ಭಾರತ ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚು ಗೆಲ್ಲಲು ಗೋಲ್ಕೀಪರ್ ಪಿ.ಆರ್ ಶ್ರೀಜೇಶ್ ಅವರ ಶ್ರಮ ಪ್ರಮುಖವಾದ್ದು. ಸ್ಪರ್ಧೆಯಲ್ಲಿ ಕನಿಷ್ಠ 25ಕ್ಕೂ ಹೆಚ್ಚು ಪೆನಾಲ್ಟಿಕಾರ್ನರ್ಗಳನ್ನು ತಡೆದು ಸ್ಪರ್ಧೆಯಲ್ಲಿ ಗೆಲ್ಲಲು ಪ್ರಮುಖ ಪಾತ್ರವಹಿಸಿದರು. ಪಂದ್ಯ ಮುಗಿಯುತ್ತಿದ್ದಂತೆಯೇ ಗೋಲು ಪೆಟ್ಟಿಗೆಗೆ ನಮಸ್ಕರಿಸಿ, ನನ್ನ ಜೀವನದಲ್ಲಿ ಅತಿ ದೊಡ್ಡ ಕ್ಷಣವಿದು ಎಂದು ಕೆಲ ಹೊತ್ತು ಭಾವುಕರಾದರು. ಇದೀಗ ಅವರು ಟ್ವೀಟ್ ಮಾಡಿದ್ದು ಈ ಪದಕ ನಿಮಗಾಗಿಯೇ ಅಪ್ಪ ಎಂದು ಭಾವನಾತ್ಮಕ ನುಡಿಗಳನ್ನಾಡಿದ್ದಾರೆ.
ಈ ಟ್ವೀಟ್ ನನ್ನ ತಂದೆ ಅವರಿಗೆ. ಅವರೇ ನನ್ನ ನಾಯಕ ಎಂದು ಶ್ರೀಜೇಶ್ ಬರೆದುಕೊಂಡಿದ್ದಾರೆ. ಅವರ ವಿಜಯವನ್ನು ತಂದೆಗೆ ಅರ್ಪಿಸುವ ಮೂಲಕ ಟ್ವೀಟ್ ಮಾಡಿದ್ದಾರೆ. ಈ ಪದಕ ನಿನಗಾಗಿಯೇ ಅಪ್ಪ ಎಂದು ಭಾವನಾತ್ನವಾಗಿ ಟ್ವೀಟ್ ಮಾಡಿದ್ದಾರೆ. ಅವರ ಆಟದಲ್ಲಿ ಗೆದ್ದಾಗ ಮನೆಯವರೆಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟುತ್ತಿರುವದನ್ನು ವಿಡಿಯೋದಲ್ಲಿ ನೋಡಬಹುದು. 25 ಸೆಕೆಂಡುಗಳ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಿ.ಆರ್ ಶ್ರೀಜೇಶ್ ಅವರ ತಂದೆ ಎದ್ದು ನಿಂತು ಕೈಗಳನ್ನು ಮುಗಿದು ಪ್ರಾರ್ಥಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಜತೆಗೆ ಅವರ ಕುಟುಂಬದ ಸದಸ್ಯರೆಲ್ಲರೂ ಎದ್ದು ನಿಂತು ಶ್ರೀಜೇಶ್ ಅವರ ವಿಜಯವನ್ನು ಸಂಭ್ರಮಿಸಿದ್ದಾರೆ. ಈ ಪದಕ ನಿನಗಾಗಿಯೇ ಅಪ್ಪ.. ನನ್ನ ಹಿರೋ ಎಂಬ ಶೀರ್ಷಿಕೆಯೊಂದಿಗೆ ಶ್ರೀಜೇಶ್ ಟ್ವೀಟ್ ಮಾಡಿದ್ದಾರೆ.
This medal is for you my achaaan ( father )
My hero, he is why I’m here pic.twitter.com/1OdO5eZwaw
— sreejesh p r (@16Sreejesh) August 5, 2021
The Wall that won the hearts of all ?
Double saves or one-on-one clearances, PR Sreejesh was at his impenetrable best in the #Bronze medal match between #IND and #GER. ? ?#Tokyo2020 | #UnitedByEmotion | #StrongerTogether | #BestOfTokyo | #Hockey | @16Sreejesh pic.twitter.com/zTXFOPXBoq
— #Tokyo2020 for India (@Tokyo2020hi) August 5, 2021
ಇದನ್ನೂ ಓದಿ:
Tokyo Olympics 2020: ಈ ಗೆಲುವಿನೊಂದಿಗೆ ಭಾರತ ಹಾಕಿ ತಂಡದ ‘ಹೊಸ ಯುಗ’ ಆರಂಭ
Published On - 3:24 pm, Fri, 6 August 21