ರೈಲಿನಲ್ಲಿ ಪ್ರಯಾಣಿಸುವಾಗ ಅಥವಾ ಜನಜಂಗುಳಿ ಇರುವಲ್ಲಿ ನಾವು ಎಷ್ಟು ಜಾಗರೂಕತೆಯಿಂದ ಇದ್ರೂನೂ ಕಮ್ಮಿಯೇ. ಏಕೆಂದ್ರೆ ಹೆಚ್ಚಾಗಿ ಇಂತಹ ಸ್ಥಳಗಳಲ್ಲಿಯೇ ಕಳ್ಳರು ತಮ್ಮ ಕೈಚಳಕವನ್ನು ತೋರಿಸುತ್ತಿರುತ್ತಾರೆ. ಹೀಗೆ ರೈಲಿನಲ್ಲಿ ಪ್ರಯಾಣಿಸುವಾಗ ಆಗಿರಲಿ ಅಥವಾ ಜನ ಜಂಗುಳಿ ಇರುವಲ್ಲಿ ಚಿನ್ನಾಭರಣ ಕಳ್ಳತನ, ಪರ್ಸ್ ಕಳ್ಳತನ, ಮೊಬೈಲ್ ಕಳ್ಳತನಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ರೈಲಿನಲ್ಲಿ ದಿನನಿತ್ಯ ಒಂದಲ್ಲ ಒಂದು ಕಳ್ಳತನ ನಡೆಯುತ್ತಲೇ ಇರುತ್ತದೆ. ಹೆಚ್ಚಿನ ಕಳ್ಳರು ರೈಲಿನಲ್ಲಿಯೇ ತಮ್ಮ ಕರಾಮತ್ತು ತೋರಿಸುತ್ತಿರುತ್ತಾರೆ. ಇದೇ ಕಾರಣಕ್ಕೆ ರೈಲ್ವೈ ಸ್ಟೇಷನ್ ಮತ್ತು ಬಸ್ ಸ್ಟೇಷನ್ಗಳಲ್ಲಿ ʼಕಳ್ಳರಿದ್ದಾರೆ ಎಚ್ಚರಿಕೆ, ಪ್ರಯಾಣಿಕರು ನಿಮ್ಮ ಅಮೂಲ್ಯ ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿʼ ಎಂಬಿತ್ಯಾದಿ ಅನೌನ್ಸ್ಮೆಂಟ್ ಮಾಡುತ್ತಿರುತ್ತಾರೆ. ಹೀಗೆ ಪ್ರಯಾಣಿಕರು ಎಷ್ಟೇ ಜಾಗ್ರತೆ ವಹಿಸಿದ್ರೂ ಕೂಡಾ ಈ ಕಳ್ಳರು ತಮ್ಮ ಕೈ ಚಳಕವನ್ನು ತೋರಿಸುತ್ತಿರುತ್ತಾರೆ. ಈಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ಕಳ್ಳ ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರ ಮೊಬೈಲ್ ಕಳ್ಳತನ ಮಾಡಲು ಹೋಗಿ ಸಿಕ್ಕಿಹಾಕಿಕೊಂಡಿದ್ದು, ಪ್ರಯಾಣಿಕರೆಲ್ಲರೂ ಸೇರಿ ಆತನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ.
ವರದಿಗಳ ಪ್ರಕಾರ ಈ ಘಟನೆ ಬಿಹಾರದ ಭಾಗಲ್ಪುರದಲ್ಲಿ ನಡೆದಿದ್ದು, ರೈಲಿನೊಳಗಿದ್ದ ಮಹಿಳಾ ಪ್ರಯಾಣಿಕರೊಬ್ಬರು ಮೊಬೈಲಿನಲ್ಲಿ ಮಾತನಾಡುತ್ತಾ ಕುಳಿತಿದ್ದರು. ಈ ದೃಶ್ಯ ಖತರ್ನಾಕ್ ಕಳ್ಳನ ಕಣ್ಣಿಗೆ ಬಿಳುತ್ತೇ, ಹೇಗದ್ರೂ ಮಾಡಿ ತನ್ನ ಕರಾಮತ್ತನ್ನು ಇಲ್ಲಿ ತೋರಿಸ್ಬೇಕಲ್ವಾ ಅಂತ ಯೋಚ್ನೇ ಮಾಡಿ, ಚಲಿಸುತ್ತಿರುವ ರೈಲಿನಲ್ಲಿಯೇ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸುತ್ತಾನೆ. ಆತ ತಪ್ಪಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಸಹ ಪ್ರಯಾಣಿಕರು ಕಿಟಕಿಯ ಮೂಲಕ ಆತನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ಆತನನ್ನು ಒಂದು ಕಿಲೋ ಮೀಟರ್ವರೆಗೂ ರೈಲಿನ ಹೊರಗಿನಿಂದ ನೇತಾಡಿಸಿಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲದೆ ಆತನಿಗೆ ಸರಿಯಾಗಿ ಧರ್ಮದೇಟು ಬಿದ್ದಿದೆ.
