ಯುವತಿಯೊಬ್ಬಳು ಸಾಕು ನಾಯಿಗೆ (Pet Dog) ಬಣ್ಣ ಬಳಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ನಾಯಿಯ ಮೈಮೇಲಿನ ಕೂದಲಿಗೆ ಕೆಂಪು ಬಣ್ಣವನ್ನು ಹಚ್ಚಿದ ಯುವತಿ ಟಿಕ್ ಟಾಕ್ (TikTok) ವಿಡಿಯೋ ಮಾಡಿ ಹಂಚಿಕೊಂಡಿದ್ದಳು. ನಾಯಿಗೆ ದಂಡೇಲಿಯನ್ ಎಂದು ಹೆಸರಿಟ್ಟಿದ್ದ ಆಕೆ ನಾಯಿಯ ಮೈಗೆ ಬಣ್ಣ ಬಳಿದಿದ್ದಾಳೆ. ಇದರ ವಿಡಿಯೋ ಇನ್ಸ್ಟಾಗ್ರಾಮ್ (Instagram)ನಲ್ಲೂ ವೈರಲ್ ಆಗಿದ್ದು, ಪ್ರಾಣಿಗಳಿಗೆ ಬಣ್ಣ ಬಳಿದು ಹಿಂಸೆ ನೀಡುವುದು ಅಪರಾಧ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ವಿಡಿಯೋದಲ್ಲಿ ಆಕೆ ನಾಯಿಗೆ ಬಣ್ಣ ಬಳಿದ ಕಾರಣವನ್ನೂ ಹಂಚಿಕೊಂಡಿದ್ದಾಳೆ ಆದರೆ ಅದಕ್ಕೆ ಸಹಮತ ವ್ಯಕ್ತಪಡಿಸದ ಬಳಕೆದಾರರು ಯುವತಿಯ ಹುಚ್ಚಾಟ ಎಂದು ಸಿಟ್ಟಿಗೆದ್ದಿದ್ದಾರೆ. ಈ ಘಟನೆ ಯುಎಸ್ನಲ್ಲಿ ನಡೆದಿದೆ.
ವಿಡಿಯೋದಲ್ಲಿ ನಾಯಿ ಕೆಂಪು ಬಣ್ಣದಿಂದ ಕಂಗೊಳಿಸುತ್ತಿರುವುದನ್ನು ಕಾಣಬಹುದು. ನಾಯಿಗೆ ಬಣ್ಣ ಬಳಿದಿದ್ದಕ್ಕೆ ಕಾರಣ ತಿಳಿಸಿದ ಯುವತಿ, ನಾಯಿ ಕೆಂಪು ಬಣ್ಣದಲ್ಲಿದ್ದರೆ ಯಾರೂ ಕದ್ದೊಯ್ಯುವುದಿಲ್ಲ. ಒಂದು ವೇಳೆ ಯಾರಾದರೂ ಕರೆದೊಯ್ದರೂ ಸುಲಭವಾಗಿ ಕಂಡುಹಡಿಯಬಹುದು. ಯಾಕೆಂದರೆ ಕೆಂಪು ಬಣ್ಣ ಎಲ್ಲಿದ್ದರೂ ಕಾಣ್ಣಿಗೆ ಕಾಣಿಸುತ್ತದೆ. ಅದು ಅಲ್ಲದೆ ಕೆಂಪು ಬಣ್ಣದಿಂದ ಕೂಡಿದ್ದಾಗ ಅಪಘಾತಗಳೂ ಸಂಭವಿಸುವುದಿಲ್ಲ ಎಂದಿದ್ದಾಳೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ. ಪ್ರಾಣಿಪ್ರಿಯರು ಕಿಡಿಕಾರಿದ್ದಾರೆ. ಪ್ರಾಣಿಗಳಿಗೆ ಬಣ್ಣ ಹಚ್ಚುವುದರಿಂದ ಅವು ಹಿಂಸೆಗೆ ಒಳಗಾಗುತ್ತವೆ ಎಂದು ಎಂದಿದ್ದು, ನಿಮ್ಮ ಖುಷಿಗೆ ನಾಯಿಗೆ ಬಣ್ಣ ಬಳಿದು ಕಾರಣಗಳನ್ನು ಹೇಳಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
Viral Video: 300 ಹಾವುಗಳನ್ನು ಗೋಣಿಚೀಲದಲ್ಲಿ ತುಂಬಿ ಕಾಡಲ್ಲಿ ಸುರಿದ ವ್ಯಕ್ತಿ; ಈ ವಿಡಿಯೋ ನೋಡಿ ಶಾಕ್ ಆಗಬೇಡಿ!