Viral Video: ಎಲ್ಲಾದರೂ ಉಂಟೆ? ಕಸವೇ ಕಾಸು, ಅದುವೇ ಫೀಸು; ಆಸ್ಸಾಂನ ಈ ವಿಶಿಷ್ಟ ಶಾಲೆ ನೋಡಿ

|

Updated on: Oct 14, 2023 | 10:24 AM

School: ಈ ಮಕ್ಕಳು ಶಾಲೆಗೆ ಫೀಸ್​ ಕೊಡಬೇಕಿಲ್ಲ ಅದರ ಬದಲಾಗಿ ಊರಲ್ಲಿರುವ ಪ್ಲಾಸ್ಟಿಕ್ ಬಾಟಲಿಯನ್ನು ಆಯ್ದು ಈ ಶಾಲೆಗೆ ಕೊಟ್ಟರೆ ಸಾಕು. ಅದೇ ಅವರು ಕೊಡುವ ಫೀಸ್​. ಇನ್ನು ಇಲ್ಲಿಯ ಕಲಿಕೆಯ ವಿಧಾನವೂ ಸಾಮಾನ್ಯ ಶಾಲೆಗಳಿಗಿಂತ ಭಿನ್ನ. ಹಾಗಿದ್ದರೆ ಇಂತ ಭಿನ್ನ ಆಲೋಚನೆಯ ಶಾಲೆ ಎಲ್ಲಿದೆ, ಇದರ ರೂವಾರಿಗಳು ಯಾರು ಎನ್ನುವ ಕುತೂಹಲ ಉಂಟಾಗುತ್ತಿದೆಯೇ?

Viral Video: ಎಲ್ಲಾದರೂ ಉಂಟೆ? ಕಸವೇ ಕಾಸು, ಅದುವೇ ಫೀಸು; ಆಸ್ಸಾಂನ ಈ ವಿಶಿಷ್ಟ ಶಾಲೆ ನೋಡಿ
ಪ್ಲಾಸ್ಟಿಕ್​ ಬಾಟಲಿ ಕೊಟ್ಟರೆ ಶಾಲೆಯ ಫೀಸ್​ ತುಂಬಿದಂತೆ
Follow us on

Assam: ಶಾಂತಸಾಗರದಾಳದಿಂದ ಮೇರುಗಿರಿಗಳ ತುದಿಯವರೆಗೆ; ಮಹಾನಗರಗಳ ಮೋರಿಗಳಿಂದ ಹಳ್ಳಿಹಳ್ಳಿಗಳ ಕೆರೆಗಳವರೆಗೆ; ಕಾಂಕ್ರೀಟ್ ಕಾಡುಗಳಿಂದ ಗೊಂಡಾರಣ್ಯಗಳವರೆಗೆ, ಭಾರತದ ಎಲ್ಲೆಡೆ ಎದ್ದುಕಾಣುವ ಲಕ್ಷಣವೆಂದರೆ ನಾವುಗಳು ಬಳಸಿ ಬಿಸಾಕಿದ ಪ್ಲ್ಯಾಸ್ಟಿಕ್ (Plastic). ನಮ್ಮ ಮಕ್ಕಳು ಓದುವ ಶಾಲೆಗಳಲ್ಲಿ ‘ಬಳಕೆ ಕಡಿಮೆ ಮಾಡಿ, ಮರುಬಳಿಸಿ’ ‘ಕಸದಿಂದ ರಸ’ ಮೊದಲಾದ ಘೋಷವಾಕ್ಯಗಳನ್ನೇನೋ ಕಲಿಸುತ್ತಾರೆ. ಅದರಿಂದ ಎಷ್ಟರಮಟ್ಟಿಗೆ ಸಮಸ್ಯೆ ಕಡಿಮೆಯಾಗಿದೆಯೋ ಗೊತ್ತಿಲ್ಲ. ಆದರೆ ಘೋಷಣೆಗಳ ಮೊರೆಹೋಗದೆ ತಮ್ಮ ದಿನನಿತ್ಯದಲ್ಲೇ ಈ ತತ್ವಗಳನ್ನು ಅಳವಡಿಸಿಕೊಂಡಿರುವ ಶಾಲೆಯೊಂದಿದೆ. ಅದರ ಬಗ್ಗೆ ತಿಳಿದುಕೊಂಡರೆ ನೀವು ಸೋಜಿಗ ಪಡುತ್ತೀರಿ.

