ಡಿಮೆನ್ಷಿಯಾದಿಂದ ನರಳುತ್ತಿರುವ ಈ ವೃದ್ಧೆ ನಾಯಿಯನ್ನು ಪ್ರೀತಿಸುವುದನ್ನು ಮಾತ್ರ ಮರೆತಿಲ್ಲ!

| Updated By: ಶ್ರೀದೇವಿ ಕಳಸದ

Updated on: Nov 14, 2022 | 5:34 PM

Dementia : ಪ್ರೀತಿ ಪ್ರಜ್ಞಾಪೂರ್ವಕವಾಗಿ ಘಟಿಸುವಂಥದ್ದಲ್ಲ, ಹಾಗಾಗಿ ಇದನ್ನು ಮರೆಯಲು ಸಾಧ್ಯವಾಗುವುದೇ ಇಲ್ಲ. ಅದರಲ್ಲೂ ನಾಯಿಪ್ರೀತಿ, ಇದು ಪರಿಶುದ್ಧವಾದದ್ದು ಎನ್ನುತ್ತಿದ್ದಾರೆ ನೆಟ್ಟಿಗರು. ನೋಡಿ ಈ ಹೃದಯಸ್ಪರ್ಶಿ ವಿಡಿಯೋ.

ಡಿಮೆನ್ಷಿಯಾದಿಂದ ನರಳುತ್ತಿರುವ ಈ ವೃದ್ಧೆ ನಾಯಿಯನ್ನು ಪ್ರೀತಿಸುವುದನ್ನು ಮಾತ್ರ ಮರೆತಿಲ್ಲ!
This elderly woman with dementia has not forgotten her love for dogs
Follow us on

Viral Video : ನೀವು ಹೃದಯಾಂತರಾಳದಿಂದ ಏನನ್ನು ಪ್ರೀತಿಸುತ್ತೀರೋ ಅದನ್ನು ಕೊನೆಯ ಕ್ಷಣದವರೆಗೂ ಮರೆಯಲು ಸಾಧ್ಯವಿಲ್ಲ. ದೇಹಕ್ಕೆ ಎಷ್ಟೇ ಮುಪ್ಪಡರಲಿ, ರೋಗಕ್ಕೆ ತುತ್ತಾಗಲಿ ಆದರೆ ನಿಮ್ಮ ಆಂತರ್ಯವನ್ನು ಹೊಕ್ಕಿದ್ದು  ನಿಮ್ಮೊಳಗೇ ಇರುತ್ತದೆ ಇದಕ್ಕೆ ಸಾಕ್ಷಿ ಈ ವೃದ್ಧೆ ಮತ್ತು ಆಕೆಯ ನಾಯಿಯ ಪ್ರೀತಿ. ಈಕೆ ಡಿಮೆನ್ಷಿಯಾಗೆ ಒಳಗಾಗಿದ್ದಾರೆ. ಆದರೆ ನಾಯಿಯನ್ನು ಪ್ರೀತಿಸುವುದನ್ನು ಮಾತ್ರ ಮರೆತಿಲ್ಲ. ಈಕೆಯ ಕೈಗೆ ನಾಯಿಮರಿ ಕೊಡುತ್ತಿದ್ದಂತೆ ಭಾವುಕರಾಗಿ ಬಿಕ್ಕುತ್ತಾರೆ. ನೋಡಿ ಈ ವಿಡಿಯೋ.

ಗುಡ್​ನ್ಯೂಸ್​ ಮೂವ್​ಮೆಂಟ್​ ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಗಾಲಿಕುರ್ಚಿಯ ಮೇಲೆ ಕುಳಿತ ಈ ವೃದ್ಧೆಯ ಮಡಿಲಲ್ಲಿ ನಾಯಿಮರಿ ಇದೆ. ಡಿಮೆನ್ಷಿಯಾದಿಂದ ಈಕೆ ಹೊರಬರಲು ಈಕೆಯ ಮನೆಯವರು ಏನೆಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಆಕೆಗೆ ಏನೊಂದೂ ನೆನಪಾಗುತ್ತಿಲ್ಲ. ಕೊನೆಗೆ ಯಾವಾಗ ಆಕೆಯ ಕೈಗೆ ನಾಯಿಮರಿಯೊಂದನ್ನು ಇಟ್ಟರೋ ಆಕೆಯ ಭಾವ ಸ್ಫುರಣಗೊಂಡಿದೆ.

ಸುಮಾರು 8 ಲಕ್ಷ ಜನರನ್ನು ಈ ವಿಡಿಯೋ ತಲುಪಿದೆ. 43,000ಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ಮೆಚ್ಚಿದ್ದಾರೆ. ಅನೇಕರು ನಾಯಿಗಳೊಂದಿಗಿನ ತಮ್ಮ ಒಡನಾಟವನ್ನು ಹಂಚಿಕೊಂಡಿದ್ಧಾರೆ. ಪ್ರೀತಿ ಎನ್ನುವುದು ಪ್ರಜ್ಞಾಪೂರ್ವಕವಾಗಿ ಘಟಿಸುವಂಥದ್ದಲ್ಲ. ಹಾಗಾಗಿ ನಾಯಿಗಳನ್ನು ಪ್ರೀತಿಸುವುದನ್ನೂ ಮರೆಯಲು ಸಾಧ್ಯವಿಲ್ಲ. ಎಂಥ ಮುದ್ದಾದ ದೃಶ್ಯವಿದು ಎಂದಿದ್ದಾರೆ ನೆಟ್ಟಿಗರು. ಇದು ಶುದ್ಧವಾದ ಪ್ರೀತಿ, ಇದನ್ನು ಮರೆಯಲು ಸಾಧ್ಯವೇ ಇಲ್ಲ, ಅದರಲ್ಲೂ ನಾಯಿಪ್ರೀತಿ ಎಂದಿದ್ದಾರೆ ಅನೇಕರು.

ನಿಮಗೇನು ಅನ್ನಿಸುತ್ತಿದೆ ಈ ವಿಡಿಯೋ ನೋಡುತ್ತಿದ್ದಂತೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 5:34 pm, Mon, 14 November 22