ಸಮಾಜದಲ್ಲಿ ಜನಸಾಮಾನ್ಯರು ಮಾಡುವ ತಪ್ಪನ್ನೇ ತೋರಿಸುವ ಇಂಥ ಕಾಲಘಟ್ಟದಲ್ಲಿ ಶಿಕ್ಷಣ ಸಂಸ್ಥೆಗಳೇ ತಪ್ಪು ಮಾಡಿದರೆ ಹೇಗೆ? ಒಂದೊಮ್ಮೆ ಶಿಕ್ಷಣ ಸಂಸ್ಥೆಗಳು ತಪ್ಪುಗಳನ್ನು ಮಾಡಿದರೆ ಅದರಲ್ಲೂ ವ್ಯಾಕರಣಗಳಲ್ಲಿ ತಪ್ಪುಗಳನ್ನು ಮಾಡಿದರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಅದರಂತೆ ಪಾಟ್ನಾ ವಿಶ್ವವಿದ್ಯಾಲಯ(Patna University)ದ ಸಂಶೋಧನಾ ವಿದ್ವಾಂಸರು ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಈ ಸುತ್ತೋಲೆ ವ್ಯಾಕರಣ ದೋಷಗಳಿಂದ ಕೂಡಿದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಅದರ ಫೋಟೋ ವೈರಲ್ (Viral Photo) ಆಗುತ್ತಿದೆ.
ಇದನ್ನೂ ಓದಿ: ಇದು ಸರಿಯಲ್ಲ: ಉತ್ತರ ಪ್ರದೇಶ ಸರ್ಕಾರದ ಬುಲ್ಡೋಜರ್ ಆಟಾಟೋಪಕ್ಕೆ ಅಲಹಾಬಾದ್ ಹೈಕೋರ್ಟ್ ನಿವೃತ್ತ ಸಿಜೆ ಆಕ್ಷೇಪ
ಮುದ್ರಿತ ಸುತ್ತೋಲೆಗೆ ಜೂನ್ 10 ರಂದು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರು ಸಹಿ ಹಾಕಿ ಹೊರಡಿಸಿದ್ದಾರೆ. ಸುತ್ತೋಲೆಯಲ್ಲಿರುವಂತೆ “ಪಾಟ್ನಾ ವಿಶ್ವವಿದ್ಯಾನಿಲಯದ ಉಪ ನೋಂದಣಾಧಿಕಾರಿಗೆ ಮೌಖಿಕ ಸಲಹೆಯಂತೆ, ಎಲ್ಲಾ ಪಿಎಚ್‌ಡಿ ಸಂಶೋಧನಾ ವಿದ್ವಾಂಸರು ಹಾಜರಾತಿ ರಿಜಿಸ್ಟರ್‌ನಲ್ಲಿ ಹಾಜರಾತಿಯನ್ನು ಗುರುತಿಸಬೇಕು. ಆದ್ದರಿಂದ ಎಲ್ಲಾ ಸಂಶೋಧನಾ ವಿದ್ವಾಂಸರು ಹಾಜರಾತಿ ರಿಜಿಸ್ಟರ್‌ನಲ್ಲಿ ಗುರುತು ಸಹಿ ಮಾಡಬೇಕು ಇಲ್ಲದಿದ್ದರೆ ಹಾಜರಾತಿ ರಿಜಿಸ್ಟರ್‌ನಲ್ಲಿ ಗೈರುಹಾಜರಿ ಗುರುತು ಹೊಂದಿರಬೇಕು” ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಬಿಹಾರದ ಕಿಶನ್‌ಗಂಜ್ ಪ್ರದೇಶದಲ್ಲಿ ಸಾವನ್ನಪ್ಪಿದ ಚಿಕ್ಕಮಗಳೂರಿನ ಯೋಧ ಗಣೇಶ್
ಈ ರೀತಿ ಬರೆದ ಸುತ್ತೋಲೆಯನ್ನು ಗಮನಿಸಿದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಯುವ ವ್ಯವಹಾರಗಳ ಕಾರ್ಯದರ್ಶಿ ಸಂಜಯ್ ಕುಮಾರ್ ಅವರು ಸುತ್ತೋಲೆಯ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ”ಪಾಟ್ನಾ ವಿಶ್ವವಿದ್ಯಾನಿಲಯದ ವಿಭಾಗದ ಮುಖ್ಯಸ್ಥರು ಹೊರಡಿಸಿದ ಸೂಚನೆ ಇಲ್ಲಿದೆ. ಬಳಸಲಾದ ವ್ಯಾಕರಣ ಮತ್ತು ವಾಕ್ಯರಚನೆಯು ಪ್ರಾಧ್ಯಾಪಕರನ್ನು ಭಯಭೀತಗೊಳಿಸುತ್ತದೆ. ಅದು ಏನೇ ಇರಲಿ, ಅಸಡ್ಡೆ ಅಥವಾ ಅಸಮರ್ಥತೆ ನಮ್ಮ ಉನ್ನತ ಶಿಕ್ಷಣದ ಸ್ಥಿತಿಯನ್ನು ತಿಳಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.
here is a notice issued by a head of department of patna university.the grammar and syntax used is appalling for a professor.whatever it may be,carelessness or incompetence,conveys the state of our higher education.@BiharEducation_ @VijayKChy @DipakKrIAS pic.twitter.com/IBlSeS1wr5
— Sanjay Kumar (@sanjayjavin) June 12, 2022
ಇದನ್ನೂ ಓದಿ: Trending: ವಿಶ್ವದ ಅತಿ ದೊಡ್ಡ ಚಿಕನ್ ನಗೆಟ್ ತಯಾರಿಸಿದ ಬಾಣಸಿಗ, ಹೇಗೆ ತಯಾರಿಸಿದ್ದಾರೆ ನೋಡಿ
ಸಂಜಯ್ ಕುಮಾರ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡ ಸುತ್ತೋಲೆಯನ್ನು ನೋಡಿದ ನೆಟ್ಟಿಗರು ಆಶ್ವರ್ಯಗೊಂಡಿದ್ದಾರೆ. ಬಳಕೆದಾರರೊಬ್ಬರು ”ಇದು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಿಂದ ಬಂದಿದೆ ಎಂದು ನಂಬಲು ಸಾಧ್ಯವಿಲ್ಲ” ಎಂದಿದ್ದಾರೆ. ”ಬಿಹಾರದಲ್ಲಿ ಶಿಕ್ಷಣದ ಕಳಪೆ ಸ್ಥಿತಿಯು ಎಲ್ಲರಿಗೂ ಕಳವಳಕಾರಿ ವಿಷಯವಾಗಿದೆ” ಎಂದು ಮತ್ತೊಬ್ಬರು ಬರೆದಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:10 am, Mon, 13 June 22