Viral : ಇಲ್ಲಿ ನಾಯಿ, ಬೆಕ್ಕು ತಂದು ಬಿಡುವವರು, ನಿಮ್ಮ ಹೆಂಡತಿಯನ್ನು ಬಿಟ್ಟು ಹೋಗಿ : ಮನೆಯ ಕಾಂಪೌಂಡ್ ಮೇಲೆ ಎಚ್ಚರಿಕೆಯ ಫಲಕ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲವು ವಿಚಾರಗಳನ್ನು ನೋಡಿದಾಗ ನಗಬೇಕೋ ಅಳಬೇಕೋ ಒಂದು ತಿಳಿಯುವುದಿಲ್ಲ. ಸದ್ಯಕ್ಕೆ ವ್ಯಕ್ತಿಯೊಬ್ಬರು ಮನೆಯ ಕಾಂಪೌಂಡ್ ಮೇಲೆ ವಿಶೇಷವಾದ ಬ್ಯಾನರ್ ಹಾಕಿದ್ದಾರೆ. ಈ ಬ್ಯಾನರ್ ಹಾಸ್ಯದ ವಿಷಯವಾಗಿದ್ದು, ನಾಯಿ ಹಾಗೂ ಬೆಕ್ಕು ತಂದು ರಸ್ತೆಯ ಬದಿಯಲ್ಲಿ, ಯಾರದೋ ಮನೆ ಮುಂದೆ ಬಿಡುವವರಿಗೆ ಟಾಂಗ್ ಕೊಟ್ಟದಂತಿದೆ. ಇಲ್ಲಿ ಬೆಕ್ಕು ನಾಯಿಗಳನ್ನು ಬಿಡುವವರು ಈ ಕೆಲಸ ಮೊದ್ಲು ಮಾಡಿ ಎಂದಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ವ್ಯಕ್ತಿಯ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ.

Viral : ಇಲ್ಲಿ ನಾಯಿ, ಬೆಕ್ಕು ತಂದು ಬಿಡುವವರು, ನಿಮ್ಮ ಹೆಂಡತಿಯನ್ನು ಬಿಟ್ಟು ಹೋಗಿ : ಮನೆಯ ಕಾಂಪೌಂಡ್ ಮೇಲೆ ಎಚ್ಚರಿಕೆಯ ಫಲಕ
ವೈರಲ್ ಪೋಸ್ಟ್
Image Credit source: Twitter

Updated on: Jul 08, 2025 | 1:37 PM

ಎಲ್ಲರ ಮನೆಯಲ್ಲಿ ನಾಯಿ, ಬೆಕ್ಕು ಇದ್ದೆ ಇರುತ್ತದೆ. ಆದರೆ, ಕೆಲವೊಮ್ಮೆ ಈ ಬೆಕ್ಕು ಹಾಗೂ ನಾಯಿ (dog and cat) ಮರಿಗಳಿಟ್ಟಾಗ ಇಷ್ಟು ಮರಿಗಳನ್ನು ಏನು ಮಾಡೋದು ಅನ್ನೋ ಪ್ರಶ್ನೆ ಕಾಡುತ್ತದೆ. ಕೆಲವರು ತಮ್ಮ ಆತ್ಮೀಯರ ಬಳಿ ಹೇಳಿ ನಾಯಿ ಅಥವಾ ಬೆಕ್ಕಿನ ಮರಿಗಳನ್ನು ಬೇರೆಯವರಿಗೆ ಕೊಡುವ ಮೂಲಕ ಕೈ ತೊಳೆದುಕೊಳ್ಳುತ್ತಾರೆ. ಇಲ್ಲದಿದ್ದರೆ ಕತ್ತಲಾಗುತ್ತಿದ್ದಂತೆ ಇನ್ನು ಕಣ್ಣುಬಿಡದ ಮರಿಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಯಾರದೋ ಮನೆಯ ಕಾಂಪೌಂಡ್ ಮುಂಭಾಗದಲ್ಲಿಯೋ, ರಸ್ತೆಯಲ್ಲಿ ಬಿಟ್ಟು ಬರುತ್ತಾರೆ. ಆದರೆ ಇದೀಗ ಅಂತಹ ಮಹಾನುಭಾವರಿಗಾಗಿ ವ್ಯಕ್ತಿಯೊಬ್ಬರು ತಮ್ಮ ಮನೆಯ ಕಾಂಪೌಂಡ್ ಮೇಲೆ ವಿಶೇಷವಾದ ಬ್ಯಾನರ್ ಹಾಕಿದ್ದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಮೊದಲ ಸಾಲುಗಳು ಸಹಜವಾಗಿದ್ದರೂ ಎರಡನೇ ಸಾಲನ್ನು ಓದಿದರೆ ನಗು ಬರುತ್ತದೆ. ನಾಯಿ ಬೆಕ್ಕು ಬಿಡುವವರು ನಿಮ್ಮ ಹೆಂಡತಿಯನ್ನು ಬಿಟ್ಟು ಹೋಗಿ ಎಂದಿದ್ದು, ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗುತ್ತಿದ್ದಂತೆ ಬಳಕೆದಾರರನ್ನು ನಗೆಗಡಲಿನಲ್ಲಿ ತೇಲಿಸಿದೆ.

