ನಮ್ಮಲ್ಲಿ ದಯೆ ಮತ್ತು ಕರುಣೆ ತುಂಬಿದ್ದರೆ ಮಾತ್ರ ನಾವು ನಿಜವಾಗಿಯೂ ಮನುಷ್ಯರು ಎಂದೆನಿಸಿಕೊಳ್ಳುತ್ತೇವೆ. ಆದರೆ ಇಂದು ಜನರಲ್ಲಿ ಮಾನವೀಯ ಮೌಲ್ಯಗಳು ಸತ್ತು ಹೋಗಿದೆ ಅಂತಾನೇ ಹೇಳಬಹುದು. ತಮ್ಮ ಸ್ವಂತದವರಿಗೆಯೇ ಒಂದು ರೂಪಾಯಿ ಕೊಡಲು ಹಿಂದೆ ಮುಂದೆ ನೋಡುವವರು, ಹೆತ್ತ ತಂದೆ ತಾಯಿಯನ್ನೇ ವೃದ್ಧಾಶ್ರಮಕ್ಕೆ ಕಳುಹಿಸುವವರು ಕೇವಲ ತಮ್ಮ ಸ್ವಾರ್ಥಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಬೇಕು ಎಂಬ ಕಾರಣಕ್ಕೆ ಕ್ಯಾಮೆರಾ ಮುಂದೆ ತೋರ್ಪಡಿಕೆಗಾಗಿ ಕೈಲಾಗದವರಿಗೆ ಸಹಾಯ ಮಾಡುತ್ತಾ, ಆ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ. ಇಂತಹ ಜನರ ಮಧ್ಯೆ ನಿಜವಾದ ಮಾನವೀಯತೆ ಅಂದ್ರೆ ಏನು ಎಂಬುದನ್ನು ಈ ದಂಪತಿ ಕಲಿಸಿಕೊಟ್ಟಿದ್ದಾರೆ. ಹೌದು ರಸ್ತೆ ಬದಿಗಳಲ್ಲಿ ಅಸಹಾಯಕವಗಾಗಿ ಜೀವನ ನಡೆಸುವ ನಿರ್ಗತಿಕರನ್ನು ಕಂಡು ಮುಖಸಿಂಡರಿಸಿ, ಅವರು ಅಸಹ್ಯವೇನೋ ಎಂಬಂತೆ ನೋಡುವ ಜನಗಳ ಮಧ್ಯೆ, ಈ ದಂಪತಿ ನಿರ್ಗತಿಕ ವೃದ್ಧೆಯೊಬ್ಬರಿಗೆ ತಮ್ಮ ಕೈಲಾದಷ್ಟು ಧನ ಸಹಾಯ ಮಾಡಿದ್ದು ಮಾತ್ರವಲ್ಲದೆ, ಆ ವೃದ್ಧೆಯ ಕಾಲಿಗೆ ಬಿದ್ದು ಆಶಿರ್ವಾದವನ್ನು ತೆಗೆದುಕೊಂಡಿದ್ದಾರೆ. ಈ ದಂಪತಿಯನ್ನು ನೋಡಿ ನಾವುಗಳು ಮಾನವೀಯ ಮೌಲ್ಯವನ್ನು ಕಲಿಯುವುದು ತುಂಬಾನೇ ಇದೆ ಅನ್ನುತ್ತಿದ್ದಾರೆ ನೆಟ್ಟಿಗರು.
