Video Viral: ದೇವರೇ ಕಾಪಾಡಪ್ಪ ಎಂದು ದೇವರ ಬೆಳ್ಳಿ ಕಿರೀಟ ಎಗರಿಸಿದ 26ರ ಯುವಕ
350 ಗ್ರಾಂ ತೂಕದ ದೇವರ ಬೆಳ್ಳಿಯ ಕಿರೀಟವನ್ನು ಕದ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕದಿಯುವ ಮೊದಲು ಯುವಕ ದೇವರಿಗೆ ಕೈ ಮುಗಿಯುತ್ತಿರುವುದನ್ನು ಕಾಣಬಹುದು. ದೇವರಿಗೆ ಕೈ ಮುಗಿದು ದೇವರೇ ಕಾಪಾಡಪ್ಪ ಎಂದು ಪ್ರಾರ್ಥಿಸಿ ವಿಗ್ರಹದ ತಲೆಯ ಮೇಲಿದ್ದ ಕಿರೀಟವನ್ನು ತೆಗೆದು, ತನ್ನ ಬ್ಯಾಗಿನಲ್ಲಿ ಇರಿಸಿ, ಅಲ್ಲಿಂದ ಪರಾರಿಯಾಗಿದ್ದಾನೆ.
ಮುಂಬೈ: ಬೋರಿವಲಿ ಪೂರ್ವದ ರಸ್ತೆ ಸಂಖ್ಯೆ 5ರಲ್ಲಿರುವ ವಿಠ್ಠಲ್ ದೇವಸ್ಥಾನದಿಂದ ಬೆಳ್ಳಿ ಕಿರೀಟವನ್ನು ಕದ್ದ ಆರೋಪದ ಮೇಲೆ ಘನಶ್ಯಾಮ್ ವರ್ಮಾ (26) ಎಂಬಾತನನ್ನು ಕಸ್ತೂರ್ಬಾ ಪೊಲೀಸರು ಬಂಧಿಸಿದ್ದಾರೆ. ಆತ ದೇವರ ಬೆಳ್ಳಿ ಕಿರೀಟ ಕದ್ದಿಯುತ್ತಿರುವ ದೃಶ್ಯ ದೇವಾಲಯದ ಗರ್ಭಗುಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಕಳ್ಳತನ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಮೂಲತಃ ರಾಜಸ್ಥಾನದವರಾದ ವರ್ಮಾ ಉದ್ಯೋಗ ಅರಸಿ ಮುಂಬೈಗೆ ಬಂದಿದ್ದ. ಉದ್ಯೋಗ ಸಿಗದೇ ನಿರುದ್ಯೋಗಿಯಾದ್ದರಿಂದ ಹಣಕ್ಕಾಗಿ ಈ ಕೆಲಸ ಮಾಡಿರುವುದು ತನಿಖೆಯ ವೇಳೆ ತಿಳಿದುಬಂದಿದೆ.
350 ಗ್ರಾಂ ತೂಕದ ಬೆಲೆಬಾಳುವ ಕಿರೀಟವನ್ನು ಕದ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕದಿಯುವ ಮೊದಲು ಯುವಕ ದೇವರಿಗೆ ಕೈ ಮುಗಿಯುತ್ತಿರುವುದನ್ನು ಕಾಣಬಹುದು. ದೇವರಿಗೆ ಕೈ ಮುಗಿದು ದೇವರೇ ಕಾಪಾಡಪ್ಪ ಎಂದು ಪ್ರಾರ್ಥಿಸಿ ವಿಗ್ರಹದ ತಲೆಯ ಮೇಲಿದ್ದ ಕಿರೀಟವನ್ನು ತೆಗೆದು, ತನ್ನ ಬ್ಯಾಗಿನಲ್ಲಿ ಇರಿಸಿ, ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ.
ವಿಡಿಯೋ ಇಲ್ಲಿದೆ ನೋಡಿ:
Thief steals silver crown from Vitthal Temple in Borivali, Mumbai; CCTV footage under review by authorities.#Borivali #Mumbai #Thief #VitthalTemple #LokmatTimes pic.twitter.com/7bJvIkhBcz
— Lokmat Times (@lokmattimeseng) July 18, 2024
ಇದನ್ನೂ ಓದಿ: ಪ್ರೇಯಸಿಯೊಂದಿಗೆ ಬೀಚ್ನಲ್ಲಿ ಎಂಜಾಯ್ ಮಾಡುತ್ತಿರುವ ವೇಳೆ ಎಂಟ್ರಿ ಕೊಟ್ಟ ಗರ್ಭಿಣಿ ಪತ್ನಿ
ಘಟನೆಯ ನಂತರ, ಕಸ್ತೂರ್ಬಾ ಪೊಲೀಸರು ಯುವಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 305 (ವಾಸದ ಮನೆ, ಅಥವಾ ಸಾರಿಗೆ ವಿಧಾನ ಅಥವಾ ಪೂಜಾ ಸ್ಥಳದಲ್ಲಿ ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅದೇ ದಿನ ವರ್ಮಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ವಿಚಾರಣೆಯ ಬಳಿಕ ನ್ಯಾಯಾಲಯವು ಆತನಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