@karahovich ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಪೋಸ್ಟ್‌ನಲ್ಲಿ ಮನೆಯ ಕಾಂಪೌಂಡ್ ಮೇಲೆ ವಿಶೇಷವಾದ ಎಚ್ಚರಿಕೆ ಫಲಕ ಇರುವುದನ್ನು ಕಾಣಬಹುದು. ಈ ಬ್ಯಾನರ್‌ನಲ್ಲಿ ಇಲ್ಲಿ ನಾಯಿ, ಬೆಕ್ಕು ತಂದು ಬಿಡುವವರು, ನಿಮ್ಮ ಹೆಂಡತಿಯನ್ನು ಬಿಟ್ಟು ಹೋಗಿ ಎಂದು ಬರೆಯಲಾಗಿದೆ.

ಇದನ್ನೂ ಓದಿ
ಮಾಲೀಕ ಹಾಡು ಹಾಡುತ್ತಿದ್ದಂತೆ ಆನೆಗಳು ಕೊಟ್ಟ ರಿಯಾಕ್ಷನ್ ಹೇಗಿತ್ತು ನೋಡಿ
ಪತಿಯ ಕೆಟ್ಟ ಅಭ್ಯಾಸಗಳನ್ನು ವಿಚ್ಛೇದನ ಪತ್ರದಲ್ಲಿ ಉಲ್ಲೇಖಿಸಿದ ಪತ್ನಿ
ಭಾರತದಲ್ಲಿ ಇಷ್ಟೊಂದು ಕಸನಾ? ಎಂದಿಗೂ ನೋಡಿಲ್ಲ ಎಂದ ಫ್ರೆಂಚ್ ಮಹಿಳೆ
ದಯವಿಟ್ಟು ಯುರೋಪ್‌ಗೆ ಯಾರು ಬರ್ಬೇಡಿ : ಭಾರತೀಯ ಪ್ರವಾಸಿಗ ಹೀಗೆಂದಿದ್ದೇಕೆ?

ಇದನ್ನೂ ಓದಿ :Video : ಮಗನ ಕನಸಿಗೆ ತಂದೆ ಸಾಥ್ : ಖ್ಯಾತ ರೆಸ್ಲರ್ ಅಂಡರ್‌ಟೇಕರ್‌ ಅವರಂತೆ ಮನೆಯೊಳಗೆ ಎಂಟ್ರಿ ಕೊಟ್ಟ ಪುಟ್ಟ ಬಾಲಕ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರು, ಪಾಪ ಈ ಮನೆಯ ವ್ಯಕ್ತಿಯ ಎಷ್ಟು ರೋಸಿ ಹೋಗಿದ್ದಾನೆ ಎನ್ನುವುದನ್ನು ಈ ಬ್ಯಾನರ್‌ನಲ್ಲಿ ಬರೆದ ಸಾಲುಗಳೇ ತೋರಿಸುತ್ತದೆ. ಆದರೆ ಈತನ ಐಡಿಯಾ ಮಾತ್ರ ಚೆನ್ನಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಮದ್ವೆ ಆಗದವರು ಏನ್ ಮಾಡ್ಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು, ಹೆಂಡ್ತಿ ಕಾಟ ತಡೆಯಲಾರದವನು ಇವನ ಮನೆ ಮುಂದೆ ನಾಯಿ ಅಥವಾ ಬೆಕ್ಕಿನ ಜೊತೆಗೆ ಹೆಂಡ್ತಿಯನ್ನು ಬಿಟ್ಟು ಹೋಗಿ, ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಖಂಡಿತ ಸಿಗುತ್ತದೆ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