Viral Video: ಮೊದಲ ಬಾರಿಗೆ ಶಬ್ದವನ್ನು ಆಲಿಸಿದಾಗ ಮುಗ್ಧ ಬಾಲಕಿಯ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಪುಟ್ಟು ಹುಡುಗಿಯ ವಿಡಿಯೋ ಒಮ್ಮೆ ಎಲ್ಲರ ಕಣ್ಣಿನಲ್ಲಿ ಕಣ್ಣೀರು ತರಿಸುತ್ತದೆ. ಈ ಚಿಕ್ಕ ಹುಡುಗಿಗೆ ಮೊದಲ ಬಾರಿಗೆ ಶ್ರಾವಣದಲ್ಲಿ ತೊಂದರೆಯಾಗಿದ್ದು. ಮೊದಲ ಬಾರಿಗೆ ಆಕೆ ಶಬ್ದ ಕೇಳುತ್ತಿರುವ ಅನುಭವ ಆಗಿದೆ.
ಪ್ರತಿಯೊಬ್ಬರ ಜೀವನದಲ್ಲಿ ಎಲ್ಲವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಕೆಲವೊಂದು ಬಾರಿ ನಮ್ಮ ಸಹಾಯ ಇನ್ನೊಬ್ಬರಿಗೆ ದೊಡ್ಡ ಲಾಭವನ್ನು ಉಂಟು ಮಾಡಬಹುದು. ಅದು ಜೀವನದ ಅನಿರೀಕ್ಷಿತವಾಗಿರುತ್ತದೆ ಮತ್ತು ಸಹಾಯ ಮಾಡಿದವರಿಗೆ ಕೃತಜ್ಞರಾಗಿರಬೇಕು. ಈ ಸಮಾಜದಲ್ಲಿ ಎಲ್ಲರೂ ಶ್ರೀಮಂತರಾಗಿಲು ಸಾಧ್ಯವಿಲ್ಲ. ಎಲ್ಲವನ್ನು ಪಡೆಯಲು ಸಾಧ್ಯವಿಲ್ಲ, ಬಡತನದ ಜೀವನವು ಇರುತ್ತದೆ. ಅದಕ್ಕಾಗಿ ಅವರು ಹೋರಾಟ ಮಾಡುವುದನ್ನು ನಾವು ಕಾಣಬಹುದು ಈ ಕಾರಣಕ್ಕೆ ಅದೆಷ್ಟೋ ಬಡವರ ಆರೋಗ್ಯದ ಬಗ್ಗೆ ಯೋಚನೆ ಮಾಡಲು ಸಾಧ್ಯವಿಲ್ಲ ಅಷ್ಟು ಕಷ್ಟ ಇರುತ್ತದೆ. ಈ ಬಡ ಕುಟುಂಬಗಳಿಗೆ ಅನೇಕ ಸಂಘ – ಸಂಸ್ಥೆಗಳು ಕೆಲಸ ಮಾಡುತ್ತದೆ. ಯಾಕೆ ಇಷ್ಟೆಲ್ಲ ಹೇಳುತ್ತಿದ್ದಾರೆ ಎಂದುಕೊಳ್ಳುತ್ತಿರಬಹುದು. ಹೌದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದ ಬಗ್ಗೆ ಹೇಳುತ್ತಿದ್ದೇವೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಪುಟ್ಟು ಹುಡುಗಿಯ ವಿಡಿಯೋ ಒಮ್ಮೆ ಎಲ್ಲರ ಕಣ್ಣಿನಲ್ಲಿ ಕಣ್ಣೀರು ಬರಿಸುವಂತೆ ಮಾಡಿ. ಈ ಪುಟ್ಟ ಹುಡುಗಿಗೆ ಚಿಕ್ಕ ವಯಸ್ಸಿನಲ್ಲಿ ಶ್ರವಣದಲ್ಲಿ ತೊಂದರೆಯಾಗಿದ್ದು. ಮೊದಲ ಬಾರಿಗೆ ಆಕೆ ಶಬ್ದ ಕೇಳುತ್ತಿರುವ ಅನುಭವ ಆಗಿದೆ. ಈ ವಿಡಿಯೋವನ್ನು ನೀವು ಕೂಡ ನೋಡಿದ್ರು ಖಂಡಿತ ಕಣ್ಣೀರು ಹಾಕುವುದು ಖಂಡಿತ.