@gharkekalesh ಎಂಬ X ಖಾತೆಯಲ್ಲಿ ಈ ಕುರಿತ ವಿಡಿಯೋ ತುಣಕನ್ನು ಹರಿಬಿಡಲಾಗಿದ್ದು, ಬಿಹಾರದ ಭಾಗಲ್ಪುರದ ಬಳಿ ಕಳ್ಳನೊಬ್ಬ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಫೋನ್ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸುತ್ತಾನೆ. ಆ ವೇಳೆಯಲ್ಲಿ ಸಿಕ್ಕಿಹಾಕಿಕೊಂಡ ಆತನನ್ನು ಪ್ರಯಾಣಿಕರೆಲ್ಲರೂ ಸೇರಿ ಒಂದು ಕಿಲೋ ಮೀಟರ್ವರೆಗೂ ರೈಲಿನ ಹೊರಗಿನಿಂದ ನೇತಾಡಿಸಿಕೊಂಡು ಹೋಗಿದ್ದಾರೆ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
Kalesh near Bhagalpur Bihar, a snatcher was snatching a passenger’s phone from a moving train, but he could not succeed in it and the passenger caught the snatcher and carried him hanging for about a kilometer
pic.twitter.com/66wIJmzWjS— Ghar Ke Kalesh (@gharkekalesh) January 17, 2024
ವೈರಲ್ ವಿಡಿಯೋದಲ್ಲಿ ಪ್ರಯಾಣಿಕರು ಕಿಟಕಿಯ ಮೂಲಕ ಕಳ್ಳನ ಕೈಯನ್ನು ಹಿಡಿದುಕೊಂಡು ಆತನನ್ನು ನೇತಾಡಿಸಿಕೊಂಡು ಹೋಗಿದ್ದಾರೆ, ಅಷ್ಟೇ ಅಲ್ಲದೆ ಇನ್ನು ಮುಂದೆ ಕಳ್ಳತನ ಮಾಡ್ತೀಯಾ ಅಂತ ತಲೆ ಸರಿಯಾಗಿ ಏಟನ್ನು ಸಹ ಕೊಟ್ಟಿದ್ದಾರೆ. ಆ ಸಂದರ್ಭದಲ್ಲಿ ರೈಲಿನ ಹೊರಭಾಗದಲ್ಲಿ ನೇತಾಡುತ್ತಿದ್ದ ಕಳ್ಳ ಭಯದಿಂದ ದಯವಿಟ್ಟು ನನ್ನನ್ನು ಬಿಟ್ಟುಬಿಡಿ, ನನ್ಗೆ ಸತ್ತು ಹೋದಂತಾಗುತ್ತಿದೆ ಅಂತ ಗೋಗರೆಯುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಚಿನ್ನ, ಬೆಳ್ಳಿ, ವಜ್ರ ಬಳಸಿ 2.5 ಕೆಜಿ ತೂಕದ ರಾಮ ಮಂದಿರ ತಯಾರಿಸಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದ
ಜನವರಿ 17ರಂದು ಹಂಚಿಕೊಳ್ಳಲಾದ ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇನ್ನೂ ನೆಟ್ಟಿಗರು ಕಮೆಂಟ್ಸ್ಗಳ ಮೂಲಕ ಕಳ್ಳನಿಗೆ ಸರಿಯಾಗಿ ಬುದ್ಧಿ ಕಲಿಸಿದ್ದೀರೀ ಅಂತ ಹೇಳಿದ್ದಾರೆ. ಇನ್ನೂ ಕೆಲವರು ಕಳ್ಳರಿಗೆ ಆನ್ ಸ್ಪಾಟ್ ಇದೇ ರೀತಿಯಲ್ಲಿ ಶಿಕ್ಷೆ ನೀಡಬೇಕು ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