
ಪ್ರತಿಯೊಂದು ದೇಶದ ಸಂಸ್ಕೃತಿ (Culture), ಆಚಾರ ವಿಚಾರಗಳು ಭಿನ್ನವಾಗಿರುತ್ತವೆ. ಇವುಗಳಲ್ಲಿ ಕೆಲವೊಂದು ಪದ್ಧತಿಗಳು ಅದ್ಭುತ ಎಂದೆನಿಸಿದರೆ, ಕೆಲವೊಂದು ವಿಚಾರಗಳ ಬಗ್ಗೆ ಕೇಳಿದಾಗ ಅಸಹ್ಯ ಎಂದೆನಿಸುತ್ತದೆ. ಉದಾಹರಣೆಗೆ ಭಾರತೀಯರಾದ ನಮಗೆ ಚೀನಾದವರ ಕೆಲವೊಂದು ವಿಲಕ್ಷಣ ಆಹಾರ ಪದ್ಧತಿಯನ್ನು ಕಂಡು ಅಸಹ್ಯ ಎಂದೆನಿಸುತ್ತದೆ. ಅದೇ ರೀತಿ ಭಾರತೀಯರ ಒಂದಷ್ಟು ಅಭ್ಯಾಸಗಳು, ಪದ್ಧತಿಗಳು ಹೊರಗಿನ ದೇಶದವರಿಗೆ ವಿಚಿತ್ರ ಎಂದೆನಿಸುತ್ತದೆ. ಹೀಗೆ ವಿಚಿತ್ರವೆನಿಸುವ ಭಾರತದ ಕೆಲವೊಂದಿಷ್ಟು ನನಗಂತೂ ಸಿಕ್ಕಾಪಟ್ಟೆ ಇಷ್ಟ ಎಂದು ರಷ್ಯಾದ ಮಹಿಳೆ ಹೇಳಿಕೊಂಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಲೂಲಿಯಾ ಅಸ್ಲಾಮೋವಾ ಎಂಬ ರಷ್ಯಾದ ಮಹಿಳೆ (Russian woman in Bengaluru) ಇತರರಿಗೆ ಕ್ರಿಂಜ್ ಅಥವಾ ವಿಚಿತ್ರವೆನಿಸುವ ಈ ಭಾರತದ ಈ ಕೆಲವು ಅಭ್ಯಾಸಗಳು ನನಗೆ ಇಷ್ಟ ಎಂದು ಹೇಳಿದ್ದಾರೆ. ಈ ಕುರಿತ ವಿಡಿಯೋವನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕೈಯಿಂದ ಊಟ ಮಾಡುವುದರಿಂದ ಹಿಡಿದು ಮಗ ಸೊಸೆ ಅತ್ತೆ ಮಾವಂದಿರ ಜೊತೆಗೆಯೇ ವಾಸಿಸುವುದು ಭಾರತದಲ್ಲಿನ ಸಾಮಾನ್ಯ ಪದ್ಧತಿಯಾಗಿದೆ. ಹೆಚ್ಚಿನ ವಿದೇಶಿಗರಿಗೆ ಇದೊಂಥರಾ ವಿಚಿತ್ರ ಎಂದೆನಿಸುತ್ತದೆ. ಆದ್ರೆ ಇಲ್ಲೊಬ್ಬರು ಬೆಂಗಳೂರಿನಲ್ಲಿ ವಾಸಿಸುವಂತಹ ರಷ್ಯಾದ ಮಹಿಳೆಗೆ ಭಾರತದ ಈ ಎಲ್ಲಾ ಅಭ್ಯಾಸಗಳು ಇಷ್ಟವಂತೆ. ಈ ಕುರಿತ ವಿಡಿಯೋವನ್ನು ಲೂಲಿಯಾ ಅಸ್ಲಾಮೋವಾ (yulia_bangalore) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಇದು ಭಾರತದಲ್ಲಿ ಸಾಮಾನ್ಯವಾಗಿದೆ, ಇತರರಿಗೆ ಈ ವಿಷಯಗಳು ವಿಚಿತ್ರ ಎಂದೆನಿಸುತ್ತದೆ, ಆದರೆ ಇವುಗಳು ನನಗಿಷ್ಟ ಎಂದು ಹೇಳಿದ್ದಾರೆ. ಆ ವಿಷಯಗಳು ಯಾವುದೆಂದರೆ,
ಇದನ್ನೂ ಓದಿ: ಚೀನಾದ ಬೀದಿಯಲ್ಲಿ ಕ್ಷೌರ ಮಾಡಿಸಿಕೊಂಡ ಭಾರತೀಯ, ಅನುಭವ ಹೇಗಿತ್ತು ನೋಡಿ
ಜುಲೈ 3 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಲ್ಲಿ ಎಲ್ಲವೂ ಪ್ರೀತಿ ಮತ್ತು ನಗುವಿನಿಂದಲೇʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಮ್ಮ ಮಾತು ನಿಜʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನೀವು ಭಾರತೀಯ ಸಂಸ್ಕೃತಿಗೆ ಹೊಂದಿಕೊಂಡಿರುವುದು ಕೂಡ ಅದ್ಭುತವಾಗಿದೆʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