Viral Video: ಜಿಟಿಜಿಟಿ ಮಳೆಯಲಿ ಪುಟ್ಟ ಮಗುವಿನ ಆಟ, ನಿಮ್ಮ ಬಾಲ್ಯವನ್ನೂ ನೆನಪಿಸುವಂತಿದೆ ಈ ವೈರಲ್ ವಿಡಿಯೋ

ಜಿಟಿಜಿಟಿ ಮಳೆಯಲ್ಲಿ ಮಗುವಿನ ತುಂಟಾಟದ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದರೆ ನಿಮಗೂ ನಿಮ್ಮ ಬಾಲ್ಯದ ಜೀವನ ನೆನಪಾಗುವುದರ ಜೊತೆಗೆ ಮುಖದಲ್ಲಿ ಮುಗುಳ್ನಗೆ ಬೀರುವುದು ಖಂಡಿತ.

Viral Video: ಜಿಟಿಜಿಟಿ ಮಳೆಯಲಿ ಪುಟ್ಟ ಮಗುವಿನ ಆಟ, ನಿಮ್ಮ ಬಾಲ್ಯವನ್ನೂ ನೆನಪಿಸುವಂತಿದೆ ಈ ವೈರಲ್ ವಿಡಿಯೋ
ವೈರಲ್ ಆದ ಮಗು
Edited By:

Updated on: Jun 17, 2022 | 11:47 AM

ಮಕ್ಕಳಿಗೆ ನೀರಿನಲ್ಲಿ ಆಡುವುದೆಂದರೆ ಬಲು ಇಷ್ಟ. ಮನೆಯಲ್ಲಿ ಬಕೆಟ್​ನಲ್ಲಿ ನೀರಿಟ್ಟರೆ ಸಾಕು ಪೆಟ್ಟು ತಿಂದರೂ  ಪದೇ ಪದೇ ಅಲ್ಲಿಗೆ ಹೋಗಿ ನೀರನ್ನು ಚಲ್ಲಿ ಬಟ್ಟೆಯೆಲ್ಲಾ ಒದ್ದೆ ಮಾಡಿಕೊಂಡು ಮಗು ಆಡುವುದನ್ನು ಕಾಣಬಹುದು. ಅದಾಗ್ಯೂ, ಸ್ನಾನಕ್ಕೆ ಕರೆದುಕೊಂಡು ಹೋಗುವಾಗ ಬಕೆಟ್ ಹಿಡಿದುಕೊಂಡು ನೀರಿನಲ್ಲಿ ಆಡುವುದನ್ನು ನೋಡಬಹುದು. ಇನ್ನೂ ಕೆಲವು ಮಕ್ಕಳು ಮಳೆ ಬಂದಾಗ ಓಡಿ ಹೋಗಿ ಮಳೆ ನೀರಿನಲ್ಲಿ ಆಡುತ್ತಾರೆ. ಅದರಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮುದ್ದಾದ ಮಗುವೊಂದು ಜಿಟಿಜಿಟಿ ಮಳೆ(Rain)ಯಲ್ಲಿ ಆಡುವುದು ಈಗ ವೈರಲ್ ಆಗಿದೆ. ವಿಡಿಯೋ (Video) ವೀಕ್ಷಿಸಿದ ನೆಟ್ಟಿಗರು, ಮಗು (child)ವನ್ನು ಕೊಂಡಾಡಿದ್ದಾರೆ, ಮಗಿವಿನ ತುಂಟಾಟಕ್ಕೆ ಮರುಳಾಗಿದ್ದಾರೆ.

ವೈರಲ್ ವಿಡಿಯೋದಲ್ಲಿ, ಸೈಕಲ್ ಪಾರ್ಕಿಂಗ್​ ಸ್ಥಳದಂತೆ ಕಾಣುವ ಜಾಗದಲ್ಲಿ ಜಿಟಿಜಿಟಿ ಮಳೆಯಾಗುತ್ತಿದ್ದು ಮಳೆ ನೀರು ತುಂಬಿದ ರಸ್ತೆಗೆ ರೈನ್​ ಕೋಟ್​ ಧರಿಸಿಕೊಂಡು ಬಂದು ನಿಂತ ಮುದ್ದಾದ ಬಾಲಕ ರಸ್ತೆ ಮೇಲೆ ನಿಂತಿದ್ದ ನೀರನ್ನು ಕೈಯಲ್ಲಿ ಸ್ಪರ್ಶಿಸಿ ಕೆಲವೇ ಕ್ಷಣಗಳಲ್ಲಿ ನೀರಿನಲ್ಲಿ ಅಂಗಾತವಾಗಿ ಮಲಗಿದೆ.

ಇದನ್ನೂ ಓದಿ: Viral Video: ಬ್ಯೂಟಿಫುಲ್ ಬೆಡಗಿಯರ ‘ಜಲೇಬಿ ಬೇಬಿ’ ಡಾನ್ಸ್ ವಿಡಿಯೋ ಸಖತ್ ವೈರಲ್

Buitengebieden ಎಂಬವರು ನೆದರ್ಲ್ಯಾಂಡ್​ನಲ್ಲಿ ಚಿತ್ರೀಕರಿಸಲಾದ ಆರು ಸೆಕೆಂಡ್​ಗಳ ವಿಡಿಯೋ ಕ್ಲಿಪ್ ಅನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು,  23 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಜೊತೆಗೆ 1.2 ಮಿಲಿಯನ್ ಲೈಕ್ಸ್​ಗಳನ್ನು ಪಡೆದುಕೊಂಡಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಮಕ್ಕಳ ತುಂಟಾಟಗಳನ್ನು ನೋಡುತ್ತಾ ಕುಳಿತವರಿಗೆ ತಮ್ಮ ಬಾಲ್ಯದ ಜೀವನ ಮರಳಿ ನೆನಪಾಗುವುದು ಸಹಜ. ಹಲವಾರು ಟ್ವಿಟರ್ ಬಳಕೆದಾರರು ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದು, ಕೆಲವರು ತಮ್ಮ ಬಾಲ್ಯದ ಜೀವನವನ್ನು ನೆನಪಿಸಿಕೊಂಡರು. ಬಿಡುವಿಲ್ಲದ ಮತ್ತು ಒತ್ತಡದ ದೈನಂದಿನ ಜೀವನದಲ್ಲಿ ಬಾಲ್ಯವು ಹೇಗೆ ಮುಖ್ಯವಾಗಿದೆ ಎಂಬುದನ್ನು ನೆಟ್ಟಿಗರೊಬ್ಬರು ನೆನಪಿಸಿಕೊಂಡಿದ್ದಾರೆ.