Video: ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಹಾಡನ್ನು ಹಾಡಿ ಸಖತ್ ವೈರಲ್ ಆಗ್ತಿದ್ದಾಳೆ ಈ ಹುಡ್ಗಿ

ಸೋಶಿಯಲ್ ಮೀಡಿಯಾವೇ ಹಾಗೆ, ಜನಸಾಮಾನ್ಯರನ್ನು ರಾತ್ರಿ ಬೆಳಗಾಗುವಷ್ಟರಲ್ಲಿ ಫೇಮಸ್ ಮಾಡಿ ಬಿಡುತ್ತದೆ. ಕೆಲವರು ರೀಲ್ಸ್‌ ಸೇರಿದಂತೆ ನಾನಾ ರೀತಿಯ ವಿಡಿಯೋ ಮಾಡಿ ಫೇಮಸ್‌ ಆಗಲು ನೋಡುತ್ತಾರೆ. ಇನ್ನು ಕೆಲವರು ಒಂದೇ ಒಂದು ವಿಡಿಯೋದಿಂದನೇ ಹವಾ ಸೃಷ್ಟಿಸಿ ಬಿಡುತ್ತಾರೆ. ಇದಕ್ಕೆ ಈ ಹುಡುಗಿಯೇ ಸಾಕ್ಷಿ. ಹೌದು, ಕನ್ನಡ ಸಿನಿಮಾದ ಹಾಡೊಂದನ್ನು ತನ್ನದೇ ಧಾಟಿಯಲ್ಲಿ ಹಾಡಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾಳೆ. ಈ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ.

Video: ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಹಾಡನ್ನು ಹಾಡಿ ಸಖತ್ ವೈರಲ್ ಆಗ್ತಿದ್ದಾಳೆ ಈ ಹುಡ್ಗಿ
ಹಾಡು ಹಾಡಿ ವೈರಲ್ ಆದ ಹುಡುಗಿ
Image Credit source: Instagram

Updated on: Sep 12, 2025 | 3:35 PM

ಸೋಶಿಯಲ್ ಮೀಡಿಯಾದ (Social media) ಜಗತ್ತೇ ಹಾಗೆ, ಸಾಮಾನ್ಯ ವ್ಯಕ್ತಿಗಳನ್ನು ಜನಪ್ರಿಯರನ್ನಾಗಿಸಿ ಬಿಡುತ್ತದೆ. ಈಗಾಗಲೇ ರಾತ್ರಿ ಬೆಳಗಾಗುವಷ್ಟರಲ್ಲಿ ಫೇಮಸ್ ಆದ ವ್ಯಕ್ತಿಗಳು ನಮ್ಮ ಕಣ್ಣ ಮುಂದೆ ಇದ್ದಾರೆ. ಇಂತಹವರ ಸಾಲಿಗೆ ಬಿರುಗಾಳಿ ಸಿನಿಮಾದ (film song) ಹೂವಿನ ಬಾಣದಂತೆ ಹಾಡು ಹಾಡಿದ ಈ ಯುವತಿಯೂ ಸೇರಿಕೊಂಡಿದ್ದಾಳೆ. ತನ್ನದೇ ಧಾಟಿಯಲ್ಲಿ ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಹಾಡನ್ನು ಹಾಡಿದ್ದು, ಒರಿಜಿನಲ್ ಹಾಡೇ ಮರೆತು ಹೋಗುವಂತೆ ಮಾಡಿದ್ದಾಳೆ. ಈ ಮುದ್ದಾದ ಹಾಡಿನ ವಿಡಿಯೋ ಸದ್ಯ ನೆಟ್ಟಿಗರ ಮನಸ್ಸನ್ನು ಗೆದ್ದುಕೊಂಡಿದೆ.

