Viral Video: ಅಡುಗೆ ಮಾಡೋದಕ್ಕೂ ಬಂತು ಮೆಷನ್; ಮೆಷಿನ್ ಚೆಫ್​​​ನ್ನು ಕಂಡು ಬೆರಗಾದ ನೆಟ್ಟಿಗರು

ಮಾನವನ ಹಸ್ತಕ್ಷೇಪವಿಲ್ಲದೆ ಯಂತ್ರವೊಂದು ಅಡುಗೆ ತಯಾರಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿದ್ದು, ಭವಿಷ್ಯದಲ್ಲಿ ವೃತ್ತಿಪರ ಬಾಣಸಿಗರು ಕೆಲಸವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ಹಲವರು ಟೀಕಿಸಿದ್ದಾರೆ.

Viral Video: ಅಡುಗೆ ಮಾಡೋದಕ್ಕೂ ಬಂತು ಮೆಷನ್; ಮೆಷಿನ್ ಚೆಫ್​​​ನ್ನು ಕಂಡು ಬೆರಗಾದ ನೆಟ್ಟಿಗರು
ವೈರಲ್​ ವೀಡಿಯೊ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 01, 2023 | 2:50 PM

ತಂತ್ರಜ್ಞಾನದ ಆವಿಷ್ಕಾರವು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಗಳನ್ನು ಮಾನವ ಜಗತ್ತಿಗೆ ಪರಿಚಯಿಸಿದೆ. ಮಾನವನ ಕೆಲಸಕಾರ್ಯವನ್ನು ಸುಲಭಗೊಳಿಸಲು ಎ.ಐ ಯಂತ್ರಗಳನ್ನು ರೂಪಿಸಲಾಗಿದೆ. ಆದರೆ ಈಗ ಇವುಗಳು ಮಾನವನ ಎಲ್ಲಾ ಕೆಲಸಗಲ್ಲೂ ತನ್ನನ್ನು ಆವರಿಸಿಕೊಳ್ಳುತ್ತಿದೆ. ಮನೆ ಕೆಲಸದಿಂದ ಹಿಡಿದು ರೆಸ್ಟೋರೆಂಟ್ ಗಳಲ್ಲಿ ಆಹಾರಗಳನ್ನು ಬಡಿಸುವವರೆಗೆ, ಇತ್ತೀಚಿನ ದಿನಗಳಲ್ಲಿ ಇಂತಹ ಕೃತಕ ಬುದ್ಧಿಮತ್ತೆಯ ಹೊಸಹೊಸ ಆವಿಷ್ಕಾರಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದು ಮಾನವರ ಕೆಲಸವನ್ನು ಸುಲಭಗೊಳಿಸುತ್ತದೆ ನಿಜ ಆದರೆ ಇವುಗಳನ್ನು ನಮ್ಮನ್ನು ಸೋಮಾರಿಗಳನ್ನಾಗಿಸುವುದರ ಜೊತೆಗೆ ಭವಿಷ್ಯದಲ್ಲಿ ಒಂದು ದಿನ ಮಾನವರಿಗೆ ಕೆಲಸ ಇಲ್ಲದಂತೆ ಮಾಡಬಹುದೇ ಎಂದು ಅನೇಕರು ಚಿಂತಿತರಾಗಿದ್ದಾರೆ. ಹೀಗಿರುವಾಗ ಅಡುಗೆ ಉದ್ಯಮಕ್ಕೂ ಎ.ಐ ತಂತ್ರಜ್ಞಾನದ ಯಂತ್ರಗಳು ಕಾಲಿಟ್ಟಿವೆ. ಹೌದು ಇತ್ತೀಚಿಗೆ ವೃತ್ತಿಪರ ಬಾಣಸಿಗರಂತೆ ಯಂತ್ರವೊಂದು ತಕರಕಾರಿಯನ್ನು ವೇಗವಾಗಿ ಹುರಿಯುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ದೊಡ್ಡ ದೊಡ್ಡ ಹೋಟೇಲ್ ಗಳಲ್ಲಿ ಹಾಗೂ ಬೀದಿ ಬದಿಯಲ್ಲಿ ಚೈನಿಸ್ ಫುಡ್ ತಯಾರಿಸುವವರು ಕೌಶಲ್ಯಯುತವಾಗಿ ತರಕಾರಿ ಹಾಗೂ ಇತರ ಆಹಾರಗಳನ್ನು ಹುರಿಯುವುದನ್ನು ನಾವು ನೋಡಿರುತ್ತೇವೆ. ಅವರ ಕೈ ಚಲಕವನ್ನು ಕಂಡು ಅಬ್ಬಬ್ಬಾ ಇಷ್ಟು ವೇಗವಾಗಿಯೂ ಆಹಾರ ತಯಾರಿಸಬಹುದೇ ಎಂದು ಜನರು ಆಶ್ವರ್ಯಪಡುತ್ತಾರೆ. ಈಗ ಬಾಣಸಿಗರಿಗೆ ಸಾವಾಲು ಹಾಕುವಂತೆ ಯಂತ್ರವೊಂದು ಗಾಳಿಯ ವೇಗದಲ್ಲಿ ತರಕಾರಿಗಳನ್ನು ಹುರಿಯುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೃತಕ ಬುದ್ಧಿಮತ್ತೆ ಅಡುಗೆ ಉದ್ಯಮಕ್ಕೂ ಕಾಲಿಟ್ಟಿತ್ತೇ ಎಂದು ನೋಡುಗರು ಆಶ್ಬರ್ಯಚಕಿತರಾಗಿದ್ದಾರೆ.

ಇದನ್ನೂ ಓದಿ: Viral Video: ‘ನಿನ್ನ ಮಗೂನ್ನೂ ಎತ್ಕೋ!’ ನಾಯಿಯನ್ನು ಒದ್ದವಳ ಮೇಲೆ ಕೋಪಗೊಂಡ ನೆಟ್ಟಿಗರು

ಈ ವೀಡಿಯೋ ಕ್ಲಿಪ್ ನ್ನು ಫಿಗೆನ್ (TheFigen) ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಕ್ರೇಜಿ ಮೆಷಿನ್ ಚೆಫ್’ ಎಂಬ ಶೀರ್ಷಿಕೆನ್ನು ನೀಡಿದ್ದಾರೆ. ಈ ವೀಡಿಯೋದಲ್ಲಿ ಯಂತ್ರಕ್ಕೆ ಬಾಣಲೆಯನ್ನು ಜೋಡಿಸಲಾಗಿದ್ದು, ಆ ಯಂತ್ರ ವೃತ್ತಿಪರ ಬಾಣಸಿಗರಂತೆ ತರಕಾರಿಗಳನ್ನು ಹುರಿಯುತ್ತಿರುವುದನ್ನು ಕಾಣಬಹುದು. ಆಹಾರಗಳನ್ನು ವೇಗವಾಗಿ ತಯಾರಿಸುವ ಈ ಕೌಶಲ್ಯವನ್ನು ಕಲಿಯಲು ಸ್ವಾಭಾವಿಕವಾಗಿ ಬಾಣಸಿಗರಿಗೆ ಕೆಲವು ತಿಂಗಳುಗಳು ಬೇಕಾಗುತ್ತವೆ. ಹೀಗಿರುವಾಗ ಈ ಯಂತ್ರ ಗಾಳಿಯ ವೇಗದಲ್ಲಿ ತರಕಾರಿಗಳನ್ನು ಹುರಿಯುತ್ತಿರುವ ದೃಶ್ಯ ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ.

ಜೂನ್ 26 ರಂದು ಟ್ವಿಟರ್ ನಲ್ಲಿ ಹರಿಬಿಡಲಾದ ಈ ವೀಡಿಯೋ 5.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 23 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ ಗಳೂ ಕೂಡಾ ಹರಿದು ಬಂದಿವೆ. ಒಬ್ಬ ಬಳಕೆದಾರರು ‘ಕ್ಷಮಿಸಿ ಬಾಣಸಿಗರೆ, ಇನ್ನು ಮುಂದೆ ನಿಮಗೆ ಕೆಲಸ ಇರೋದಿಲ್ಲ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಇದು ಭವಿಷ್ಯದ ಅಡುಗೆ ಉದ್ಯಮವೇ?’ ಎಂದು ಪ್ರಶ್ನಿಸಿದ್ದಾರೆ. ಇನ್ನು ಹಲವರು ಭವಿಷ್ಯದಲ್ಲಿ ವೃತ್ತಿಪರ ಬಾಣಸಿಗರು ಕೆಲಸವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ಟೀಕಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