Viral Post: ಬನ್ನಿ.. ಬನ್ನಿ.. ಟಾಮ್ ಮತ್ತು ಜೆರ್ರಿ ಭಾರತಕ್ಕೆ ಬಂದಿದ್ದಾರಂತೆ; ಯಾವೆಲ್ಲಾ ಸ್ಥಳಕ್ಕೆ ಭೇಟಿ ನೀಡಿದ್ರು ಗೊತ್ತಾ? 

ನಿಮಗೊಂದು ವಿಷ್ಯ ಗೊತ್ತಾ? ನಮ್ಮ ಭಾರತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಟಾಮ್ ಮತ್ತು ಜೆರಿ  ನಮ್ಮ ದೇಶಕ್ಕೆ ಪ್ರವಾಸ   ಬಂದಿದ್ದಾರಂತೆ.  ಅಷ್ಟೇ ಅಲ್ಲದೆ ಟಾಮ್ ಮತ್ತು ಜೆರ್ರಿ ಭಾರತೀಯ ಸಂಸ್ಕೃತಿಯ ಉಡುಗೆಯನ್ನು ತೊಟ್ಟು ಫುಲ್ ಮಿಂಚಿಂಗ್ ಅಂತೆ, ಬನ್ನಿ  ಟಾಮ್ ಮತ್ತು ಜೆರ್ರಿ ಯಾವೆಲ್ಲಾ ಸ್ಥಳಗಳಿಗೆ  ಭೇಟಿ ನೀಡಿದ್ದಾರೆ ಎಂಬುದನ್ನು  ನೋಡ್ಕೊಂಡ್ ಬರೋಣ. 

Viral Post: ಬನ್ನಿ.. ಬನ್ನಿ.. ಟಾಮ್ ಮತ್ತು ಜೆರ್ರಿ ಭಾರತಕ್ಕೆ ಬಂದಿದ್ದಾರಂತೆ; ಯಾವೆಲ್ಲಾ ಸ್ಥಳಕ್ಕೆ ಭೇಟಿ ನೀಡಿದ್ರು ಗೊತ್ತಾ? 
ವೈರಲ್​​ ಫೋಟೋ
Updated By: ಅಕ್ಷಯ್​ ಪಲ್ಲಮಜಲು​​

Updated on: Dec 15, 2023 | 12:56 PM

ಒಂದು ಕಾಲದಲ್ಲಿ ಎಲ್ಲರ ಮನಗೆದ್ದಂತಹ ಟಾಮ್ ಆಂಡ್ ಜೆರ್ರಿ  ಬಹುತೇಕ 90ರ ದಶಕದ ಮಕ್ಕಳೆಲ್ಲರ  ಬಲು ಇಷ್ಟದ ಕಾರ್ಟೂನ್ ಅಂತಾನೇ ಹೇಳಬಹುದು. ಆಗಿನ ಕಾಲದ ಮಕ್ಕಳೆಲ್ಲರೂ ಶಾಲೆಯಿಂದ ಮನೆಗೆ ಬಂದ ತಕ್ಷಣ ಬ್ಯಾಗ್ ಬದಿಗಿಟ್ಟು ಟಿವಿ ಆನ್ ಮಾಡಿ ಟಾಮ್ ಆಂಡ್ ಜೆರ್ರಿ ಕಾರ್ಟೂನ್ ಸರಣಿ ವೀಕ್ಷಿಸುತ್ತಿದ್ದರು. ಇಂದಿಗೂ ಅದೆಷ್ಟೋ ಜನರು ತಮ್ಮ ಮೊಬೈಲ್​​ಗಳಲ್ಲಿ ಟಾಮ್ ಆಂಡ್ ಜೆರ್ರಿ ಕಾರ್ಟೂನ್ ವಿಡಿಯೋ ಕ್ಲಿಪ್ಸ್​​ಗಳನ್ನು ನೋಡುತ್ತಿರುತ್ತಾರೆ. ಈಗ ವಿಷ್ಯ ಏನಂದ್ರೆ ನಮ್ಮ ನೆಚ್ಚಿನ ಟಾಮ್ ಮತ್ತು ಜೆರ್ರಿ ಭಾರತಕ್ಕೆ ಪ್ರವಾಸ ಬಂದಿದ್ದಾರಂತೆ. ಅಷ್ಟೇ ಅಲ್ಲ ನಮ್ಮ ಭಾರತೀಯ ಸಂಸ್ಕೃತಿಯಂತೆ ಪಂಚೆಯನ್ನು ತೊಟ್ಟು, ಹಣೆಗೆ ತಿಲಕವನ್ನಿಟ್ಟು ದೇವಾಲಯಗಳಿಗೆ ಭೇಟಿ ನೀಡಿದ್ದಾರಂತೆ, ಅಷ್ಟೇ ಅಲ್ಲದೆ ವಿಶ್ವವಿಖ್ಯಾತ ಮೈಸೂರು ದಸರಾಕ್ಕೂ ಬಂದಿದ್ರಂತೆ.  ಬನ್ನಿ ಹಾಗಾದ್ರೆ ಟಾಮ್ ಮತ್ತು ಜೆರ್ರಿ ಭಾರತದ ಯಾವೆಲ್ಲಾ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ್ದಾರೆಂದು ನೋಡ್ಕೊಂಡ್ ಬರೋಣ.

