Saree : ಕೆಲವು ವೃತ್ತಿ, ಕೆಲಸ, ಚಟುವಟಿಕೆಗಳು ನಿರಾಯಾಸವಾಗಿ ಸಾಗಬೇಕೆಂದರೆ ಲಿಂಗಬೇಧವಿಲ್ಲದೆ ನಿರ್ದಿಷ್ಟ ಉಡುಪುಗಳನ್ನು ಧರಿಸಬೇಕು. ಇದನ್ನು ಸಮಾಜವೂ ಸ್ವೀಕರಿಸಿದೆ. ಅದಕ್ಕೆ ನಮ್ಮ ಕಣ್ಣುಗಳೂ ಹೊಂದಿಕೊಂಡಿವೆ. ಆದರೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋಗಳನ್ನು ಗಮನಿಸಿ. ಈ ಐದು ನಾರೀಮಣಿಯರು ಸೀರೆಯುಟ್ಟುಕೊಂಡೇ ವ್ಯಾಯಾಮ, ಜಿಮ್ಮ್ಯಾಸ್ಟಿಕ್, ಸೀರೆಯಲ್ಲಿ ಮ್ಯಾರಥಾನ್ ಮತ್ತು ಫುಟ್ಬಾಲ್ನಲ್ಲಿ (Marathon) ಯಶಸ್ವಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ಟ್ರೆಂಡ್ ಆಗುತ್ತಿದ್ದಂತೆ ಕೆಲವರು, ಅರೆ! ಹೌದಲ್ಲ, ನಾವ್ಯಾಕೆ ಇದನ್ನು ಪ್ರಯತ್ನಿಸಬಾರದು ಎಂದು ಆಲೋಚಿಸುತ್ತಾರೆ. ಈ ಕೆಳಗಿನ ವಿಡಿಯೋ ನೋಡುತ್ತಿದ್ದಂತೆ ಸಂಪ್ರದಾಯಗಳನ್ನು ಮುರಿಯಲು ನಿಮಗೇನಾದರೂ ಸ್ಫೂರ್ತಿ ಬರುವುದುಂಟೆ?
ಸೀರೆಯಲ್ಲಿ ವ್ಯಾಯಾಮ: ಸೀರೆಯುಟ್ಟರೆ ವ್ಯಾಯಾಮ ಸಾಧ್ಯವೇ ಇಲ್ಲ ಎನ್ನುವರು ಹೆಚ್ಚು. ಆದರೆ ರೀನಾ ಸಿಂಗ್ ((Reena Singh) ಈ ನಂಬಿಕೆಯನ್ನು ಸೀರೆಯುಟ್ಟೇ ವ್ಯಾಯಾಮ ಮಾಡಿ ಮುರಿದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಪ್ರೇರಣೆಗೊಂಡಿದ್ದಾರೆ. ಸೀರೆ ಬಿಟ್ಟರೆ ಬೇರೆ ದಿರಿಸುಗಳನ್ನು ಧರಿಸುವುದಿಲ್ಲ ಎಂದು ನಿರ್ಧರಿಸಿದವರಿಗೂ ರೀನಾ ಮಾದರಿ.
ಸೀರೆಯಲ್ಲಿ ಜಿಮ್ನಾಸ್ಟಿಕ್ಸ್ : 24 ವರ್ಷದ ಜಿಮ್ನಾಸ್ಟಿಕ್ ಪರಿಣಿತೆ (Gymnastics) ಪಾರೂಲ್ ಅರೋರಾ (Parul Arora) ಸೀರೆಯಲ್ಲಿ ಬ್ಯಾಕ್‌ಫ್ಲಿಪ್ ಮಾಡಿದ ಕ್ಷಣಗಳು ನಿಮ್ಮ ಮೈನವಿರೇಳಿಸುತ್ತವೆ. ಜಿಮ್ಯಾಸ್ಟಿಕ್ನ ಉಡುಗೆಯಂತೆ ಸೀರೆ ಧರಿಸಿದಾಗಲೂ ಸರಾಗವಾಗಿ ಪ್ರದರ್ಶನ ನೀಡಿದ್ದಾರೆ. ಇದೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಜನಮನಸೂರೆಗೊಂಡು ವೈರಲ್ ಆಗಿದೆ.
