Viral Video: ಬರೋಬ್ಬರಿ 10 ಅಡಿ ಉದ್ದದ ಮೀನನ್ನು ಸೆರೆಹಿಡಿದ ಕೆನಡಾದ ಮೀನುಗಾರ

ಕೆನಡಾದ ಮೀನುಗಾರ ಯವೆಸ್ ಬಿಸ್ಸನ್ ಅವರು ಇತ್ತೀಚೆಗೆ ಬ್ರಿಟಿಷ್ ಕೊಲಂಬಿಯಾದಲ್ಲಿ ಈ ಬೃಹತ್​ ಮೀನನ್ನು ಹಿಡಿದಿದ್ದಾರೆ ಇದನ್ನು 'ಜೀವಂತ ಡೈನೋಸಾರ್' ಎಂದು ಕರೆದಿದ್ದಾರೆ.

Viral Video: ಬರೋಬ್ಬರಿ 10 ಅಡಿ ಉದ್ದದ ಮೀನನ್ನು ಸೆರೆಹಿಡಿದ ಕೆನಡಾದ ಮೀನುಗಾರ
ಮೀನು
Follow us
TV9 Web
| Updated By: Pavitra Bhat Jigalemane

Updated on:Mar 19, 2022 | 4:56 PM

ಸಾಮಾಜಿಕ ಜಾಲತಾಣದಲ್ಲಿ ಬೃಹತ್​ ಮೀನಿನ (Fish) ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕೆನಡಾದ ಮೀನುಗಾರರೊಬ್ಬರು ಡೈನೋಸಾರ್​ ಎನ್ನುವ ಮೀನನ್ನು ಹಿಡಿದಿದ್ದಾರೆ. ಕೆನಡಾದ ಮೀನುಗಾರ ಯವೆಸ್ ಬಿಸ್ಸನ್ ಅವರು ಇತ್ತೀಚೆಗೆ ಬ್ರಿಟಿಷ್ ಕೊಲಂಬಿಯಾದಲ್ಲಿ ಈ ಬೃಹತ್​ ಮೀನನ್ನು ಹಿಡಿದಿದ್ದಾರೆ ಇದನ್ನು ‘ಜೀವಂತ ಡೈನೋಸಾರ್’ (Living Dinosaur) ಎಂದು ಕರೆದಿದ್ದಾರೆ. 10.5 ಅಡಿಗಳಷ್ಟು ಮೀನು ಇದೆ ಎಂದು ಅವರು ಹೇಳಿದ್ದಾರೆ. ಸ್ಟರ್ಜನ್ (sturgeon)ಎನ್ನುವ ಹೆಸರಿನ ಮೀನು ಇದಾಗಿದೆ.

ಈ ಮೀನನ್ನು ಸೆರೆಹಿಡಿದು ಮತ್ತೆ ನೀರಿಗೆ ಬಿಟ್ಟ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಸ್ಸನ್​ ಅವರು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. 10 ಅಡಿ ಉದ್ದದ ಮೀನನ್ನು ನೋಡಿ ನೆಟ್ಟಿಗರು ಹೌಹಾರಿದ್ದಾರೆ. ತನ್ನನ್ನು ತಾನು ‘ಸ್ಟರ್ಜನ್ ಗೈಡ್’ ಎಂದು ಬಣ್ಣಿಸಿಕೊಳ್ಳುವ ಬಿಸ್ಸನ್,ಇದು ನಾನು ನೋಡಿದ ಅತಿ ದೊಡ್ಡ ಮೀನು ಎಂದು ಹೇಳಿದ್ದಾರೆ. ವಿಡಿಯೋದಲ್ಲಿ ಬಿಸ್ಸನ್​ ಅವರು ಮೀನಿನ ಬಗ್ಗೆ ಮೀನು 10.5 ಅಡಿ ಉದ್ದವಿದೆ. ಬಹುಷಃ 500 ರಿಂದ 600 ಪೌಂಡ್​ ತೂಕವಿರಬಹುದು ಎಂದು ಹೇಳಿದ್ದಾರೆ.

ಬಿಸ್ಸನ್ ಕೆನಡಾದ ಫ್ರೇಸರ್ ನದಿಯಲ್ಲಿ ವಾಸಿಸುವ ಸ್ಟರ್ಜನ್ ಮೀನುಗಳ ಬಗ್ಗೆ ಅಧ್ಯಯನ ನಡೆಸಿ ಪರಿಣಿತರಾಗಿದ್ದಾರೆ. ಅವರು ಸೆರೆ ಹಿಡಿದ ಮೀನು ಒಂದು ಶತಮಾನಕ್ಕೂ ಹಿಂದಿನದ್ದಾಗಿರಬಹುದು ಎಂದು ಊಹಿಸಿದ್ದಾರೆ. ಟ್ರಯಾಸಿಕ್ ಅವಧಿಯಲ್ಲಿ (245-208 ಮಿಲಿಯನ್ ವರ್ಷಗಳ ಹಿಂದೆ) ಕಾಣಿಸಿಕೊಂಡ 29 ಜಾತಿಗಳಲ್ಲಿ ಸ್ಟರ್ಜನ್ ಮೀನು ಸಾಮಾನ್ಯ ಹೆಸರಾಗಿದೆ ಮತ್ತು ವಿಕಾಸದಲ್ಲಿ ಅನೇಕ ಗಮನಾರ್ಹ ಬದಲಾವಣೆಗಳಿಗೆ ಒಳಗಾಗಿಲ್ಲ. ಹೀಗಾಗಿ ಇನ್ನೂ ಇದು ಅತೀ ಅಪರೂಪದ ಮೀನು ಎಂದೇ ಹೇಳಲಾಗಿದೆ.

ಇದನ್ನೂ ಓದಿ:

Video: ಈ ವ್ಯಾಪಾರಿಯ ಬಳಿ ಬಾಂಬೆ ಮಿಠಾಯಿ ಖರೀದಿ ಮಾಡೋದಿದ್ರೆ ಹಣ ಬೇಡ, ಬದಲಿಗೆ ಇದೊಂದು ವಸ್ತು ಕೊಡಿ ಸಾಕು !

Published On - 4:55 pm, Sat, 19 March 22