Viral Photo: ಒಂದೇ ನೋಟದಲ್ಲಿ ಮೂರು ಬಗೆಯ ಚಿತ್ರವನ್ನು ಕಂಡು ಭ್ರಮಗೊಳಗಾದ ನೆಟ್ಟಿಗರು

ಆಪ್ಟಿಕಲ್ ಇಲ್ಯೂಷನ್ ಫೋಟೋದಲ್ಲಿ ನೀವು ಕಾಣುವ ಮೊದಲ ವಿಷಯ ಯಾವುದು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಕಪ್ಪು ಮತ್ತು ಬಿಳಿಯ ಚಿತ್ರವು ನೋಡುಗರನ್ನು ಗೊಂದಲಕ್ಕೀಡು ಮಾಡಿದೆ.

Viral Photo: ಒಂದೇ ನೋಟದಲ್ಲಿ ಮೂರು ಬಗೆಯ ಚಿತ್ರವನ್ನು ಕಂಡು ಭ್ರಮಗೊಳಗಾದ ನೆಟ್ಟಿಗರು
ವೈರಲ್​ ಆದ ಪೊಟೋ
Updated By: Pavitra Bhat Jigalemane

Updated on: Mar 19, 2022 | 5:27 PM

ಸಾಮಾಜಿಕ ಜಾಲತಾಣದಲ್ಲಿ ಆಗಾಗ ಆಪ್ಟಿಕಲ್​ ಇಲ್ಯೂಶನ್​ ಫೋಟೋ, ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಈ ಹಿಂದೆ ಸಾಕಷ್ಟು ಫೋಟೋಗಳು ವೈರಲ್​ ಆಗಿವೆ. ಇದೀಗ ಆಪ್ಟಿಕಲ್ ಇಲ್ಯೂಷನ್ ಫೋಟೋದಲ್ಲಿ ನೀವು ಕಾಣುವ ಮೊದಲ ವಿಷಯ ಯಾವುದು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಕಪ್ಪು ಮತ್ತು ಬಿಳಿಯ ಚಿತ್ರವು ನೋಡುಗರನ್ನು ಗೊಂದಲಕ್ಕೀಡು ಮಾಡಿದೆ. ಒಂದೇ ನೋಟದಲ್ಲಿ ಮೂರು ಚಿತ್ರಗಳನ್ನು ಕಾಣುವ ಫೋಟೋ ಸದ್ಯ ಸಖತ್​ ವೈರಲ್​ ಆಗಿದೆ. ಮೂಳೆಯ ಮುಖವಾಡ ಮತ್ತು ಇನ್ನೊಂದು ಬದಿಯಲ್ಲಿ ಹುಡುಗಿಯನ್ನು ಕಾಣುವ ಈ ಚಿತ್ರ ನೆಟ್ಟಿಗರ ಕಣ್ಣುಗಳಿಗೆ ಪರೀಕ್ಷೆ ನೀಡುವಂತಿದೆ.

ಚಿತ್ರವನ್ನು ಚೆನ್ನಾಗಿ ನೋಡಿ ಮತ್ತು ಅದರಲ್ಲಿ ನೀವು ನೋಡುವ ಮೊದಲ ವಿಷಯವನ್ನು ಗಮನಿಸಿ. ನೀವು ಮೊದಲು ನೋಡುವ ಯಾವುದೇ ವಿಷಯವು ನಿಮ್ಮ ವ್ಯಕ್ತಿತ್ವ ಮತ್ತು ಉತ್ತಮ ಗುಣಗಳ ಬಗ್ಗೆ ಬಹಳಷ್ಟು ತಿಳಿಸುತ್ತದೆ. ನೀವು ಮೊದಲಿಗೆ ನೋಡಿರುವ ಮೂರು ವಿಷಯಗಳಿವೆ.

ನೀವು ಚಿತ್ರದಲ್ಲಿ ನೋಡಿದ ಮೊದಲ ವಿಷಯವೆಂದರೆ ಚಿಕ್ಕ ಹುಡುಗಿ ಕಾಡಿನತ್ತ ನೋಡುವಂತಿದೆ. ಇನ್ನೊಂದು ಕಡೆಯಿಂದ ನೀವು ತಲೆಬುರುಡೆಯನ್ನು ಕಾಣಬಹುದು. ಮತ್ತೊಮ್ಮೆ ನೋಡಿದರೆ ಸುಂದರವಾದ ರಾತ್ರಿಯ ದೃಶ್ಯಗಳನ್ನು ಕಾಣಬಹುದಾಗಿದೆ. ಸದಯ ನೆಟ್ಟಿಗರು ತಾವು ಕಂಡ ದೃಶ್ಯಗಳ ಬಗ್ಗೆ ಕಾಮೆಂಟ್​ ಮಾಡಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಬರೋಬ್ಬರಿ 10 ಅಡಿ ಉದ್ದದ ಮೀನನ್ನು ಸೆರೆಹಿಡಿದ ಕೆನಡಾದ ಮೀನುಗಾರ