Congratulations @parul_cutearora
This is wow…..pic.twitter.com/iw0bJa5mbi— Hoshiyar Singh (@MichaelHoshiyar) March 28, 2021
ಸೀರೆಯಲ್ಲಿ ಓಟ : ಒಡಿಶಾ ಮೂಲದ ಶಿಕ್ಷಕಿ ಮಧುಸ್ಮಿತಾ ಜೆನಾ (Madhusmita Jena) ಕೆಂಪು ಬಣ್ಣದ ಖಂಡುವಾ ಪಟ ಸೀರೆಯನ್ನು ಉಟ್ಟುಕೊಂಡು 2023ರ ಮ್ಯಾಂಚೆಸ್ಟರ್ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದರು. 41 ವರ್ಷದ ಈಕೆ 5 ಗಂಟೆಗಳಲ್ಲಿ 42.5 ಕಿಮೀ ನಷ್ಟು ದೂರವನ್ನು ಯಾವುದೇ ಅಡೆತಡೆಗಳಿಲ್ಲದೆ ಓಡಿ ತಲುಪಿದರು.
ಸೀರೆಯಲ್ಲಿ ಯೋಗನೃತ್ಯ: ನರ್ತಕಿ ರುಕ್ಮಿಣಿ ವಿಜಯಕುಮಾರ್ (Rukmini Vijayakumar) ಕಚ್ಚೆ ಸೀರೆಯುಟ್ಟು ಯೋಗ ಮತ್ತು ಸಾಹಸದಿಂದ ಮಿಳಿತಗೊಂಡ ನಮಾಮಿ ಯೋಗ ವಿದ್ಯೆ ಎಂಬ ನೃತ್ಯ ಪ್ರದರ್ಶನವನ್ನು ಮಾಡಿದ್ದಾರೆ. ಇದು ಅನೇಕರನ್ನು ಬೆರಗುಗೊಳಿಸಿದೆ. ಸರಿಯಾಗಿ ಸೀರೆ ಉಟ್ಟುಕೊಂಡರೆ ಏನೆಲ್ಲವನ್ನೂ ಮಾಡಬಹುದು ಎಂಬ ಆತ್ಮವಿಶ್ವಾಸ ಅವರದು.
ಸೀರೆಯಲ್ಲಿ ಫುಟ್‌ಬಾಲ್ : ಸೀರೆ ಉಟ್ಟುಕೊಂಡೂ ಫುಟ್‌ಬಾಲ್ ಆಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಈ ಮಹಿಳೆಯರು. ಹೆಚ್ಚಿನ ಜನರು ಕಚ್ಚೆಸೀರೆ ಉಟ್ಟುಕೊಂಡಿದ್ದಾರೆ. ಅಲ್ಲದೆ ಬೂಟುಗಳನ್ನು ಧರಿಸಿ ಯಾವುದೇ ಹಿಂಜರಿಕೆಯಿಲ್ಲದೇ ಪಂದ್ಯವನ್ನು ಪೂರೈಸಿದ್ಧಾರೆ. ಗೋಲ್ ಇನ್ ಸಾರೀ ಎಂಬ ಶೀರ್ಷಿಕೆ ಈ ಪಂದ್ಯಕ್ಕೆ ಇಡಲಾಗಿತ್ತು. ಇದೂ ಕೂಡ ನೆಟ್ಟಿಗರನ್ನು ಮನಸೂರೆಗೊಂಡಿದೆ.
‘When drape can signify both strength and femininity!’
A group of women turned football players in Gwalior recently. They were spectacular on the field with their athletic skills. It was a 2 day tournament.
The tournament was called “Goal in Saree”.pic.twitter.com/18N36cpqQJ
— Naturally Sudhaish (@NaturallySudha) March 29, 2023
ನಿಮಗೂ ಈಗ ಸಂಪ್ರದಾಯವನ್ನು ನಿಮ್ಮದೇ ಆದ ಅಸಾಂಪ್ರದಾಯಿಕತೆಯ ಮೂಲಕ ಮುರಿಯುವ ಆಲೋಚನೆ ಬರುತ್ತಿದೆಯೇ? ತಡವ್ಯಾಕೆ ಮತ್ತೆ!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:09 pm, Fri, 30 June 23