Viral Video : . ಮೋಜಿಗೆ ಇಂಥ ಅಮ್ಯೂಸ್‌ಮೆಂಟ್ ಪಾರ್ಕ್ಗಳು ಉತ್ತಮವೇನೋ ನಿಜ. ಆದರೆ ಇಲ್ಲಿರುವ ಕೆಲ ಆಟಗಳು ಭಯಹುಟ್ಟಿಸುವಂತಿರುತ್ತವೆ ಎಂಬುದಕ್ಕೆ ಸಾಕ್ಷಿ ಇಲ್ಲಿರುವ ಈ ವಿಡಿಯೋ. ಅಮೆರಿಕದ ಈ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ದೈತ್ಯಾಕಾರದ ಸ್ಲೈಡ್, ಅದರ ಮೇಲೆ ಸ್ಲೈಡಿಂಗ್ ಮಾಡುವ ಈ ಮನುಷ್ಯರನ್ನು ನೋಡಿದರೆ ಎಂಥವರಿಗೂ ಒಂದು ಕ್ಷಣ ಎದೆಬಡಿತ ನಿಂತುಬಿಡುತ್ತದೆ. ಮಿಚಿಗನ್‌ನ ಬೆಲ್ಲೆ ಐಸ್ಲೇ ಪಾರ್ಕ್‌ನಲ್ಲಿ ಬೃಹದ್ಗಾತ್ರದ ಈ ಬಂಪಿ ಸ್ಲೈಡ್ ಇರುವುದು. ಅಲ್ಲಿ ನಡೆದ ಈ ಆತಂಕಕಾರೀ ಚಟುವಟಿಕೆಯ ದೃಶ್ಯವನ್ನು @artcombatpod ಎಂಬ ಟ್ವಿಟರ್ ಖಾತೆದಾರರು ಹಂಚಿಕೊಂಡಿದ್ದಾರೆ.
The giant slide at Belle Isle Park in Michigan was open for only 4 hours before workers shut it down to make adjustments.
ಇದನ್ನೂ ಓದಿI wonder why they decided to do such a thing ? pic.twitter.com/q7jpFdLdAO
— Art (@artcombatpod) August 19, 2022
ಸ್ಲೈಡ್‌ನಲ್ಲಿ ಆಡುವವರು ಗಾಳಿಯಲ್ಲಿ ತೂರಿಕೊಂಡು ಬಂದಂತೆ ಕಾಣುತ್ತಾರೆ. ಅವರೆಲ್ಲರೂ ತಮ್ಮೆರಡೂ ಕಾಲುಗಳನ್ನು ಗೋಣಿಚೀಲದಲ್ಲಿ ತೂರಿಸಿ ಕಟ್ಟಿಕೊಂಡಿದ್ದಾರೆ. ಇದನ್ನು ನೋಡುತ್ತಿದ್ದರೆ ಇದೊಂದು ಅಪಾಯಕಾರಿ ಆಟವಾಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಯಾವ ರೀತಿಯಿಂದಲೂ ಸ್ವಯಂರಕ್ಷಣೆಗೆ ಅವಕಾಶವಿಲ್ಲದಂಥ ಆಟವಾಡಿ ಬದುಕಿನಲ್ಲಿ ಇನ್ನೆಂಥ ಮೋಜು ಪಡೆಯುವುದಿದೆಯೇ?
ಅನೇಕ ಟ್ವಿಟರ್ ಖಾತೆದಾರರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ಧಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:01 pm, Sat, 27 August 22