Viral Video: ಮೊಬೈಲ್​ನಲ್ಲಿ ವಿಡಿಯೊ ನೋಡ್ತಾ ಕುಳಿತಿದ್ದ ಮೂರು ಕೋತಿಗಳ ರಿಯಾಕ್ಷನ್ ವೈರಲ್; ವಿಡಿಯೊ ಮಜವಾಗಿದೆ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ತಮಾಷೆಯ ವಿಡಿಯೊಗಳು ಸಾಕಷ್ಟು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ವಿಡಿಯೊಗಳನ್ನು ಪದೇ ಪದೇ ನೋಡಬೇಕು ಅನ್ನುವಷ್ಟರ ಮಟ್ಟಿಗೆ ಇಷ್ಟವಾಗುತ್ತವೆ. ಈ ವಿಡಿಯೊ ಕೂಡಾ ಅಂಥದ್ದೇ!

Viral Video: ಮೊಬೈಲ್​ನಲ್ಲಿ ವಿಡಿಯೊ ನೋಡ್ತಾ ಕುಳಿತಿದ್ದ ಮೂರು ಕೋತಿಗಳ ರಿಯಾಕ್ಷನ್ ವೈರಲ್; ವಿಡಿಯೊ ಮಜವಾಗಿದೆ ನೋಡಿ
ಮೊಬೈಲ್ ನೋಡ್ತಾ ಇದ್ದ ಮೂರು ಕೋತಿಗಳ ರಿಯಾಕ್ಷನ್ ವೈರಲ್
Edited By:

Updated on: Nov 22, 2021 | 9:52 AM

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ತಮಾಷೆಯ ವಿಡಿಯೊಗಳು ಸಾಕಷ್ಟು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ತುಂಬಾ ಇಷ್ಟವಾಗುತ್ತವೆ. ತುಂಬಾ ನಗು ತರಿಸುವ ವಿಡಿಯೊಗಳು (Funny Video) ಹೆಚ್ಚು ಮನ ಗೆಲ್ಲುತ್ತವೆ. ಇದೀಗ ವೈರಲ್ (Viral video) ಆದ ವಿಡಿಯೊ ನೋಡಿದ ನೆಟ್ಟಿಗರು ವಿಡಿಯೊ ಮಜವಾಗಿದೆ ಎಂದಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ಮೂರು ಕೋತಿಗಳು (Monkey) ಮೊಬೈಲ್ (Smart Phone) ನೋಡುತ್ತಿವೆ. ವಿಡಿಯೊ ನೋಡುತ್ತಿದ್ದ ಕೋತಿಗಳ ರಿಯಾಕ್ಷನ್ ಹೇಗಿತ್ತು ಅನ್ನೋದನ್ನಾ ವಿಡಿಯೊದಲ್ಲೇ ನೋಡಿ.

ಸೋಷಿಯಲ್ ಮೀಡಿಯಾದಲ್ಲಿ ತಮಾಷೆಯ ವಿಡಿಯೊಗಳು ಸಾಕಷ್ಟು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ವಿಡಿಯೊಗಳನ್ನು ಪದೇ ಪದೇ ನೋಡಬೇಕು ಅನ್ನುವಷ್ಟರ ಮಟ್ಟಿಗೆ ಇಷ್ಟವಾಗುತ್ತವೆ. ಈ ವಿಡಿಯೊ ಕೂಡಾ ಅಂಥದ್ದೇ! ವಿಡಿಯೊ ನೋಡಿದ ನೆಟ್ಟಿಗರು ತಮಾಷೆ ಮಾಡಿದ್ದಾರೆ. ಮೂರು ಕೋತಿಗಳು ಸ್ಮಾರ್ಟ್ ಫೋನ್ ಹಿಡಿದು ವಿಡಿಯೊ ನೋಡುತ್ತಾ ಮಜ ಮಾಡುತ್ತಿವೆ. 15 ಸೆಕೆಂಡುಗಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಈ ವಿಡಿಯೊ ನೆಟ್ಟಿಗರಿಗೆ ಸಾಕಷ್ಟು ಇಷ್ಟವಾಗಿದೆ. ಈ ವಿಡಿಯೊ ನಿಮ್ಮ ಮುಖದಲ್ಲಿಯೂ ನಗು ತರಿಸುವುದು ಗ್ರಾರೆಂಟಿ!

ವಿಡಿಯೊವನ್ನು ಯೂಟ್ಯೂಬ್​ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊ ಸುಮಾರು 1 ಲಕ್ಷಕ್ಕೂ ಹೆಚ್ಚಿನ ಲೈಕ್ಸ್​ಗಳನ್ನು ಗಳಿಸಿಕೊಂಡಿದೆ. ಮನುಷ್ಯರಂತೆಯೇ ವರ್ತಿಸುವ ಕೋತಿಗಳು ತುಂಬಾ ಚುರುಕಾಗಿರುತ್ತಾರೆ. ಬುದ್ಧಿವಂತರು ಎಂದು ಓರ್ವರು ಹೇಳಿದ್ದಾರೆ. ಕೋತಿಗಳು ತುಂಟಾಟ ಮಾಡುವುದು ನಿಜಕ್ಕೂ ತುಂಬಾ ತಮಾಷೆಯಾಗಿರುತ್ತದೆ ಎಂದು ಮತ್ತೋರ್ವರು ಹೇಳಿದ್ದಾರೆ. ವಿಡಿಯೊ ಸುಮಾರು 5 ಮಿಲಿಯನ್​ಗೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಮಂಗಗಳು ಸ್ಮಾರ್ಟ್ ಫೋನ್ ಹಿಡಿದ ರೀತಿ ತುಂಬಾ ಅದ್ಭುತವಾಗಿದೆ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ಅಮಾಯಕನಂತೆ ವರ್ತಿಸುತ್ತಾ ಸೈಕಲ್ ಕದ್ದು ಪರಾರಿಯಾಗಲು ಹೊರಟ ಕಳ್ಳ; ಮುಂದೇನಾಯ್ತು? ವಿಡಿಯೊ ನೋಡಿ

Viral Video: ಆನೆ ಮರಿಯ ಬಾಬ್ ಕಟ್ ಕೂದಲನ್ನು ಬಾಚಿದ ಮಾವುತನ ವಿಡಿಯೋ ವೈರಲ್