ಉತ್ತರ ಪ್ರದೇಶ: ಬಾರಾಬಂಕಿಯ ಫರ್ಮಾನ್(14) ರೈಲ್ವೇ ಹಳಿ ಮೇಲೆ ರೀಲ್ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರುವ ಯುವಕ. ಹಳಿಯ ಮೇಲೆ ರೀಲ್ ಮಾಡಲು ಯುವಕ ಪ್ರಾರಂಭಿಸುತ್ತಿದ್ದಂತೆ ರೈಲು ಬಂದು ಡಿಕ್ಕಿ ಹೊಡೆದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋ ನೋಡಿದಾಕ್ಷಣ ಎದೆಯಲ್ಲಿ ನಡುಕ ಹುಟ್ಟುವುದಂತೂ ಖಂಡಿತಾ. ಸಾವಿಗೆ ರೀಲ್ಸ್ ಕಾರಣ ಎಂಬುದೇ ಆಘಾತಕಾರಿ.
tw // disturbing
Barabanki: A teenager Farmaan (14) who was purportedly making a video for Instagram reels along the railway tracks was kiIIed when he was struck by a running train. pic.twitter.com/Ysxl895ABD
— زماں (@Delhiite_) September 30, 2023
ಉತ್ತರ ಪ್ರದೇಶದ ಜಹಾಂಗೀರಾಬಾದ್‌ನ ತೇರಾ ದೌಲತ್‌ಪುರ ನಿವಾಸಿ ಮುನ್ನಾ ಅವರ 14 ವರ್ಷದ ಮಗ ಫರ್ಮಾನ್ ಎಂದು ಗುರುತಿಸಲಾಗಿದೆ. ಅವನು ತನ್ನ ಸ್ನೇಹಿತರಾದ ಶುಐಬ್, ನಾದಿರ್ ಮತ್ತು ಸಮೀರ್ ಜೊತೆ ರೀಲ್ಸ್ ಮಾಡಲು ಹೋಗಿರುವುದು ತಿಳಿದುಬಂದಿದೆ. ಆದರೆ, ಫರ್ಮಾನ್ ದಾಮೆದರ್‌ಪುರ ಗ್ರಾಮದ ಪಕ್ಕದ ರೈಲ್ವೆ ಕ್ರಾಸಿಂಗ್ ಬಳಿ ರೈಲು ಹಳಿಗಳ ಬಳಿ ನಿಂತು ರೀಲ್ ಮಾಡಲು ತಯಾರಿ ನಡೆಸುತ್ತಿದ್ದಂತೆ ವೇಗವಾಗಿ ಬಂದ ರೈಲು ಅವನಿಗೆ ಡಿಕ್ಕಿ ಹೊಡೆದು ವೇಗದ ರಭಸಕ್ಕೆ ಆತನನ್ನು ಸ್ಪಲ್ಪ ದೂರದ ವರೆಗೆ ಎಳೆದುಕೊಂಡು ಹೋಗಿದೆ.
ಇದನ್ನೂ ಓದಿ: ಶಾಲೆಯಲ್ಲೇ ಶಿಕ್ಷಕರ ರೀಲ್ಸ್, ಇನ್ಸ್ಟಾಗ್ರಾಮ್ನಲ್ಲಿ ಫಾಲೋ ಮಾಡುವಂತೆ ವಿದ್ಯಾರ್ಥಿಗಳಿಗೆ ಒತ್ತಡ
ವರದಿಗಳ ಪ್ರಕಾರ, ರೈಲಿನ ವೇಗದ ರಭಸಕ್ಕೆ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತದೇಹವನ್ನು ಹತ್ತಿರದ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಧರ್ಮೇಂದ್ರ ಸಿಂಗ್ ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: