ಕೇರಳ: ಆಂಬ್ಯುಲೆನ್ಸ್ (Ambulance) ಅಥವಾ ಇತರ ತುರ್ತು ಸೇವಾ (Emergency) ವಾಹನಗಳಿಗೆ ದಾರಿ ಮಾಡಿಕೊಡುವುದು ನಮ್ಮ ಕರ್ತವ್ಯ ಮತ್ತು ನಮ್ಮ ದೇಶದಲ್ಲಿ ಇದು ಕಾನೂನಾಗಿಯೂ ಮಾರ್ಪಟ್ಟಿದೆ. ಆಂಬ್ಯುಲೆನ್ಸ್ ಅಥವಾ ಇತರ ತುರ್ತು ಸೇವಾ ವಾಹನಗಳಿಗೆ ದಾರಿ ಮಾಡಿಕೊಡದಿದ್ದರೆ ದಂಡ ವಿಧಿಸಬೇಕಾಗುತ್ತದೆ. ಆದರೆ ಸದ್ಯ ವೈರಲ್ ಆದ ವಿಡಿಯೋದಲ್ಲಿ ಕಾರು (Car) ಚಾಲಕ (Driver) ಆಂಬುಲೆನ್ಸ್ ಬರುತ್ತಿದ್ದರೂ ಅದಕ್ಕೆ ದಾರಿ ಮಾಡಿಕೊಡದೆ ಆಂಬ್ಯುಲೆನ್ಸ್ ಮುಂದೆ ಹೋಗದಂತೆ ಅಡ್ಡಲಾಗಿ ಕಾರು ಚಲಾಯಿಸಿದ್ದಾನೆ.
ಇದನ್ನು ಓದಿ: ನೆಲಗಡಲೆಯನ್ನು ತಿನ್ನಲು ಹರಸಾಹಸ ಪಡುತ್ತಿರುವ ಅಳಿಲು!
ಹೀಗೆ ಕಾರು ವೇಗವಾಗಿ ಮುಂದೆ ಹೋಗುತ್ತಿದ್ದಂತೆ ಚಾಲಕನು ಮುಂಭಾಗದಲ್ಲಿ ಟ್ರಕ್ನ್ನು ಕಂಡಿದ್ದಾನೆ. ನಂತರ ಕಾರು ಚಾಲಕ ಟ್ರಕ್ನ್ನು ಹಿಂದಿಕ್ಕಲು ಪ್ರಯತ್ನಿಸಿದಾಗ, ಅವನು ಕಾರಿನ ಮೇಲೆ ನಿಯಂತ್ರಣವನ್ನು ಕಳೆದುಕೊಂಡನು ಮತ್ತು ಕಾರು ಸ್ಕಿಡ್ ಆಗಿ ರಸ್ತೆಯ ಮಧ್ಯಭಾಗದಲ್ಲಿರುವ ಡಿವೈಡರ್ಗೆ ಡಿಕ್ಕಿ ಹೊಡೆದಿದೆ.
Published On - 8:30 pm, Wed, 29 June 22