Viral Video: ಎಡ್ವಾರ್ಡೋ ಎಡ್ವಾರ್ಡೋ ಎಲ್ಲಿದ್ದೀಯಪ್ಪಾ ಎಡ್ವಾರ್ಡೋ

| Updated By: ಶ್ರೀದೇವಿ ಕಳಸದ

Updated on: Aug 23, 2022 | 2:10 PM

Boy Lost His Father : ಅರ್ಜೆಂಟೈನಾದ ಬೀದಿಯ ಜನಸಂದಣಿಯಲ್ಲಿ ಈ ಹುಡುಗ ಅಪ್ಪನಿಂದ ತಪ್ಪಿಸಿಕೊಂಡಿದ್ದಾನೆ. ಮರುಗಿದ ಸುತ್ತಮುತ್ತಲಿನ ಜನರು, ಬೀದಿಬದಿಯ ಸಂಗೀತಗಾರರು ಒಟ್ಟಾಗಿ ಸೇರಿ ಏನು ಮಾಡಿರಬಹುದು? ಹೃದಯಸ್ಪರ್ಶಿ ವಿಡಿಯೋ ನೋಡಿ. 

Viral Video: ಎಡ್ವಾರ್ಡೋ ಎಡ್ವಾರ್ಡೋ ಎಲ್ಲಿದ್ದೀಯಪ್ಪಾ ಎಡ್ವಾರ್ಡೋ
ಅಪ್ಪಾ ಅಪ್ಪಾ ಎಲ್ಲಿದ್ದೀಯಾ
Follow us on

Dad and Son : ಅಯ್ಯೋ ನನ್ನ ಅಪ್ಪ ಎಲ್ಲಿ ಹೋದ? ಎಂದು ಚಿಕ್ಕಮಕ್ಕಳು ಸಂತೆಯಲ್ಲೋ, ಜಾತ್ರೆಯಲ್ಲೋ, ಕಿಕ್ಕಿರಿದ ಬೀದಿಗಳಲ್ಲೋ ಅಳುವಾಗ ಉಳಿದವರು ಸಾಮಾನ್ಯವಾಗಿ ಏನು ಮಾಡುತ್ತಾರೆ? ಪೊಲೀಸ್ ಗೀಲೀಸ್​ ಎಂದು ಧಡಬಡಿಸಿ ಮಕ್ಕಳನ್ನು ಮತ್ತಷ್ಟು ಆತಂಕಕ್ಕೆ ತಳ್ಳುತ್ತಾರೆ. ತಲೆಗೊಂದು ಮಾತಾಡಿ ಮತ್ತಷ್ಟು ಗಾಬರಿಗೆ ಬೀಳಿಸುತ್ತಾರೆ. ಆದರೆ ಅರ್ಜೆಂಟೈನಾದ ಬೀದಿಯಲ್ಲಿ ನಡೆದ ಈ ದೃಶ್ಯ ನೋಡಿದರೆ ಭಲೇ! ಎನ್ನಿಸದೇ ಇರದು. ಒಬ್ಬ ಹುಡುಗ ಈ ಗದ್ದಲಲ್ಲಿ ತನ್ನ ತಂದೆಯನ್ನು ಕಳೆದುಕೊಂಡಿದ್ದಾನೆ. ಅಳುತ್ತಿರುವ ಅವನನ್ನು ಗಮನಿಸಿದ ಇಲ್ಲಿರುವ ಜನಸಮೂಹ ಈ ಸಂದರ್ಭವನ್ನು ಅದೆಷ್ಟು ಸುಲಲಿತವಾಗಿ ರಚನಾತ್ಮಕವಾಗಿ ನಿಭಾಯಿಸಿದೆ ಎಂದರೆ, ಇದು ಸಿನೆಮಾ ದೃಶ್ಯವೊಂದರ ಚಿತ್ರೀಕರಣ ಇರಬೇಕು ಎನ್ನುವ ಮಟ್ಟಿಗೆ ಅನುಮಾನ ಹುಟ್ಟುಹಾಕಿದೆ. ಆದರೆ ಇದು ನಿಜವಾಗಿಯೂ ತತ್​ಕ್ಷಣವೇ ಸೃಷ್ಟಿಯಾದ ಸನ್ನಿವೇಶ. ಅಳುತ್ತಿದ್ದ ಹುಡುಗನನ್ನು ನೋಡಿದ ಒಬ್ಬ ಆತನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಅವನ ಅಪ್ಪನನ್ನು ಹುಡುಕಲು ಸಹಾಯ ಮಾಡಲು ಮುಂದಾಗಿದ್ದಾನೆ. ನಂತರ ಆ ವ್ಯಕ್ತಿ ಎಡ್ವಾರ್ಡೋ ಎಂದು ಹುಡುಗನ ಅಪ್ಪನ ಹೆಸರು ಹಿಡಿದು ಕೂಗಲು ಶುರು ಮಾಡಿದ್ದಾನೆ. ಸುತ್ತಮುತ್ತಲಿನ ಜನರೂ ತಮ್ಮ ಕೂಗನ್ನೂ ಸೇರಿಸಿದ್ದಾರೆ. ಅಷ್ಟೇ ಯಾಕೆ ಬೀದಿಬದಿಯಲ್ಲಿರುವ ಸಂಗೀತಗಾರರು ಲಯಬದ್ಧವಾಗಿ ಸತತವಾಗಿ ಎಡ್ವಾರ್ಡೋ ನಾಮಸ್ಮರಣೆ ಮಾಡಲು ಶುರು ಮಾಡಿದ್ದಾರೆ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇಡೀ ಜನಸಮೂಹವೇ  ಇಂಥ ಸಿಹಿಯಾದ ಸನ್ನಿಗೊಳಗಾಗಿ ಎಡ್ವಾರ್ಡೋನನ್ನು ಜಪಿಸುವಲ್ಲಿ ಮುಳುಗಿದೆ. ಕೊನೆಗೆ ಅಪ್ಪನಿಗೆ ಈ ಕೂಗು ತಲುಪಿ ಮಗನನ್ನು ಹುಡುಕಿಕೊಂಡು ಬಂದೇಬಿಟ್ಟಿದ್ದಾನೆ! 2 ಮಿಲಿಯನ್​ ನೆಟ್ಟಿಗರು ವೀಕ್ಷಿಸಿದ ಈ ವಿಡಿಯೋ ನಿಮ್ಮನ್ನೂ ಮೃದುಗೊಳಿಸದೇ ಇದ್ದೀತೇ?

