Viral Video: ಅಪ್ಪನಿಗೆ ಇದು ಭಾವುಕ ಕ್ಷಣ, ಮಗನ ಸ್ಟೇಜ್ ಪರ್ಫಾರ್ಮೆನ್ಸ್​​​ಗೆ ತಂದೆಯ ರಿಯಾಕ್ಷನ್​​​ ಹೇಗಿತ್ತು ನೋಡಿ

ತಂದೆ-ಮಕ್ಕಳ ಬಾಂಧವ್ಯ ಮಧುರವಾದದ್ದು, ಮಕ್ಕಳು ಕೇಳಿದ್ದನ್ನೆಲ್ಲಾ, ಕೊಡಿಸುವ, ಅವರ ಆಸೆ ಕನಸುಗಳನ್ನು ಈಡೇರಿಸುವ, ಅವರ ಭವಿಷ್ಯಕ್ಕಾಗಿ ಹಗಲಿರುಳು ದುಡಿಯುವ ಶ್ರಮ ಜೀವಿ ಎಂದರೆ ಅದು ಅಪ್ಪ. ಈ ತಂದೆಯಂದಿರು ತಮ್ಮ ಮಕ್ಕಳ ಪುಟ್ಟ ಸಾಧನೆಗಳನ್ನು ದೊಡ್ಡದಾಗೆಯೇ ಆನಂದಿಸುತ್ತಾರೆ. ಇದಕ್ಕೆ ಜೀವಂತ ಸಾಕ್ಷಿಯಂತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು, ವೇದಿಕೆಯ ಮೇಲೆ ಮಗನ ನಾಟಕ ಪ್ರದರ್ಶನವನ್ನು ಕಂಡು ತಂದೆಯೊಬ್ಬರು ಭಾವುಕರಾಗಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ನೋಡುಗರ ಕಣ್ಣಲ್ಲಿ ನೀರು ತರಿಸಿದೆ.

Viral Video: ಅಪ್ಪನಿಗೆ ಇದು ಭಾವುಕ ಕ್ಷಣ, ಮಗನ ಸ್ಟೇಜ್ ಪರ್ಫಾರ್ಮೆನ್ಸ್​​​ಗೆ ತಂದೆಯ ರಿಯಾಕ್ಷನ್​​​ ಹೇಗಿತ್ತು ನೋಡಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 30, 2024 | 3:42 PM

ಹೆತ್ತವರು ಮತ್ತು ಮಕ್ಕಳ ನಡುವಿನ ಬಾಂಧವ್ಯ ಮಧುರವಾದ್ದದು, ಮಕ್ಕಳ ಏಳು ಬೀಳುಗಳಲ್ಲಿ ಸದಾ ಬೆನ್ನೆಲುಬಾಗಿ ನಿಂತುಕೊಳ್ಳುವ ತಂದೆ ತಾಯಿ ಸದಾ ಮಕ್ಕಳ ಏಳಿಗೆಯನ್ನೇ ಬಯಸುತ್ತಾರೆ. ಮಕ್ಕಳಿಗೂ ಕೂಡಾ ಅಷ್ಟೆ, ವಿಶೇಷವಾಗಿ ತಾವು ಶಾಲಾ ಕಾಲೇಜು ಸಮಾರಂಭಗಳಲ್ಲಿ ಬಹುಮಾನ ಪಡೆದರೂ, ಡಾನ್ಸ್ ಮಾಡಿದರೂ, ಹಾಡಿದರೂ, ನಾಟಕ ಪ್ರದರ್ಶನ ಮಾಡಿದರೂ ಅಥವಾ ಇನ್ನಾವುದೇ ರೀತಿಯ ಪ್ರತಿಭೆಗಳ ಪ್ರದರ್ಶನ ಮಾಡಿದರೂ ಅದನ್ನು ಅಪ್ಪ ಅಮ್ಮ ನೋಡಬೇಕು, ನೋಡಿ ಮೆಚ್ಚಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಹಾಗೇನೇ ಹೆತ್ತವರು ಕೂಡಾ ಮಕ್ಕಳ ಪ್ರತಿಭೆಯನ್ನು ಕಂಡು ಬಹಳ ಹೆಮ್ಮೆ ಪಡುತ್ತಾರೆ. ಅದೇ ರೀತಿ ಇಲ್ಲೊಬ್ಬರು ತಂದೆ ತಮ್ಮ ಮಗನ ನಾಟಕ ಪ್ರದರ್ಶನವನ್ನು ನೋಡಲು ಬಂದಿದ್ದು, ವೇದಿಕೆಯ ಮೇಲೆ ಮಗನ ನಾಟಕ ಪ್ರದರ್ಶನವನ್ನು ಕಂಡು ಭಾವುಕರಾಗಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ನೆಟ್ಟಿಗರ ಮನ ಗೆದ್ದಿದೆ.