ಈ ವಿಡಿಯೋ ವೇರ್ ದಿ ಪೀಸ್ ಎಂಬ ಬ್ರ್ಯಾಂಡ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ 7 ವರ್ಷದ ಕೀನ್ಯಾದ ನೆಸ್ತೈಹಾ ಎಂಬ ಹುಡುಗಿಗೆ ಶ್ರವಣ ದೋಷ ಇದೆ ಎಂದು ಹೇಳಲಾಗಿತ್ತು. ಆಕೆ ಚಿಕ್ಕ ವಯಸ್ಸಿನಿಂದಲೇ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾಳೆ. ಇದೀಗ ನೆಸ್ತೈಹಾಗೆ ಎಲ್ಲ ಶಬ್ದವನ್ನು ಕೇಳುವ ಅದೃಷ್ಟ ಸಿಕ್ಕಿದೆ. ಒಂದು ಚಿಕ್ಕ ಕ್ಲಿಪ್‌ನಂತಹ ತಂತ್ರಜ್ಞಾನವನ್ನು ಅವಳ ಕಿವಿಗೆ ಇಂಪ್ಲಾಂಟ್‌ಗಳನ್ನು ಅಳವಡಿಸಲಾಗಿದೆ. ನಂತರದಲ್ಲಿ ಈ ಯಂತ್ರ ಕಾರ್ಯನಿರ್ವಹಿಸುತ್ತದೆಯೇ ಎಂಬುದನ್ನು ನೋಡಲು ಚಪ್ಪಾಳೆ ತಟ್ಟುವ ಮೂಲಕ ಪರೀಕ್ಷೆ ಮಾಡಲಾಗಿದೆ. ಆ ವ್ಯಕ್ತಿ ಚಪ್ಪಾಳೆಗೆ ತಕ್ಷಣ ಆಕೆ ಪ್ರತಿಕ್ರಿಯೆ ನೀಡಿದ್ದಾಳೆ. ಅಲ್ಲಿದ್ದವರು ಎಲ್ಲರೂ ಕೂಡ ಈ ಕ್ಷಣವನ್ನು ಕಂಡು ಆನಂದಿಸಿದ್ದಾರೆ.
View this post on Instagram
ವಾಜಿರ್‌ನ 7 ವರ್ಷದ ಬಾಲಕಿ ನೆಸ್ತೈಹಾ ಅವರು ಚಿಕ್ಕವಳಿದ್ದಾಗ ಅನಾರೋಗ್ಯಕ್ಕೆ ಒಳಗಾದ ನಂತರ ಶ್ರವಣಶಕ್ತಿಯನ್ನು ಕಳೆದುಕೊಂಡಿದ್ದಾಳೆ. ಅವಳು ಇಂದಿನವರೆಗೂ ಕೇಳಲು ಸಾಧ್ಯವಾಗಲಿಲ್ಲ ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ನೆಸ್ಟಯ್ಹಾ ಕಣ್ಣೀರು ಹಾಕಿರುವ ಬಗ್ಗೆ ಅನೇಕರು ಈ ಬಗ್ಗೆ ಭಾವನಾತ್ಮಕವಾಗಿ ಪ್ರಕ್ರಿಯೆಯನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿ ನನ್ನ ನನ್ನ ಹೃದಯ ಮೀಡಿದಿದೆ. ನನ್ನ ಕಣ್ಣಿನಲ್ಲಿ ಕಣ್ಣೀರು ತಂದಿತು. ನಿಮ್ಮ ಈ ಅದ್ಭುತವಾದ ಕೆಲಸಕ್ಕೆ ಈ ದೇವರು ನಿಮ್ಮಿಬ್ಬರನ್ನೂ ಆಶೀರ್ವದಿಸುತ್ತಾನೆ ಎಂದು ಬಳಕೆದಾರರು ಬರೆದಿದ್ದಾರೆ.