Video: ಭಾರತೀಯರೇ, ನೀವು ಎಲ್ಲವನ್ನೂ ವಿಶೇಷವಾಗಿಸಿದ್ದೀರಿ; ಕಣ್ಣೀರಿಡುತ್ತಾ ಭಾರತದಿಂದ ಹೊರಟ ವಿದೇಶಿ ಮಹಿಳೆ

ಭಾರತಕ್ಕೆ ಬರುವ ವಿದೇಶಿಗರು ಇಲ್ಲಿಂದ ಹೊರಡುವಾಗ ಭಾವುಕರಾಗುವುದು ಸಹಜ. ಇದೀಗ ವಿದೇಶಿ ಮಹಿಳೆ ತನ್ನ ಹುಟ್ಟೂರಿಗೆ ತೆರಳುವಾಗ ಭಾವನಾತ್ಮಕ ವಿದಾಯ ಹೇಳಿದ್ದಾರೆ. ಭಾರತದಲ್ಲಿ ಕಳೆದ ಕ್ಷಣಗಳು ನನ್ನ ಮನಸ್ಸಿನಲ್ಲಿ ಸದಾ ಇರುತ್ತದೆ ಎಂದಿದ್ದಾರೆ. ವಿದೇಶಿ ಮಹಿಳೆಯ ಭಾವುಕ ಮಾತು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ.

Video: ಭಾರತೀಯರೇ, ನೀವು ಎಲ್ಲವನ್ನೂ ವಿಶೇಷವಾಗಿಸಿದ್ದೀರಿ; ಕಣ್ಣೀರಿಡುತ್ತಾ ಭಾರತದಿಂದ ಹೊರಟ ವಿದೇಶಿ ಮಹಿಳೆ
ವೈರಲ್‌ ವಿಡಿಯೋ
Image Credit source: Instagram

Updated on: Sep 07, 2026 | 4:59 PM

ಭಾರತದ ಅಂದ್ರೆ ವಿದೇಶಿಗರಿಗೆ (foreigner) ಅದೇನೋ ಸೆಳೆತ. ಇಷ್ಟ ಪಟ್ಟು ಭಾರತಕ್ಕೆ ಭೇಟಿ ನೀಡುವ ವಿದೇಶಿಗರು ಇಲ್ಲಿನ ಪ್ರವಾಸಿ ತಾಣಗಳ ಸೌಂದರ್ಯ ಸವಿಯುತ್ತಾರೆ. ಹೀಗೆ ತಿಂಗಳುಗಳ ಕಾಲ ಇಲ್ಲೇ ಉಳಿದು ಆ ಬಳಿಕ ಇಲ್ಲಿಂದ ಹೊರಡುವಾಗ ಭಾವುಕರಾಗುತ್ತಾರೆ. ವಿದೇಶಿ ಮಹಿಳೆಗೂ ಇದೇ ಸಂದರ್ಭ ಎದುರಾಗಿದೆ. ಹೌದು, ಭಾರತದಿಂದ ಹುಟ್ಟೂರಿಗೆ ಹೊರಡು ನಿಂತ ವಿದೇಶಿ ಮಹಿಳೆ ಭಾವುಕರಾಗಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹುಟ್ಟೂರಿಗೆ ಮರಳುವಾಗ ವಿದೇಶಿ ಮಹಿಳೆ ಭಾವುಕ

ಟೇರಿ ಎಮ್ಸಿಸಿಲ್ಯೂರ್ (Teri McClure) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಭಾರತಕ್ಕೆ ಭೇಟಿ ನೀಡಿರುವ ವಿದೇಶಿ ಮಹಿಳೆ, ಭಾರತದಲ್ಲಿ ನನ್ನ ಹೆಚ್ಚಿನ ಸಮಯ ಕಳೆದೆ. ಈ ದೇಶದಲ್ಲಿ ಕಳೆದ ಕ್ಷಣಗಳು ನನ್ನ ಮನಸ್ಸಿನಲ್ಲಿ ಸದಾ ಇರುತ್ತದೆ. ಇಲ್ಲಿ ಕಳೆದ ಪ್ರತಿಯೊಂದು ಕ್ಷಣವು ನನ್ನ ಜೀವನದ ಬೆಸ್ಟ್ ಟೈಮ್ ಆಗಿದೆ. ಭಾರತೀಯರೇ, ನೀವು ಎಲ್ಲವನ್ನೂ ತುಂಬಾ ವಿಶೇಷವಾಗಿಸಿದ್ದೀರಿ ಎಂದು ಹೇಳಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮೊದಲ ಬಾರಿಗೆ ಪಾವ್ ಭಾಜಿ ಸವಿದು ಕ್ಯೂಟ್ ರಿಯಾಕ್ಷನ್ ಕೊಟ್ಟ ಕೆನಡಿಯನ್ ಮಹಿಳೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ಪ್ರಯಾಣ ಖುಷಿಯಿಂದ ಕೂಡಿರಲಿ ಎಂದಿದ್ದಾರೆ. ಇನ್ನೊಬ್ಬರು, ಮತ್ತೆ ಬನ್ನಿ, ನಾವೆಲ್ಲಾ ಇಲ್ಲಿಯೇ ಇದ್ದೇವೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಹ್ಯಾಪಿ ಜರ್ನಿ ಮ್ಯಾಮ್, ನಾವೆಲ್ಲರೂ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us