ಈ ವೈರಲ್ ವಿಡಿಯೋವನ್ನು ಆಶಿಶ್ ಪ್ರಜಾಪ್ರತಿ (@Aash_prajapati) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, “ತಂದೆಯ ಅನ್ಕಂಡೀಷನಲ್ ಲವ್” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ವೇದಿಕೆಯ ಮೇಲೆ ಮಗನ ನಾಟಕ ಪ್ರದರ್ಶನವನ್ನು ಕಂಡು ತಂದೆಯೊಬ್ಬರು ಭಾವುಕರಾಗಿರುವ ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋದಲ್ಲಿ ಮಗನ ನಾಟಕ ಪ್ರದರ್ಶನವನ್ನು ಕಂಡು ತಂದೆಯೊಬ್ಬರು ಭಾವುಕರಾಗಿದ್ದಾರೆ. ಹೌದು ಮಗನ ನಾಟಕ ಪ್ರದರ್ಶನವನ್ನು ತಲ್ಲೀನರಾಗಿ ನೋಡುತ್ತಿದ್ದ ತಂದೆಯೊಬ್ಬರು ಮಗನ ಪ್ರತಿಭೆಯನ್ನು ಕಂಡು ಇದ್ದಕ್ಕಿದ್ದಂತೆ ಭಾವುಕರಾಗಿಬಿಡುತ್ತಾರೆ. ಹೀಗೆ ಬಹಳ ಹೆಮ್ಮೆಯಿಂದ ಮಗನ ನಾಟಕ ಪ್ರದರ್ಶನವನ್ನು ನೋಡುತ್ತಿದ್ದ ಈ ತಂದೆ ಕೊನೆಯಲ್ಲಿ ಜೋರಾಗಿ ಚಪ್ಪಾಳೆ ತಟ್ಟಿ ಮಗನಿಗೆ ಪ್ರೋತ್ಸಾಹವನ್ನು ನೀಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ತನ್ನ ಮರಿಗೆ Z+​​​​​​​ ಸೆಕ್ಯೂರಿಟಿ ನೀಡಿದ ಮುಳ್ಳು ಹಂದಿ, ಚಿರತೆ ದಾಳಿಯ ರಣರೋಚಕ ವಿಡಿಯೋ 

ಜನವರಿ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಎರಡುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹದಿಮೂರು ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼನನ್ನ ತಂದೆ ನಮ್ಮನ್ನು ಅಗಲಿ ಎರಡು ವರ್ಷಗಳಾಯಿತು, ಈ ವಿಡಿಯೋ ನೋಡಿ ನನ್ನ ತಂದೆಯನ್ನೇ ನೋಡಿದಂತಾಯಿತುʼ ಅಂತ ಭಾವನಾತ್ಮಕ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ದೃಶ್ಯ ನನ್ನ ಕಣ್ಣಂಚಿನಲ್ಲಿ ನೀರು ತರಿಸಿತುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಎಂತಹಾ ಅದ್ಭುತ ವಿಡಿಯೋವಿದುʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ನಮ್ಮನ್ನು ಹೆತ್ತವರಷ್ಟು ಯಾರು ಪ್ರೀತಿಸಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್