ಟಾಮ್ ಮತ್ತು ಜೆರ್ರಿ ಭಾರತಕ್ಕೆ ಪ್ರವಾಸ ಬಂದರೆ ಯಾವ ರೀತಿಯಾಗಿ ಮೋಜು ಮಸ್ತಿ ಮಾಡಬಹುದು ಎಂಬುದನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಚಿತ್ರಗಳ ಮೂಲಕ ತೋರಿಸಲಾಗಿದೆ.   ಈ ಮುದ್ದಾದ  ಎಐ  ಚಿತ್ರಗಳನ್ನು   ಇಂದ್ರಾಣಿ (@Anti_Congressi) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, “ನಮ್ಮ ಭಾರತ ದೇಶ ಎಷ್ಟು ಸುಂದರವಾಗಿದೆ ಎಂದರೆ  ಮುದ್ದಾದ ಟಾಮ್ ಮತ್ತು ಜೆರ್ರಿ ಕೂಡಾ ಇಲ್ಲಿಗೆ ಭೇಟಿ ನೀಡಿ, ಸಾಕಷ್ಟು ಮೋಜು ಮಸ್ತಿಯನ್ನು ಮಾಡಿದ್ದಾರೆ, ಬನ್ನಿ ಅವರ ಪ್ರವಾಸದ ಕ್ಷಣಗಳು ಹೇಗಿತ್ತು ಎಂಬುದನ್ನು ನೋಡೋಣ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​​ ಫೋಸ್ಟ್​​​ ಇಲ್ಲಿದೆ:


ಇಂದ್ರಾಣಿ ಅವರು ಟಾಮ್ ಮತ್ತು ಜೆರ್ರಿಯ 10  ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಫೋಟೋಗಳನ್ನು ಹಂಚಿಕೊಂಡಿದ್ದು,  ಮೊದಲನೇ ಮತ್ತು ಎರಡನೇ ಚಿತ್ರದಲ್ಲಿ ಟಾಮ್ ಮತ್ತು ಜೆರ್ರಿ ಭಾರತೀಯ ಸಂಸ್ಕೃತಿಯಂತೆ ಬಿಳಿ ಪಂಚೆಯನ್ನು ತೊಟ್ಟು ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿರುವ ಮುದ್ದಾದ ಎಐ ಚಿತ್ರವನ್ನು ಕಾಣಬಹುದು.    ತಾಜ್ ಮಹಲ್, ಪುರಿ ಜಗನ್ನಾಥ ದೇವಾಲಯ ಹಾಗೂ ಮುಂಬೈ ನಗರಕ್ಕೆ ಭೇಟಿ ನೀಡಿದಂತಹ ಹಾಗೂ  ಟಾಮ್ ಮತ್ತು ಜೆರ್ರಿ ನಮ್ಮ ಮೈಸೂರು ದಸರಾದಲ್ಲಿ ಹೇಗೆಲ್ಲಾ ಮೋಜು ಮಸ್ತಿ ಮಾಡಬಹುದು ಎಂಬಂತಹ ಎಐ ಚಿತ್ರವನ್ನು ಸಹ ಪೋಸ್ಟ್ ಮಾಡಿದ್ದಾರೆ.  ಕೊನೆಯ ಎರಡು ಚಿತ್ರಗಳಲ್ಲಿ  ಟಾಮ್ ಮತ್ತು ಜೆರ್ರಿ  ʼವಿವಾಹ ಭೋಜನವಿದು, ವಿಶಿಷ್ಟ ಭಕ್ಷ್ಯಗಳಿವುʼ  ಎನ್ನುತ್ತಾ ಭಾರತೀಯ ಭಕ್ಷ್ಯಗಳನ್ನು ಸವಿಯುವಂತಹ  ಮುದ್ದಾದ ಚಿತ್ರಗಳನ್ನು  ಸಹ ಕಾಣಬಹುದು.  ಈ ಕ್ರಿಯೇಟಿವ್  ಆರ್ಟಿಫೀಷಿಯಲ್ ಇಂಟೆಲಿಜೆನ್ಸ್ ಫೋಟೋ   ನೆಟ್ಟಿಗರ ಮನಗೆದ್ದಿದೆ.

ಇದನ್ನೂ ಓದಿ:ಈ ರೀತಿ ಹಿಂಸೆ ಕೊಟ್ರೆ ಪಾಪ ಆ ಹಿರಿ ಜೀವ ಹೇಗೆ ತಡೆದುಕೊಳ್ಳುತ್ತೆ ಹೇಳಿ? 

ಡಿಸೆಂಬರ್ 14 ರಂದು ಹಂಚಿಕೊಳ್ಳಲಾದ ಈ ಪೋಸ್ಟ್  260.9K ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼಟಾಮ್ ಮತ್ತು ಜೆರ್ರಿ ಭಾರತೀಯ ಭಕ್ಷ್ಯಗಳನ್ನು ಸವಿಯುತ್ತಿರುವ ದೃಶ್ಯ ತುಂಬಾ ಮುದ್ದಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು “ಟಾಮ್ ಮತ್ತಿ ಜೆರ್ರಿಯನ್ನು ಭಾರತೀಯ ಸಂಸ್ಕೃತಿಯ ಬಟ್ಟೆಯಲ್ಲಿ ನೋಡಲು ಎರಡು ಕಣ್ಣುಗಳು ಸಾಲದುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು  ಟಾಮ್ ಮತ್ತು ಜೆರ್ರಿಯ ಎಲ್ಲಾ AI ಚಿತ್ರಗಳು ತುಂಬಾ ಮುದ್ದಾಗಿದೆ ಎಂದು ಕಮೆಂಟ್ಸ್ ಮಾಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ: