Viral Video: ಅಬ್ಬಬ್ಬಾ… ಜಗತ್ತಿನ ಅತೀ ಉದ್ದವಾದ ಬೈಕ್ ನೋಡಿದ್ದೀರಾ?

| Updated By: ಅಕ್ಷತಾ ವರ್ಕಾಡಿ

Updated on: May 19, 2024 | 2:16 PM

ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ಬಗೆಯ ಜುಗಾಡ್ ಐಡಿಯಾಗಳ ವಿಡಿಯೋಗಳು ಹರಿದಾಡುತ್ತಿರುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ಇದೀಗ ಹರಿದಾಡುತ್ತಿದ್ದು, ಯುವಕನೊಬ್ಬ 7 ರಿಂದ 8 ಜನರು ಕೂರುವಂತಹ ಜಗತ್ತಿನ ಅತೀ ಉದ್ದದ ಬೈಕ್ ಒಂದನ್ನು ತಯಾರಿಸಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Viral Video: ಅಬ್ಬಬ್ಬಾ… ಜಗತ್ತಿನ ಅತೀ  ಉದ್ದವಾದ  ಬೈಕ್  ನೋಡಿದ್ದೀರಾ?
Follow us on

ನೀವು ಐಷಾರಾಮಿ ಬೈಕ್‌ಗಳಿಂದ ಹಿಡಿದು ಎಲ್ಲಾ ರೀತಿಯ ಬೈಕ್‌ಗಳನ್ನು ನೋಡಿರಬಹುದು. ಈ ಬೈಕ್‌ಗಳಲ್ಲಿ ಕೇವಲ ಇಬ್ಬರು ಪ್ರಯಾಣಿಕರು ಮಾತ್ರ ಪ್ರಯಾಣಿಸಲು ಸಾಧ್ಯ. ಹೆಚ್ಚೆಂದರೆ ಮೂವರು ಕುಳಿತು ಪ್ರಯಾಣಿಸಬಹುದು. ಆದ್ರೆ ಇಲ್ಲೊಬ್ಬ ಯುವಕ ಬರೋಬ್ಬರಿ ಏಳರಿಂದ ಎಂಟು ಮಂದಿ ಕುಳಿತು ಪ್ರಯಾಣಿಸಬಹುದಾದ ಜಗತ್ತಿನ ಅತೀ ಉದ್ದದ ಬೈಕ್‌ ಒಂದನ್ನು ತಯಾರಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಅತೀ ಉದ್ದದ ಬೈಕ್‌ ಕಂಡು ನೋಡುಗರು ದಂಗಾಗಿದ್ದಾರೆ.

ಈ ಕುರಿತ ವಿಡಿಯೋವನ್ನು @worldridertrend ಎಂಬ ಹೆಸರಿನ ಇನ್‌ಸ್ಟಾಗ್ರಾಮ್‌ ಪೇಜ್‌ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, “ಈ ಮೋಟಾರ್‌ ಸೈಕಲ್‌ನಲ್ಲಿ ಗರಿಷ್ಠ ಎಷ್ಟು ಮಂದಿ ಪ್ರಯಾಣ ಮಾಡಬಹುದು, ಕಾಮೆಂಟ್‌ ಮಾಡಿ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಬರೋಬ್ಬರಿ 7 ರಿಂದ 8 ಮಂದಿ ಕುಳಿತು ಪ್ರಯಾಣಿಸಬಹುದಾದ ಜಗತ್ತಿನ ಅತೀ ಉದ್ದದ ಬೈಕ್‌ ಅನ್ನು ಕಾಣಬಹುದು. ಯುವಕನೊಬ್ಬ ಅತೀ ಉದ್ದದ ಬೈಕ್‌ ಒಂದನ್ನು ತಯಾರಿಸಿ, ಅದರಲ್ಲಿ ಆತನ ಆರು ಮಂದಿ ಸ್ನೇಹಿತರನ್ನು ಕೂರಿಸಿ ಜಾಲಿ ರೈಡ್‌ ಹೋಗಿದ್ದಾನೆ.

ಇದನ್ನೂ ಓದಿ: ಪತ್ನಿಯನ್ನು ಕೊಂದು, ಮೃತದೇಹದೊಂದಿಗೆ ಸೆಲ್ಫಿ ತೆಗೆದು ಸಂಬಂಧಿಕರಿಗೆ ಕಳುಹಿಸಿ, ಆತ್ಮಹತ್ಯೆ ಮಾಡಿಕೊಂಡ ಪತಿ

5 ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 3.6 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಅಬ್ಬಬ್ಬಾ…. ಇದ್ಯಾವ ತರಹದ ಬೈಕ್‌ ಗುರು ಎಂದು ಅತೀ ಉದ್ದದ ಬೈಕ್‌ ಕಂಡು ನೆಟ್ಟಿಗರು ಶಾಕ್‌ ಆಗಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:15 pm, Sun, 19 May 24