ಇದನ್ನೂ ಓದಿ: Viral Video: ದಯಾಮರಣದಿಂದ ರಕ್ಷಿಸಲ್ಪಟ್ಟ ಈ ನಾಯಿ ಕಳೆದ 10 ವರ್ಷಗಳಲ್ಲಿ 150 ಬೆಕ್ಕುಗಳಿಗೆ ಸಾಕುತಂದೆಯಾದ ಕಥೆ 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಪರಿಮಿತಾ ಶರ್ಮಾ ಮತ್ತು ಮಾಝಿನ್ ಮುಖ್ತಾರ್ ಎನ್ನುವವರು ಶುರು ಮಾಡಿದ ಆಸ್ಸಾಂನ ಈ ಶಾಲೆಯಲ್ಲಿ ಬಡಮಕ್ಕಳು ಫೀಸ್ ಕೊಡುವಂತಿಲ್ಲ. ಬದಲಿಗೆ ವಾರಕ್ಕೆ 25 ಪ್ಲ್ಯಾಸ್ಟಿಕ್ ಬಾಟಲ್ ಆಯ್ದು ತಂದು ಕೊಡಬೇಕು. ಇತ್ತ ಪ್ಲ್ಯಾಸ್ಟಿಕ್ ಕಸ ವಿಲೇವಾರಿಯೂ ಆಯಿತು, ಅತ್ತ ಹಿಂದುಳಿದವರಿಗೆ ಶಾಲೆಯ ಕಲಿಕೆಯೂ ಸಿಕ್ಕಿತು. ಅಷ್ಟೇ ಅಲ್ಲ. ಹೀಗೆ ಸಂಗ್ರಹವಾದ ಪ್ಲ್ಯಾಸ್ಟಿಕನ್ನು ಇಟ್ಟಿಗೆ, ರಸ್ತೆ, ಹಾಗೂ ಶೌಚಾಲಯಗಳ ನಿರ್ಮಾಣದಲ್ಲಿ ಬಳಸಲಾಗುತ್ತದೆ. ಈ ಶಾಲೆಯ ಮಕ್ಕಳಿಗೆ ವಾಡಿಕೆಯ ವಿಷಯಗಳನ್ನಷ್ಟೇ ಅಲ್ಲದೇ ಬಡಿಗತನ, ಪ್ಲ್ಯಾಸ್ಟಿಕ್ ರೀಸೈಕ್ಲಿಂಗ್, ತೋಟಗಾರಿಕೆ ಮೊದಲಾದವನ್ನು ಕಲಿಸಿ ಕೊಡುತ್ತಾರೆ. ಇನ್ನೂ ಇದೆ: ಈ ಶಾಲೆಯ ಹಿರಿಯ ಮಕ್ಕಳೇ ಕಿರಿಯರಿಗೆ ಅಧ್ಯಾಪಕರು; ಅವರಿಗೆ ವಿಶಿಷ್ಟ ಸಂಭಾವನೆಯೂ ಉಂಟು. ಬಾಟಲಿ ಕೆಲವು ಭಾಗ್ಯ ಹಲವು! ಇದಲ್ಲವೇ ನಿಜವಾದ ಮರುಬಳಕೆ?

ಇಲ್ಲಿದೆ ಅಸ್ಸಾಂನ ಈ ಶಾಲೆ

ಒಂದೇ ಏಟಿಗೆ ಪರಿಸರ ಮಾಲಿನ್ಯ ಹಾಗೂ ಹಿಂದುಳಿದವರ ಶಿಕ್ಷಣ ಎರಡೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿರುವ ಈ ಇಬ್ಬರ ಪ್ರಯತ್ನವನ್ನು ನೆಟ್ಟಿಗರು ಹೊಗಳುತ್ತಿದ್ದಾರೆ. ಪಕ್ಕದ ನಾಗಾಲ್ಯಾಂಡ್‌ನ  ಸಚಿವ ತೆಮ್ಜೆನ್ ಇಮ್ನಾ​ ಅಲಾಂಗ್, ‘ಇದು ನಿಮ್ಮನ್ನು ಅಚ್ಚರಿಗೆ ತಳ್ಳದಿದ್ದರೆ ಮತ್ತೇನು ತಳ್ಳೀತು?’ ಎಂಬ ಒಕ್ಕಣೆಯೊಂದಿಗೆ ಇದರ ವಿಡಿಯೋ ಟ್ವೀಟ್ ಮಾಡಿದ್ದು ಅದು ವೈರಲ್ ಆಗಿದೆ. ‘ಈಶಾನ್ಯ ಭಾಗದ ಅತ್ಯಂತ ಸುಂದರ ವಿಡಿಯೋ ಇದು’ ‘ಭಾರತದ ಅದ್ಭುತ! ನಂಬಲಸದಳ’ ಎಂದೆಲ್ಲಾ ಜನ ಹರ್ಷೋದ್ಗಾರ ಮಾಡಿದ್ದಾರೆ.

ಇದನ್ನೂ ಓದಿ : Viral Video: ಕಾಮಾಟಿಪುರ; ನನ್ನ ಅಮ್ಮನನ್ನು ಮೊದಲ ಸಲ ನೋಡಿದಾಗ ನನಗೆ 8 ವರ್ಷ

ಇಬ್ಬರು ವ್ಯಕ್ತಿಗಳ ಸಾಹಸದಿಂದ ಇಷ್ಟೆಲ್ಲ ಕೆಲಸ ಆಗುತ್ತಿದ್ದಾಗ, ಸಂಘ ಸಂಸ್ಥೆಗಳು, ಸರಕಾರ ಕೈಜೋಡಿಸಿದರೆ ಏನೆಲ್ಲಾ ಆಗಬಹುದು? ನಾವೆಲ್ಲ ಮನಸ್ಸು ಮಾಡಬೇಕಷ್ಟೇ. ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 10:12 am, Sat, 14 October 23