ಪ್ರತಿಯೊಂದು ಸಿನೆಮಾ ಥೀಯೇಟರ್ಗಳಲ್ಲಿಯೂ ಸಿನಿಮಾ ಆರಂಭಕ್ಕೂ ಮುನ್ನ ಧೂಮಪಾನದಿಂದಾಗುವ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವಂತಹ ಖುಷಿ ಯಾರಿಗೆ ಬೇಡ ಎಂಬ ಜಾಹೀರಾತೊಂದು ಪ್ಲೇ ಆಗುತ್ತಿತ್ತು. 45 ಸೆಕೆಂಡುಗಳ ಈ ದೀರ್ಘಾವಧಿ ಜಾಹೀರಾತಿನಲ್ಲಿ ತನ್ನ ಪುಟ್ಟ ಮಗಳಿಗಾಗಿ ಮತ್ತು ಕುಟುಂಬಕ್ಕಾಗಿ ತಂದೆ ಧೂಮಪಾನವನ್ನು ತ್ಯಜಿಸುವಂತಹ ದೃಶ್ಯವನ್ನು ಕಾಣಬಹುದು. ಸಾಮಾನ್ಯವಾಗಿ ನೀವೆಲ್ಲರೂ ಆ ಜಾಹೀರಾತನ್ನು ನೋಡಿರುತ್ತೀರಿ ಅಲ್ವಾ. ಅಂದು ಆ ಜಾಹೀರಾತಿನಲ್ಲಿ ನಟಿಸಿದ್ದ ಪುಟ್ಟ ಬಾಲಕಿ ಈಗ ಹೇಗಿದ್ದಾಳೆ, ಏನು ಮಾಡುತ್ತಿದ್ದಾಳೆ ಎಂಬುದರ ಬಗ್ಗೆ ಗೊತ್ತಾ? ಆ ಕುರಿತಿ ಮಾಹಿತಿ ಇಲ್ಲಿದೆ.
ಭಾರತೀಯ ಸರಕಾರದ ಸ್ಮೋಕಿಂಗ್ ಕಿಲ್ಸ್ ಜಾಹೀರಾತಿನ ಮೂಲಕ ಫೇಮಸ್ ಆದ ಈ ಮುದ್ದಾದ ಹುಡುಗಿಯ ಹೆಸರು ಸಿಮ್ರಾನ್ ನಾಟೆಕರ್. ಮೂಲತಃ ಮುಂಬೈ ನಿವಾಸಿಯಾಗಿರುವ ಸಿಮ್ರಾನ್ ತನ್ನ ಆರನೇ ವಯಸ್ಸಿನಲ್ಲಿ ಜಾಹೀರಾತು ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು, ಈ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದರು. ಇವರಿಗೆ ನೋ ಸ್ಮೋಕಿಂಗ್ ಜಾಹೀರಾತು ಹೆಚ್ಚು ಖ್ಯಾತಿ ತಂದುಕೊಡ್ತು. ಇದೀಗ ಸ್ಪುರದ್ರೂಪಿ ಚೆಲುವೆಯಾಗಿ ಬೆಳೆದು ನಿಂತಿರುವ ಸಿಮ್ರಾನ್ ಟಿವಿ ಶೋ ಮತ್ತು ಚಲನಚಿತ್ರ ಎರಡರಲ್ಲೂ ಬ್ಯುಸಿಯಾಗಿದ್ದಾರೆ. ಅಲ್ಲದೆ ಮಾಡೆಲಿಂಗ್ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ.
ಸಿಮ್ರಾನ್ ಕೆಲೋಗ್ಸ್, ಕಾರ್ನ್ಫ್ಲೇಕ್ಸ್, ಕ್ಲೀನಿಕ್ ಪ್ಲಸ್ ಶಾಂಪೂ, ಡೋಮಿನೋಸ್ ಪಿಜ್ಜಾ ಸೇರಿದಂತೆ 150 ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಸೂಟ್ ಲೈಫ್ ಆಫ್ ಕರಣ್, ಕಬೀರ್, ಪೆಹ್ರಾದಾರ್ ಪಿಯಾ ಕಿ ಮುಂತಾದ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ನಂತರ ಬಾಲಿವುಡ್ ಪ್ರವೇಶಿಸಿದ ಸಿಮ್ರಾನ್ ಜಾನೇ ಕಹಾನ್ ಸೆ ಆಯಿ ಹೈ, ಕ್ರಿಶ್, ದಾವತ್ ಇ ಇಷ್ಕ್, ಬೆಸ್ಟ್ ಆಫ್ ಲಕ್ ಲಾಲು ಸೇರಿದಂತೆ ಕೆಲವು ಚಲನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗೆ ಬಾಲ ನಟಿಯಾಗಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಸಿಮ್ರಾನ್ ಈಗ ಸಿನೆಮಾಗಳಲ್ಲಿ ಫುಲ್ ಬ್ಯುಸಿಯಾಗಿ, ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿದ್ದಾರೆ.
ಇದನ್ನೂ ಓದಿ: ಅಪ್ಪನಿಗೆ ಇದು ಭಾವುಕ ಕ್ಷಣ, ಮಗನ ಸ್ಟೇಜ್ ಪರ್ಫಾರ್ಮೆನ್ಸ್ಗೆ ತಂದೆಯ ರಿಯಾಕ್ಷನ್ ಹೇಗಿತ್ತು ನೋಡಿ
ಸಾಮಾಜಿಕ ಜಾಲತಾಣದಲ್ಲಿಯೂ ತುಂಬಾ ಸಕ್ರಿಯವಾಗಿರುವ ಸಿಮ್ರಾನ್ ಇನ್ಸ್ಟಾಗ್ರಾಮ್ ಅಲ್ಲಿ ಎರಡುವರೆ ಲಕ್ಷಕ್ಕೂ ಅಧಿಕ ಫೋಲೊವರ್ಸ್ ಗಳನ್ನು ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದದಲ್ಲಿ ತನ್ನ ಫೋಟೋಗಳನ್ನು ಹಂಚಿಕೊಳ್ಳುವ ಸಿಮ್ರಾನ್ ಅವರ ಬೋಲ್ಡ್ ಅವತಾರಕ್ಕೆ ಪಡ್ಡೆ ಹುಡುಗರಂತೂ ಫುಲ್ ಫಿದಾ ಆಗಿದ್ದಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:59 pm, Tue, 30 January 24