ಬಾಲಿವುಡ್ ಕೊರಿಯೋಗ್ರಾಫರ್ ಹಾಗೂ ಡೈರೆಕ್ಟರ್ ರೆಮೋ ಡಿಸೋಜಾ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಆ ದಂಪತಿ ಯಾರೆಂದು ನನಗೆ ಗೊತ್ತಿಲ್ಲ, ಆದ್ರೆ ಇವರ ಸದ್ಗುಣವನ್ನು ಕಂಡು ಈ ವಿಡಿಯೋವನ್ನು ಪೋಸ್ಟ್ ಮಾಡುತ್ತಿದ್ದೇನೆ; ದಯೆಯ ಒಂದು ಸಣ್ಣ ಕಾರ್ಯವು ಹೆಚ್ಚು ಮೌಲ್ಯಯುತವಾದುದು. ಇದು ಇನ್ನೊಬ್ಬರ ಜೀವನದ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರುತ್ತದೆ. ಈ ಮಾನವೀಯ ಗುಣ ಈ ದಂಪತಿಯಲ್ಲಿದೆ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಈ ಘಟನೆ ರೆಮೋ ಡಿಸೋಜಾ ಅವರ ಮನೆಯ ಮುಂಭಾಗದ ಬೀದಿಯಲ್ಲಿ ನಡೆದಿದ್ದು, ಒಂದೊಳ್ಳೆ ವಿಚಾರವಿರುವ ಈ ದೃಶ್ಯವನ್ನು ಏಕೆ ವಿಡಿಯೋ ರೆಕಾರ್ಡ್ ಮಾಡಬಾರದೆಂದು ಅಂದುಕೊಂಡು, ರೆಮೋ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ವೃದ್ಧೆಯೊಬ್ಬರು ರಸ್ತೆ ಬದಿಯಲ್ಲಿ ಕೈಲಾಗದ ಸ್ಥಿತಿಯಲ್ಲಿ ನಿಂತಿರುತ್ತಾರೆ. ಅವರನ್ನು ಕಂಡ ದಂಪತಿಗಳಿಬ್ಬರು ವೃದ್ಧೆಯ ಬಳಿ ಹೋಗಿ, ಅವರ ಕೈಯಲ್ಲಿ ಸ್ವಲ್ಪ ಹಣವನ್ನಿಟ್ಟು ನಿರ್ಗತಿಕರನ್ನು ಅಸಹ್ಯವೇನೋ ಎಂಬಂತೆ ಭಾವಿಸುವ ಜನರ ಮಧ್ಯೆ ಈ ದಂಪತಿ, ಆ ವೃದ್ಧೆಯ ಕಾಲಿಗೆ ಬಿದ್ದು ಆಶಿರ್ವಾದವನ್ನು ಸಹ ಪಡೆಯುತ್ತಾರೆ. ಇಂದಿನ ಕಾಲದಲ್ಲಿ ಕ್ಯಾಮೆರಾ ಮುಂದೆ ತೋರ್ಪಡಿಕೆಗಾಗಿ ಸಹಾಯ ಮಾಡುವವರ ಮಧ್ಯದಲ್ಲಿ ಈ ದಂಪತಿಯ ಮಾನವೀಯ ಗುಣ ಎಲ್ಲರ ಮನ ಗೆದ್ದಿದೆ.
ಇದನ್ನೂ ಓದಿ: ರೈಲಿನಲ್ಲಿ ಯುವಕನಿಗೆ ಮನ ಬಂದಂತೆ ಥಳಿಸಿದ ಟಿಕೆಟ್ ಕಲೆಕ್ಟರ್
ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 11.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಏಳು ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ನೆಟ್ಟಿಗರು ಕಮೆಂಟ್ಸ್ ಮೂಲಕ ದಂಪತಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು ʼಅವರು ಅಂಧೇರಿಯ ಡಿ.ನ್ ನಗರ ಪೋಲಿಸ್ ಠಾಣೆಯ ಪೋಲಿಸ್ ಇನ್ಸ್ಪೆಕ್ಟರ್. ಅವರ ಮಾನವೀಯ ಗುಣಕ್ಕೆ ನನ್ನದೊಂದು ಸಲಾಂʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ದಂಪತಿಗಳು ತೋರ್ಪಡಿಕೆಗೆ ಸಹಾಯ ಮಾಡದೆ ಮನಃಪೂರ್ವಕವಾಗಿ ಸಹಾಯ ಮಾಡಿದ್ದಾರೆ. ನಿಜವಾದ ಮಾನವೀಯ ಗುಣ ಇವರಲ್ಲಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅವರಿಬ್ಬರೂ ವೃದ್ಧೆಯ ಪಾದ ಮುಟ್ಟಿ ನಮಸ್ಕರಿಸುವ ದೃಶ್ಯ ನನ್ನನ್ನು ಭಾವುಕನನ್ನಾಗಿಸಿತುʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:38 pm, Fri, 19 January 24