ಸುಮಾರು 2.3 ಲಕ್ಷ ನೆಟ್ಟಿಗರು ವಿಡಿಯೋ ಮೆಚ್ಚಿದ್ದಾರೆ. ಅಪ್ಪಮಗ ಒಂದಾದ ದೃಶ್ಯವನ್ನು ನೋಡಿ ಅನೇಕ ನೆಟ್ಟಿಗರು ಹನಿಗಣ್ಣಾಗಿದ್ದನ್ನು ಹೇಳಿಕೊಂಡಿದ್ದಾರೆ. ಗುರುತಿಲ್ಲ ಪರಿಚಯವಿಲ್ಲ, ತಮ್ಮದೇ ಜಗತ್ತಿನಲ್ಲಿ ಮುಳುಗಿ ಹೋಗಿದ್ದ ಈ ಜನಸಮೂಹ ಅಪ್ಪ ಮಗನ ಪುನರ್ಮಿಲನಕ್ಕೆ ಅದೆಷ್ಟು ಸೂಕ್ಷ್ಮವಾಗಿ, ಸಂವೇದನಾಶೀಲತೆಯಿಂದ ಸ್ಪಂದಿಸಿದೆಯಲ್ಲವೆ?; ಕಲೆಗೆ ಲಯಸಾಧಿಸುವ ಶಕ್ತಿ ಇದೆ ಎನ್ನುವುದು ಹೀಗೆ ಆಗಾಗ ಸಾಬೀತಾಗುತ್ತಿರುತ್ತದೆ.

ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:01 pm, Tue, 23 August 22