ಒಂದೇ ರೀತಿಯ ಸೀರೆಯುಟ್ಟ ಮಹಿಳೆಯರ ನಡುವೆ ಅಮ್ಮನನ್ನು ಹುಡುಕಿದ ಮಗು: ವಿಡಿಯೋ ವೈರಲ್​

ಒಂದೇ ರೀತಿಯ ಸೀರೆ ಉಟ್ಟು ಕುಳಿತಿರುವ ನಾಲ್ವರು ಮಹಿಳೆಯರು ಮುಖಕ್ಕೆ ಸೆರಗನ್ನು ಹಿಡಿದುಕೊಂಡು ಕುಳಿತಿರುವಾಗಲೂ ಮಗು ಸರಿಯಾಗಿ ತಾಯಿಯ ಬಳಿಯೇ ಹೋಗುತ್ತದೆ. ಇದರ ವಿಡಿಯೋ ಇನ್ಸ್ಟಾಗ್ರಾನ್​ನಲ್ಲಿ ವೈರಲ್​ ಆಗಿದೆ.

ಒಂದೇ ರೀತಿಯ ಸೀರೆಯುಟ್ಟ ಮಹಿಳೆಯರ ನಡುವೆ ಅಮ್ಮನನ್ನು ಹುಡುಕಿದ ಮಗು: ವಿಡಿಯೋ ವೈರಲ್​
ಅಮ್ಮನನ್ನು ಗುರುತಿಸಿದ ಮಗು
Edited By:

Updated on: Mar 11, 2022 | 12:34 PM

ಪ್ರತೀ ಮಗುವಿಗೆ ಅಮ್ಮನ (Mother) ಅಪ್ಪುಗೆ ಪ್ರೀತಿ ವಿಶೇಷ. ಸಾವಿರ ಜನರ ಮಧ್ಯೆ ಇದ್ದರೂ ಪ್ರತೀ ಮಗು (Toddler) ಅಮ್ಮನನ್ನು ಗುರುತಿಸಬಲ್ಲದು. ಇಲ್ಲೊಂದು ಪುಟ್ಟ ಮಗು ಅಮ್ಮನನ್ನು ಗುರುತಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ, ಒಂದೇ ರೀತಿಯ ಸೀರೆ ಉಟ್ಟು ಕುಳಿತಿರುವ ನಾಲ್ವರು ಮಹಿಳೆಯರು ಮುಖಕ್ಕೆ ಸೆರಗನ್ನು ಹಿಡಿದುಕೊಂಡು ಕುಳಿತಿರುವಾಗಲೂ ಮಗು ಸರಿಯಾಗಿ ತಾಯಿಯ ಬಳಿಯೇ ಹೋಗುತ್ತದೆ. ಇದರ ವಿಡಿಯೋ ಇನ್ಸ್ಟಾಗ್ರಾನ್​ನಲ್ಲಿ ವೈರಲ್​ ಆಗಿದೆ. ಮಾರ್ಚ್6 ರಂದು ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ  18ಮಿಲಿಯನ್​ ವೀಕ್ಷಣೆ ಪಡೆದಿದೆ.

ವಿಡಿಯೋದಲ್ಲಿ ಹಳದಿ ಬಣ್ಣದ ಸೀರೆ ಉಟ್ಟು ನಾಲ್ವರು ಮಹಿಳೆಯರು ರೂಮ್​ನಲ್ಲಿ ಕುಳಿತಿರುತ್ತಾರೆ. ಪುಟ್ಟ ಮಗು ರೂಮ್​ ಒಳಗೆ ಮೊದಲು ಬರುತ್ತಿದ್ದಂತೆ ಎಲ್ಲರೂ ಕೈ ಸನ್ನೆಯ ಮೂಲಕ ಕರೆಯುತ್ತಾರೆ. ಮಗು ಒಬ್ಬರ ಬಳಿ ಹೋಗುತ್ತದೆ ನಂತರ ಗೊಂದಲಕ್ಕೊಳಗಾಗುತ್ತದೆ. ನಂತರ ನೇರವಾಗಿ ಅಮ್ಮನ ಬಳಿಯೇ ಹೋಗುತ್ತದೆ.  ಇದನ್ನು ನೊಡಿ ನೆಟ್ಟಿಗರು  ಅಮ್ಮನ ಪ್ರೀತಿಯೇ ಹಾಗೆ ಎಂದು ಕಾಮೆಂಟ್​  ಮಾಡಿದ್ದಾರೆ. ಸ್ಟೇಟಸ್​ ಫಾನ್​ ಟ್ರೆಂಡಿಂಗ್​ ಎನ್ನುವ ಇನ್ಸ್ಟಾಗ್ರಾಮ್​ ಖಾತೆ ವಿಡಿಯೋವನ್ನು ಹಂಚಿಕೊಂಡಿದೆ.

ವಿಡಿಯೋ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದು, ತಾಯಿ ಮಗುವಿನ ಸಂಬಂಧ ಎಲ್ಲಕ್ಕಿಂತ ಮಿಗಿಲು ಅದನ್ನು ಬೇರೆ ಮಾಡಲು ಸಾಧ್ಯವಿಲ್ಲ. ಅಮ್ಮಂದಿರ ಪ್ರೀತಿಯ ಉಸಿರಿನ ಘಮ ಮಗುವಿಗೆ ತಿಳಿದಿರುತ್ತದೆ ಎಂದು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

Viral Video: ಕಲರ್​ಫುಲ್​ ವೃತ್ತಗಳ ಚಲನೆಯನ್ನು ನೋಡಿ ಗೊಂದಲಕ್ಕೊಳಗಾದ ನೆಟ್ಟಿಗರು

Published On - 12:32 pm, Fri, 11 March 22