ii-fun- station ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಯುವತಿಯೊಬ್ಬಳು ಹೂವಿನ ಬಾಣದಂತೆ ಹಾಡನ್ನು ಹಾಡುವುದನ್ನು ನೋಡಬಹುದು. ತನ್ನ ಅಕ್ಕ ಪಕ್ಕದಲ್ಲಿ ನಿಂತಿರುವ ಸ್ನೇಹಿತರು ಈಕೆ ಹಾಡು ಹಾಡುವ ರೀತಿಗೆ ನಕ್ಕಿದ್ದಾರೆ. ಆದರೆ ಈಕೆ ಮಾತ್ರ ಹಾಡು ಹಾಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಿಲ್ಲ. ಈ ವಿಡಿಯೋದ ಕೊನೆಗೆ ಎಲ್ಲರೂ ಚಪ್ಪಾಳೆ ತಟ್ಟಿ ಹುರಿದುಂಬಿಸಿ ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ಕಾಣಬಹುದು.

ಇದನ್ನೂ ಓದಿ
ಇಂದು ವಾರ್ಷಿಕ ಸಂಬಳವೇ 24 ಲಕ್ಷ ರೂ; ಯಶಸ್ಸಿನ ಹಾದಿ ಬಿಚ್ಚಿಟ್ಟ ಯುವಕ
ಇಳಿವಯಸ್ಸಿನಲ್ಲಿ ಎಂಬಿಎ ಪದವಿ ಪಡೆದ ತಂದೆ, ಮಗನ ಸಂಭ್ರಮ ಹೇಗಿತ್ತು ನೋಡಿ
ಮಳೆಯನ್ನು ಲೆಕ್ಕಿಸದೇ ಭರತನಾಟ್ಯ ಪ್ರದರ್ಶನ ನೀಡಿದ ಕಾಲೇಜು ವಿದ್ಯಾರ್ಥಿನಿಯರು
ಸೋಶಿಯಲ್​ ಮೀಡಿಯಾದಲ್ಲಿ ಹೊಸ ಅಲೆ ಸೃಷ್ಟಿಸಿದ ಟ್ಯಾಂಕ್-ಟಾಪ್ ಎಫೆಕ್ಟ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: Video: ಮಳೆಯನ್ನು ಲೆಕ್ಕಿಸದೇ ಭರತನಾಟ್ಯ ಪ್ರದರ್ಶನ ನೀಡಿದ ಕರ್ನಾಟಕದ ಕಾಲೇಜು ವಿದ್ಯಾರ್ಥಿನಿಯರು

ಈ ವಿಡಿಯೋವನ್ನು ಹಲವಾರು ಬಳಕೆದಾರರು ವೀಕ್ಷಿಸಿದ್ದು, ಈ ಹುಡುಗಿಯ ಕಾನ್ಫಿಡೆನ್ಸ್ ಲೆವೆಲ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಳಕೆದಾರರು ಈಕೆ ಯಾರು ನಕ್ಕರು ತಲೆ ಕೆಡಿಸಿಕೊಂಡಿಲ್ಲ, ಈಕೆಯ ಕಾನ್ಫಿಡೆನ್ಸ್ ಲೆವೆಲ್ ಎಷ್ಟಿದೆ ಎಂದು ಇದುವೇ ತೋರಿಸುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಎಷ್ಟು ಸಾರಿ ನೋಡಿದ್ರು ಬೇಜಾರೇ ಆಗ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ನಗೋರಿಗೆ ಹಾಡೋಕೆ ಬರಲ್ಲ, ನೀವು ಅವರಿಗಿಂತ ಒಂದು ಹೆಜ್ಜೆ ಮುಂದೇ ಇದ್ದಿಯಾ ಬಿಡಮ್ಮ, ನಿಜವಾಗ್ಲೂ ಟ್ರೈ ಮಾಡ್ತಾ ಇರು, ಇನ್ನೂ ಒಳ್ಳೆಯ ವೇದಿಕೆ ಸಿಗುತ್ತೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:05 pm, Thu, 11 September 25