Viral Video: ಹಾವಿಗೆ ಸ್ನಾನ ಮಾಡ್ಸೋ ಕೆಲಸ ಖಾಲಿ ಇದ್ಯಂತೆ, ನೀವೇನಾದ್ರೂ ಹೋಗ್ತೀರಾ? 

ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಮಯ ವಿಡಿಯೋಗಳಿಗೆ ಯಾವ ಕೊರತೆಯೂ ಇಲ್ಲ, ಪ್ರತಿನಿತ್ಯ ಇಂತಹ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ.  ಅದೇ ರೀತಿ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ಹಾವಿಗೆ ಸ್ನಾನ ಮಾಡ್ಸೋ ಕೆಲಸ ಖಾಲಿ ಇದೆ, ಕೆಲಸ ಬೇಕಾದರವರು ತಕ್ಷಣ ಸಂಪರ್ಕಿಸಿ ಅಂತಾ ಕೇಳಿದ್ದಾರೆ.  ಈ ವಿಡಿಯೋವನ್ನು ನೋಡಿ, ಸ್ವಲ್ಪ ಮಿಸ್ ಆದ್ರೂ ಮನೆಯವರು ನಮ್ಗೆ ಸ್ನಾನ ಮಾಡ್ಸಿ ಶಿವನ ಪಾದಕ್ಕೆ ಕಳಿಸ್ತಾರೆ, ನಮಗೆ ಈ ಕೆಲಸ ಬೇಡ್ವೇ ಬೇಡಪ್ಪ ಎಂದು ನೆಟ್ಟಿಗರು ಕಮೆಂಟ್ಸ್ ಮಾಡಿದ್ದಾರೆ. 

Viral Video: ಹಾವಿಗೆ ಸ್ನಾನ ಮಾಡ್ಸೋ ಕೆಲಸ ಖಾಲಿ ಇದ್ಯಂತೆ, ನೀವೇನಾದ್ರೂ ಹೋಗ್ತೀರಾ? 
ವೈರಲ್​​ ವಿಡಿಯೋ
Edited By:

Updated on: Dec 18, 2023 | 4:35 PM

ನಾವು ಎಂತೆಂತಹ ಕೆಲಸ, ವೃತ್ತಿಗಳನ್ನೆಲ್ಲಾ ನೋಡಿರುತ್ತೇವೆ, ಅದ್ರ ಬಗ್ಗೆ ಕೇಳಿರುತ್ತೇವೆ ಅಲ್ವಾ. ಆದ್ರೆ ಇಲ್ಲೊಂದು ಖಾಲಿ ಇರುವ ಕೆಲಸದ ಬಗ್ಗೆ ನೀವೇನಾದ್ರೂ  ಕೇಳಿದ್ರೆ, ನೀವು ತಲೆ ತಿರುಗಿ ಬೀಳೋದಂತೂ ಗ್ಯಾರಂಟಿ.  ಹೌದು ಇಲ್ಲೊಂದು ಹಾವಿಗೆ ಸ್ನಾನ ಮಾಡ್ಸೋ ಕೆಲ್ಸ ಖಾಲಿ ಇದ್ಯಂತೆ. ಸಂಬಳ ತಿಂಗಳಿಗೆ 30,000 ರೂಪಾಯಿಗಳಂತೆ. ಕೆಲಸ ಬೇಕಾದವರು ತಕ್ಷಣ ಸಂಪರ್ಕಿಸಿ ಎಂದು ಕೇಳಿದ್ದಾರೆ. ಈ ಕುರಿತ ಹಾಸ್ಯಮಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಾವನ್ನು ಸ್ನಾನ ಮಾಡ್ಸೋಕೆ ಹೋಗಿ ನಾವು ಶಿವನ ಪಾದ ಸೇರದಿದ್ರೆ ಸಾಕು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

ರವಿ ಕೆಂಪೇಗೌಡ (@ravi_kanasugara)  ಎಂಬವರು ಈ ಹಾಸ್ಯಮಯ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ʼಹಾವಿಗೆ ಸ್ನಾನ ಮಾಡಿಸೋ ಕೆಲಸ ಇದೆ,  ಕೆಲಸ ಬೇಕಾದವ್ರು ಸಂಪರ್ಕಿಸಿʼ ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ:

ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಹಾವಿಗೆ ಸ್ನಾನ ಮಾಡಿಸಿ, ಆ ಹಾವನ್ನು ಆರೈಕೆ ಮಾಡುವ ದೃಶ್ಯವನ್ನು ಕಾಣಬಹುದು. ಮತ್ತು ಈ ವಿಡಿಯೋದ ಮೇಲ್ಗಡೆ  ಹಾವಿಗೆ ಸ್ನಾನ ಮಾಡಿಸೋ ಕೆಲ್ಸ, ತಿಂಗಳಿಗೆ 30,000 ರೂಪಾಯಿ ಸಂಬಳ ಅಂತೆ ಎಂಬ ತಮಾಷೆಯ ಬರಹವನ್ನು ಸಹ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅರ್ಜುನನ್ನು ಕಳೆದುಕೊಂಡು ದುಃಖದಲ್ಲಿರುವ ವಿನುವಿನ ಮುಖದಲ್ಲಿ ನಗು ತರಿಸಿದ ತಮ್ಮನ ಮಗಳು

ಡಿಸೆಂಬರ್ 5ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 35.3K ಲೈಕ್ಸ್​​​ ಹಾಗೂ ಅನೇಕರು ಕಮೆಂಟ್​​​​​ ಮಾಡಿದ್ದಾರೆ. ಒಬ್ಬ ಬಳಕೆದಾರರು ʼಸ್ವಲ್ಪ ಮಿಸ್ ಆದ್ರೂ ಮನೆಯವರು ನಮ್ಗೆ ಸ್ನಾನ ಮಾಡ್ಸಿ ಶಿವನ ಪಾದಕ್ಕೆ ಕಳಿಸ್ತಾರೆ, ನನ್ಗೆ ಈ ಕೆಲ್ಸ ಬೇಡ್ವೇ ಬೇಡಪ್ಪಾʼ ಎಂದು ಹೇಳಿದ್ದಾರೆ.  ಇನ್ನೊಬ್ಬ ಬಳಕೆದಾರರು ʼನಾನು ಸ್ನಾನ ಮಾಡೋದೋ ಅಪರೂಪಕ್ಕೆ, ಇನ್ನು ಆ ಹಾವಿಗೆ ಬೇರೆ ಸ್ನಾನ ಮಾಡಿಸ್ಬೇಕಾ, ನನ್ ಕೈಯಿಂದ ಆಗಲ್ಲ ಗುರು, ಆ ಕೆಲ್ಸ ನೀನೇ ಮಾಡುʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಗುರು ಬದುಕೋ ದಾರಿ ಹೇಳು ಅಂದ್ರೆ, ಸೀದಾ ಮೇಲೆ ಹೋಗೋ ದಾರಿ ಹೇಳ್ತಾ ಇದೀಯಾʼ ಅಂತಾ ಕೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us