
Viral Post : ಶಿದಿಕಾ ಎಂಬ ಟ್ವಿಟರ್ ಖಾತೆದಾರರು ಟ್ವೀಟ್ ಮಾಡಿದ ಪೋಸ್ಟ್ ಇದು. ಬೆಂಗಳೂರಿನಲ್ಲಿ ಅವರು ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಆಟೋದಲ್ಲಿ ಏರ್ಪೋಡ್ಸ್ ಮರೆತು ಇಳಿದಿದ್ದಾರೆ. ನಂತರ ಆಟೋ ಚಾಲಕ ಶಿದಿಕಾ ಅವರನ್ನು ಹುಡುಕಿ ಅವರಿಗೆ ಏರ್ಪೋಡ್ಸ್ ತಲುಪಿಸುವ ವ್ಯವಸ್ಥೆ ಮಾಡಿದ್ದಾನೆ. ನೆಟ್ಟಿಗರು ಈ ಚಾಲಕನ ‘ತಂತ್ರ-ಜ್ಞಾನ’ದ ಬಗ್ಗೆ ಭಲೇ ಎನ್ನುತ್ತಿದ್ದಾರೆ.
ಶಿದಿಕಾ ಎಂದಿನಂತೆ ನೌಕರಿಗೆ ಹೋಗಲು ಆಟೋ ಏರಿದ್ದಾರೆ. ಗಡಿಬಿಡಿಯಲ್ಲಿ ತಮ್ಮ ಏರ್ಪಾಡ್ಸ್ ಅನ್ನು ಆಟೋದಲ್ಲಿಯೇ ಬಿಟ್ಟು ಇಳಿದಿದ್ದಾರೆ. ಇದನ್ನು ಗಮನಿಸಿದ ಚಾಲಕ, ದುಬಾರಿ ಬೆಲೆಯ ಈ ಏರ್ಪಾಡ್ ಅನ್ನು ಶಿದಿಕಾ ಅವರಿಗೆ ಅರ್ಧಗಂಟೆಯೊಳಗೆ ತಲುಪಿಸಿದಾಗ ಆಕೆ ಅಚ್ಚರಿಗೆ ಒಳಗಾಗಿದ್ದಾಳೆ
ಬೆಂಗಳೂರಿನಲ್ಲಿ ತಂತ್ರಜ್ಞಾನ ಎನ್ನುವುದು ಎಲ್ಲರಿಗೂ ಕೈಗೆಟಕುವಷ್ಟು ಸರಳವಾಗಿದೆ ಎನ್ನುವುದು ಈ ಘಟನೆಯಿಂದ ತಿಳಿಯಲ್ಪಡುತ್ತದೆ. ಏರ್ಪಾಡ್ಸ್ ಲಭ್ಯವಾಗುತ್ತಿದ್ದಂತೆ ಆಟೋ ಚಾಲಕ ಫೋನ್ಪೇ ಮೂಲಕ ಶಿದಿಕಾ ಅವರ ನಂಬರ್ ಪತ್ತೆಹಚ್ಚಿ ಅವರ ಕಚೇರಿಯ ವಿಳಾಸವನ್ನು ಪಡೆದುಕೊಂಡಿದ್ದಾನೆ.
‘ಆಟೋದಲ್ಲಿ ನಾನು ನನ್ನ ಏರ್ಪಾಡ್ಸ್ ಕಳೆದುಕೊಂಡೆ. ಆದರೆ ಆಟೋ ಚಾಲಕ ಫೋನ್ಪೇ ಮೂಲಕ ನನ್ನ ನಂಬರ್ ಹುಡುಕಿ ಅರ್ಧ ಗಂಟೆಯಲ್ಲಿ ನನ್ನ ಕಚೇರಿಗೆ ಬಂದು ಸೆಕ್ಯೂರಿಟಿಯ ಬಳಿ ಏರ್ಪಾಡ್ ತಲುಪಿಸಿ ಹೋಗಿದ್ದಾನೆ.’ ಎಂದು ಶಿದಿಕಾ ಪೋಸ್ಟ್ನಲ್ಲಿ ಬರೆದಿದ್ದಾರೆ.
9,000 ಜನರು ಈ ಪೋಸ್ಟ್ ಮೆಚ್ಚಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂದು ಅನೇಕರು ಹೇಳಿದ್ದಾರೆ.
ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:55 pm, Wed, 16 November 22