ಅಣ್ಣ ತಂಗಿಯರ ಸಂಬಂಧವೇ ಹಾಗೆ. ಪ್ರೀತಿ ವಿಶ್ವಾದ ಜತೆಗೆ ಸಾಗುವಂಥದ್ದು. ಇದೀಗ ವೈರಲ್ ಆದ ವಿಡಿಯೋದಲ್ಲಿ ಗಮನಿಸುವಂತೆ ಅಣ್ಣ ತಂಗಿಯ ನಡುವಿನ ಪ್ರೀತಿ ವ್ಯಕ್ತವಾಗುತ್ತದೆ. ಅಣ್ಣನ ಬರುವಿಕೆಗಾಗಿ ಕಾಯುತ್ತಿದ್ದ ಪುಟ್ಟ ಕಂದಮ್ಮ ಅಣ್ಣನ ಮುಖ ಕಾಣುತ್ತಿದ್ದಂತೆಯೇ ಓಡಿ ಹೋಗಿದ್ದಾಳೆ. ಹೃದಯಸ್ಪರ್ಶಿ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.
ಫೂಟ್ಪಾತ್ ಮೇಲೆ ಹೆಜ್ಜೆ ಹಾಕುತ್ತಿರುವ ಪುಟ್ಟ ಮಗು, ಅಣ್ಣನನ್ನು ನೋಡುತ್ತಿದ್ದಂತೆಯೇ ಓಡೋಡಿ ಹೋಗಿದ್ದಾಳೆ. ಅಣ್ಣನಿಗೂ ಸಹ ತಂಗಿಯ ಮೇಲಿನ ಪ್ರೀತಿ ಎಷ್ಟಿದೆ ಎಂಬುದು ವಿಡಿಯೋದಲ್ಲಿ ವ್ಯಕ್ತವಾಗಿದೆ. ಮಂಡಿಯೂರಿ ತಂಗಿಯನ್ನು ಅಪ್ಪಿಕೊಂಡಿದ್ದಾನೆ. ಮನ ಮೆಚ್ಚುವಂತಹ ದೃಶ್ಯ ಇದೀಗ ಫುಲ್ ವೈರಲ್ ಆಗಿದೆ.
ಅಣ್ಣನನ್ನು ನೋಡಿದ ಪುಟ್ಟ ಕಂದಮ್ಮ ಓಡುತ್ತಿದ್ದಾಳೆ. ಅವಳ ಖುಷಿಗೆ ಮಿತಿಯೇ ಇಲ್ಲ. ಅಣ್ಣ ಮತ್ತು ತಂಗಿಯ ನಡುವಿನ ಪ್ರೀತಿ ಇಲ್ಲಿ ವ್ಯಕ್ತವಾಗುತ್ತಿದೆ. ಆರಾಧ್ಯ ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ಸ್ ವಿಭಾಗದಲ್ಲಿ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಓರ್ವರು ಕ್ಯೂಟ್ ಎಂದು ಪ್ರತಿಕ್ರಿಯೆ ನೀಡಿದ್ದರೆ ಇನ್ನು ಕೆಲವರು ವಾವ್ ವಿಡಿಯೋ ತುಂಬಾ ಇಷ್ಟವಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ:
Viral Video: ನೀರು ಕಂಡು ಖುಷಿಯಾಗಿ ಆಟವಾಡುತ್ತಾ ಈಜು ಕಲಿತ ನಾಯಿ ಮರಿಗಳ ಕ್ಯೂಟ್ ವಿಡಿಯೋ ವೈರಲ್
Viral Video: ಮನೆ ಬಳಿ ಕಾಣಿಸಿಕೊಂಡ ನಾಗರಹಾವಿಗೆ ಮಾತಿನಲ್ಲೇ ಸಮಾಧಾನ ಹೇಳಿ ವಾಪಾಸು ಕಳುಹಿಸಿದ ಮಹಿಳೆ
(Toddler runs down the footpath to welcome brothers after school video goes viral)