡಿವೆ ಎಂದು ನೆಟ್ಟಿಗರು ಕಾಮೆಂಟ್ಸ್‌ ಮಾಡುವ ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