Transman Pregnancy: ದೇಶದಲ್ಲೇ ಮೊದಲ ಬಾರಿಗೆ ತೃತೀಯಲಿಂಗಿ​ ಗರ್ಭಧಾರಣೆ! ಇಲ್ಲಿದೆ ಫೋಟೋ

ದೇಶದ ಮೊದಲ ಟ್ರ್ಯಾನ್ಸ್​ಜೆಂಡರ್​ ಗರ್ಭಧಾರಣೆ ಪಡೆದಿದ್ದಾರೆ. ಅಂದರೆ ಮೊದಲ ಬಾರಿಗೆ ದೇಶದಲ್ಲಿ ಮಂಗಳಮುಖಿಯರು ಗರ್ಭಧಾರಣೆ ಮಾಡಿಕೊಂಡು, ಫೋಟೋ ಶೂಟ್ ಮಾಡಿಕೊಂಡಿದ್ದಾರೆ.

Transman Pregnancy: ದೇಶದಲ್ಲೇ ಮೊದಲ ಬಾರಿಗೆ ತೃತೀಯಲಿಂಗಿ​ ಗರ್ಭಧಾರಣೆ! ಇಲ್ಲಿದೆ ಫೋಟೋ
Transman Pregnancy

Updated on: Feb 02, 2023 | 2:58 PM

ಮಂಗಳಮುಖಿಯೊಬ್ಬರು ಗರ್ಭ ಧರಿಸಿರುವ (Transman Pregnancy) ಘಟನೆಯೊಂದು ಕೇರಳದಲ್ಲಿ ನಡೆದಿದೆ. ಗರ್ಭಧಾರಣೆ ಎಂಬುದು ಒಂದು ವಿಶೇಷ ಶಕ್ತಿ, ಅದು ಎಲ್ಲರಿಗೂ ಸಿಗಲು ಸಾಧ್ಯವಿಲ್ಲ, ಹೆಣ್ಣು ಮಾತ್ರ ಈ ಭಾಗ್ಯವನ್ನು ಪಡೆದಿರುತ್ತಾಳೆ. ಆದರೆ ಈಗ ತಂತ್ರಜ್ಞಾನ ಮುಂದುವರಿಕೆಯಿಂದ ಯಾರು ಬೇಕಾದರೂ ಗರ್ಭಧಾರಣೆ ಮಾಡಿಸಿಕೊಳ್ಳಬಹುದು. ಜಗತ್ತಿನಲ್ಲಿ ಇಂತಹ ಅನೇಕ ಚಿತ್ರ- ವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಜಗತ್ತು ಇಂತಹ ವಿಸ್ಮಯ ವಿಚಾರಗಳಿಗೆ ಸಾಕ್ಷಿಯಾದ ಉದಾಹರಣೆಗಳು ಇದೆ, ಆದರೆ ಇಂತಹದೇ ಒಂದು ವಿಚಿತ್ರ ಘಟನೆಯೊಂದು ನಡೆದಿದೆ. ಆದರೆ ಇಲ್ಲೊಂದು ಹೆಣ್ಣು ಅಲ್ಲದ, ಗಂಡು ಅಲ್ಲದ ತೃತೀಯ ಲಿಂಗಿಗಳು ( ಮಂಗಳಮುಖಿ)ಗರ್ಭಧಾರಣೆ ಆಗಿರುವ ಘಟನೆಯೊಂದು ನಡೆದಿದೆ.

ಮಂಗಳಮುಖಿ ಅಂದರೆ ಅವರು ಕೂಡ ಮನುಷ್ಯರೇ, ಆದರೆ ಅವರು ಈ ಸಮಾಜದಲ್ಲಿ ಬೇರೆ ರೀತಿಯಲ್ಲೇ ನೋಡುತ್ತಾರೆ. ಅವರಿಗೂ ಕೂಡ ಒಂದು ಸುಂದರ ಜೀವನ ಇದೆ, ಅವರು ಕೂಡ ಈ ಸಮಾಜದಲ್ಲಿ ಎಲ್ಲರಂತೆ ಸಮಾನವಾಗಿ ಬದುಕಬಹುದು. ಹೌದು ಮನುಷ್ಯ ಸಾಮಾಜಿಕ ಜೀವಿ, ಎಲ್ಲರೂ ಬದುಕು ಮತ್ತು ತಮ್ಮ ಸ್ವತ ಜಗತ್ತನ್ನು ಸೃಷ್ಟಿಸಿಕೊಳ್ಳವ ಹಕ್ಕು ಇದೆ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ದೇಶದ ಮೊದಲ ಟ್ರ್ಯಾನ್ಸ್​ಜೆಂಡರ್​ ಗರ್ಭಧಾರಣೆ (Transman Pregnancy) ಪಡೆದಿದ್ದಾರೆ. ಅಂದರೆ ಮೊದಲ ಬಾರಿಗೆ ದೇಶದಲ್ಲಿ ಮಂಗಳಮುಖಿಯರು ಗರ್ಭಧಾರಣೆ ಮಾಡಿಕೊಂಡು, ಫೋಟೋ ಶೂಟ್ ಮಾಡಿಕೊಂಡಿದ್ದಾರೆ. ಜಿಯಾ ಪಾವಲ್ ಅವರು ಪುರುಷ ಸಂಗಾತಿಯ ಮೆಟರ್ನಿಟಿ ಫೋಟೋಶೂಟ್ ಚಿತ್ರಗಳನ್ನು ಇನ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಅವಮಾನಿಸಿದ ಸಮಾಜದಲ್ಲೇ ಶಿಕ್ಷಕಿಯಾಗಿ ನೇಮಕವಾದ ರಾಯಚೂರಿನ ಮಂಗಳಮುಖಿ, ಸಾಧನೆಗೆ ಜನರಿಂದ ಮೆಚ್ಚುಗೆ

ದೇಶದಲ್ಲಿ ಮೊದಲ ಬಾರಿಗೆ ಮಂಗಳಮುಖಿಯೊಬ್ಬರು ಮಗುವಿಗೆ ಜನ್ಮ ನೀಡಲಿದ್ದಾರೆ. ಆಹದ್ ಫಾಜಿಲ್ ಮತ್ತು ಜಿಯಾ ಪಾವಲ್ ದಂಪತಿಯ ಪುರುಷ ಸಂಗಾತಿ ಜಹದ್ ಫಾಜಿಲ್ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ಎಂಟು ತಿಂಗಳ ಗರ್ಭಿಣಿಯಾಗಿರುವ ಜಹಾದ್ ಅವರು ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದಂಪತಿಗಳ ಮೆಟರ್ನಿಟಿಯ ಫೋಟೋಶೂಟ್ ಚಿತ್ರಗಳನ್ನು ಭಾವನಾತ್ಮಕ ಶೀರ್ಷಿಕೆಯಡಿಯಲ್ಲಿ ಜಿಯಾ ಪಾವಲ್ ತಮ್ಮ ಇನ್ಟಾಗ್ರಾಮ್ ಪೋಸ್ಟ್ ಮಾಡಿಕೊಂಡಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